ಪಕ್ಷದ ಬಗ್ಗೆ ಮಾತನಾಡುವ ಶಕ್ತಿ ಮುಂದಿನ ದಿನಗಳಲ್ಲಿ ಎಲ್ಲಾ ಮುಖಂಡರಲ್ಲಿ ಹಾಗೂ ಕಾರ್ಯಕರ್ತರಲ್ಲಿ ಬರಬೇಕು

Advt_Headding_Middle

 

ಸರ್ಕಾರದ ವೈಫಲ್ಯತೆ ಗಳನ್ನು ಪ್ರತಿಯೊಂದು ಗ್ರಾಮ ಗ್ರಾಮದ ಜನತೆಗೆ ಮುಟ್ಟುವಂತೆ ಆಗಬೇಕು

ಕೆಪಿಸಿಸಿ ಮಾಧ್ಯಮ ಉಸ್ತುವಾರಿ ರಾಜು ಗೌಡ

ಪಕ್ಷದ ಬಗ್ಗೆ ಮಾತನಾಡುವ ಶಕ್ತಿಯನ್ನು ಪಕ್ಷದ ಪ್ರತಿಯೊಬ್ಬ ಮುಖಂಡ ಮತ್ತು ಕಾರ್ಯಕರ್ತ ಮುಂದಿನ ದಿನಗಳಲ್ಲಿ ಪಡೆಯಬೇಕಾಗಿದೆ ಎಂದು ಕೆಪಿಸಿಸಿ ಮೈಸೂರು ವಿಭಾಗದ ಮಾಧ್ಯಮ ಉಸ್ತುವಾರಿ ರಾಜುಗೌಡ ಇಂದು ಸುಳ್ಯ ಸದರ್ನ್ ರೆಸಿಡೆನ್ಸಿ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪಕ್ಷ ಸಂಘಟನೆಗೆ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳು ಅತಿ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರವರು ಪಕ್ಷ ಸಂಘಟನೆ ತಳಮಟ್ಟದಿಂದಲೇ ಬರಬೇಕೆಂಬ ಉದ್ದೇಶದಿಂದ ಪ್ರತಿಯೊಂದು ಜಿಲ್ಲೆ ಜಿಲ್ಲೆಗೂ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಉಸ್ತುವಾರಿ ಗಳನ್ನು ನೇಮಿಸಲಾಗಿದ್ದು ಅವರ ಆದೇಶದ ಮೇರೆಗೆ ರಾಜ್ಯದಾದ್ಯಂತ ಪಕ್ಷದ ಮುಖಂಡರುಗಳು ಕಾರ್ಯಕರ್ತರುಗಳು ಪಕ್ಷದ ಬಗ್ಗೆ ಮಾತನಾಡುವ ಶಕ್ತಿಯನ್ನು ತುಂಬಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಹಿಂದೆ ಪಕ್ಷದ ಬಗ್ಗೆ ಏನಾದರೂ ಮಾತನಾಡಲು ಇದ್ದರೆ ಅದು ಕೇವಲ ನಿಯೋಜಿಸಿರುವ ವಕ್ತಾರರಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಪ್ರತಿಯೊಂದು ಜಿಲ್ಲೆಯಲ್ಲಿ ಪಕ್ಷದ ಮುಖಂಡರುಗಳು, ಹಾಗೂ ಕಾರ್ಯಕರ್ತರುಗಳಿಗೆ ತರಬೇತಿಗಳನ್ನು ನೀಡಿ ಪಕ್ಷದ ಬಗ್ಗೆ ಮಾತನಾಡುವ ಸಂದರ್ಭ ಬಂದಾಗ ಸ್ಥಳೀಯ ಪಕ್ಷದ ಶಾಸಕರು, ಸಂಸದರು, ಬ್ಲಾಕ್ ಅಧ್ಯಕ್ಷರುಗಳು ಚರ್ಚಿಸಿ ಪಕ್ಷದ ಬಗ್ಗೆ ಹೇಳಿಕೆಯನ್ನು ನೀಡುವ ಜವಾಬ್ದಾರಿಯನ್ನು ನೀಡಲಾಗುತ್ತದೆ ಎಂದು ಹೇಳಿದರು.

ಈಗಿನ ಸರ್ಕಾರದ ವೈಫಲ್ಯತೆಗಳು ಬಹಳಷ್ಟಿದ್ದು ಇದನ್ನು ನಮ್ಮ ಕಾರ್ಯಕರ್ತರ ಮೂಲಕ ಗ್ರಾಮ ಗ್ರಾಮಕ್ಕೆ ತಿಳಿಸುವ ಕಾರ್ಯ ಮುಂದಿನ ದಿನಗಳಲ್ಲಿ ನಡೆಯಬೇಕಾಗಿದೆ. ಅದರೊಂದಿಗೆ ರಾಜ್ಯ ಅಧ್ಯಕ್ಷರು ಮಾಹಿತಿ ನೀಡಿರುವಂತೆ ಯಾವುದೇ ವ್ಯಕ್ತಿಗಳನ್ನು ವೈಯುಕ್ತಿಕವಾಗಿ ನಿಂದಿಸಬಾರದು. ಯಾವುದೇ ಪಕ್ಷದ ವೈಫಲ್ಯತೆಗಳ ಬಗ್ಗೆ ಮಾತನಾಡುವಾಗ ಅದಕ್ಕೆ ಬೇಕಾದ ಆಧಾರಗಳನ್ನು ಸಂಗ್ರಹಿಸಿ ಮಾತನಾಡಬೇಕು ಎಂಬ ಆದೇಶವನ್ನು ಪ್ರತಿಯೊಬ್ಬ ಮುಖಂಡರುಗಳು ಕಾರ್ಯಕರ್ತರುಗಳು ಪಾಲಿಸಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೋವಿಡ್ ಸಂದರ್ಭ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಜನತೆಗೆ ಯಾವುದೇ ಪರಿಹಾರಗಳನ್ನು ನೀಡದೆ, ಕೇವಲ ಘೋಷಣೆಯನ್ನು ಮಾಡಿ ಅದರ ಹಿಂದೆ ಜನತೆಯನ್ನು ದಾರಿತಪ್ಪಿಸುವ ಅಂತ ಕೆಲಸಗಳನ್ನು ಮಾಡುತ್ತಿದೆ. ಆಟೋ ಚಾಲಕರಿಗೆ ಮತ್ತು ವಾಹನ ಚಾಲಕರಿಗೆ .3 ಸಾವಿರ ರೂಪಾಯಿಗಳ ಅನುದಾನವನ್ನು ಘೋಷಿಸಿ ಸೈಬರ್ ಗಳಿಗೆ ತೆರಳಿ ಆನ್ಲೈನ್ ಮೂಲಕ ಅರ್ಜಿಗಳನ್ನು ಹಾಕಿ ಅದರ ಫಲವನ್ನು ಪಡೆಯುವಂತೆ ಸೂಚಿಸಿದರೆ, ಬಡವರಾಗಿರುವ ಚಾಲಕರು, ಕೆಲವು ಅವಿದ್ಯಾವಂತರು ಯಾವ ರೀತಿಯಲ್ಲಿ ಆನ್ಲೈನ್ ಮೂಲಕ ಅರ್ಜಿ ಗಳನ್ನು ಹಾಕಿ ಅನುದಾನವನ್ನು ಪಡೆದುಕೊಳ್ಳಬಹುದು. ಈ ರೀತಿಯಾಗಿ ಜನರನ್ನು ದಾರಿತಪ್ಪಿಸುವ ಕೆಲಸಗಳನ್ನು ಮಾತ್ರ ಸರ್ಕಾರ ಮಾಡುತ್ತಿದೆ ಎಂದು ಟೀಕಿಸಿದರು.

ಪತ್ರಿಕಾಗೋಷ್ಠಿಯನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿಸಿ ಜಯರಾಮ್, ಕೆಪಿಸಿಸಿ ಮಾಜಿ ಕಾರ್ಯದರ್ಶಿಗಳಾದ ಭರತ್ ಮುಂಡೋಡಿ, ಎಂ ವೆಂಕಪ್ಪಗೌಡ, ಟಿ.ಎಂ ಶಹಿದ್, ಪಕ್ಷದ ಮುಖಂಡರುಗಳಾದ ಜಿಕೆ ಹಮೀದ್, ತಾಜ್ ಮಹಮ್ಮದ್, ಶರೀಫ್ ಕಂಠಿ, ಧರ್ಮಪಾಲ ಕೊಯಿಂಗಾಜೆ, ರಿಯಾಜ್ ಕಲ್ಲುಗುಂಡಿ, ಕೀರ್ತನ್ ಕೊಡಪ್ಪಾಲ, ಎಸ್ ಕೆ ಹನೀಫಾ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.