ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿರೋಧಿಸಿಸುಳ್ಯದಲ್ಲಿ ಕಾಂಗ್ರೆಸ್ ಪ್ರತಿಭಟನೆ

Advt_Headding_Middle

100  ನಾಟ್‌ ಔಟ್ ರಸ್ತೆಯಲ್ಲಿ ಬ್ಯಾಟ್ ಬೀಸಿದ ನಾಯಕರು

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಂದು ಸುಳ್ಯದಲ್ಲಿ ನಡೆಯಿತು.
ಸುಳ್ಯದ ಖಾಸಗಿ ಬಸ್ ನಿಲ್ದಾಣದ ಎದುರು ರಸ್ತೆಯ ಬದಿಯಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮರು, ದೇಶದಲ್ಲಿ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಾಗಿ ಜನರು ಸಂಕಷ್ಟದಲ್ಲಿದ್ದಾರೆ. ಆದರೆ ಕೇಂದ್ರದ ಎನ್‌ಡಿಎ ನೇತೃತ್ವದ ಸರಕಾರ ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಅಗ್ತಯ ವಸ್ತುಗಳ ಬೆಲೆಯನ್ನು ದಿನದಿಂದ ದಿನಕ್ಕೆ ಏರಿಸಿ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿದೆ. ಈ ಪರಿಸ್ಥಿತಿಯನ್ನು ನೋಡುವಾಗ ಕೊರೋನಾದಿಂದ ಬೆಲೆ ಏರಿಕೆಯೇ ಭೀಕರ ಎಂದು ಗೋಚರಿಸುತ್ತದೆ ಎಂದು ಹೇಳಿದರು.
ಕೆಪಿಸಿಸಿ ಮಾಜಿ ಕಾರ್ಯದರ್ಶಿ ಭರತ್ ಮುಂಡೋಡಿಯವರು ಮಾತನಾಡಿ, ಭಾರತದ ಇತಿಹಾಸದಲ್ಲಿ ಸ್ವಾತಂತ್ರ್ಯಾನಂತರ ಪೆಟ್ರೋಲ್ ದರ ೧೦೦ ರೂ. ಏರಿರುವ ಸನ್ನಿವೇಶವೇ ಇಲ್ಲ. ಪೆಟ್ರೋಲ್‌ಗೆ ಬೆಲೆ ಹೆಚ್ಚಾಯಿತೆಂದು ಡೀಸೆಲ್ ವಾಹನ ಬಂತು. ಆದರೆ ಇಂದು ಡೀಸೆಲ್ ಬೆಲೆಯನ್ನು ಕೂಡಾ ಪೆಟ್ರೋಲ್ ಬೆಲೆಗೆ ಸಮಾನಾಗಿ ಏರಿಸಿ ಗೂಡ್ಸ್ ವಾಹನಗಳಲ್ಲಿ ಸರಕು ಸಾಮಾನು ಸಾಗಾಟವು ಕಷ್ಟವಾಗುತ್ತಿದೆ. ಬೆಲೆ ಏರಿಕೆಯಿಂದಾಗಿ ಜನರ ಜೀವನೋಪಾಯ ಕಷ್ಟವಾಗಿದೆ. ಕೊರೋನಾದಂತಹ ಸಂಕಷ್ಟದ ಕಾಲದಲ್ಲಿ ಜನರ ಜೊತೆಗಿರಬೇಕಾದ ಸರಕಾರ ಬೆಲೆ ಏರಿಕೆ ಮಾಡಿ ಜನರನ್ನು ಸಂಕಷ್ಟಕ್ಕೆ ದೂಡುತ್ತಿರುವುದು ಖಂಡನೀಯ.ಬಿಜೆಪಿ ಸರಕಾರದ ಈ ಕ್ರಮವನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದು ಹೇಳಿದರು.
ಡಿಸಿಸಿ ಉಪಾಧ್ಯಕ್ಷ ಎನ್. ಜಯಪ್ರಕಾಶ್ ರೈ ಮಾತನಾಡಿ, ನೋಟ್ ಬ್ಯಾನ್ ಮಾಡಿ ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಿದ ಕೇಂದ್ರದ ಬಿಜೆಪಿ ಸರ್ಕಾರ ನಂತರದ ದಿನಗಳಲ್ಲಿ ಒಂದರ ಮೇಲೆ ಒಂದರಂತೆ ಜನರಿಗೆ ಸಂಕಷ್ಟಗಳನ್ನು ಕೊಡುತ್ತಾ ಬಂದಿದೆ. ಬಡವರಿಗೆ ೧೫ ಲಕ್ಷ ನೀಡುವ ಮಾತನಾಡಿದ ಮೋದಿಯವರು ಇಂದು ಚಕಾರವೆತ್ತುತ್ತಿಲ್ಲ. ಸ್ವಿಸ್ ಬ್ಯಾಂಕ್ ನಿಂದ ಕಪ್ಪುಹಣ ತರುತ್ತೇನೆಂದು ಸುಳ್ಳು ಹೇಳಿದರು. ದೇಶದ ದೊಡ್ಡ ದೊಡ್ಡ ಉದ್ದಿಮೆಗಳನ್ನು ಖಾಸಗೀಕರಣಗೊಳಿಸಿದ ನಂತರ ಇದೀಗ ಪೆಟ್ರೋಲ್ ಬೆಲೆಯನ್ನು ಸೆಂಚುರಿಯತ್ತ ಕೊಂಡೊಯ್ದ ಸಾಧನೆಯನ್ನು ಮೋದಿ ಸರಕಾರ ಮಾಡಿದೆ ಎಂದು ಹೇಳಿದರು.
ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ. ವೆಂಕಪ್ಪ ಗೌಡ ಮಾತನಾಡಿ, 2014 ರಲ್ಲಿ 1 ಬ್ಯಾರೆಲ್ ಕಚ್ಚಾತೈಲಕ್ಕೆ 130 ಡಾಲರ್ ಇದ್ದವು. ಅಂದು ಪೆಟ್ರೋಲಿಗೆ 7೦ ರೂಪಾಯಿ, ಡೀಸೆಲ್ ಗೆ .6೦ ರೂ ಇದ್ದವು.
2021 ರಲ್ಲಿ ಕೇವಲ 7೦ ಡಾಲರ್ ಗಳಿಗೆ ಕಚ್ಚಾತೈಲ ಬರುತ್ತಿದ್ದರೆ ಇಂದು ಅದರ ಬೆಲೆ ನೂರು ರೂಪಾಯಿಗಳ ಗಡಿ ದಾಟಿಸಿದರು. ಸಣ್ಣ ಸಣ್ಣ ರಾಷ್ಟ್ರಗಳಾದ ಶ್ರೀಲಂಕದಲ್ಲಿ .6೦ರೂ, ಭೂತಾನ್ 69ರೂ, ಬಾಂಗ್ಲಾದೇಶ 77 ರೂ, ನೇಪಾಳ 78 ರೂಪಾಯಿಗಳಲ್ಲಿ ಅಲ್ಲಿಯ ಜನತೆಗೆ ಅಲ್ಲಿಯ ಸರ್ಕಾರ ನೀಡುತ್ತಿದೆ. ಅಂತರಾಷ್ಟ್ರೀಯ ಮಾರುಕಟ್ಟೆ ಯಿಂದ ಕೇವಲ 35 ರೂಪಾಯಿಗಳಿಗೆ ಇಂಧನವನ್ನು ಖರೀದಿಸಿ ಕೇಂದ್ರ ಸರ್ಕಾರ ಮೂವತ್ತನಾಲ್ಕು ರೂಪಾಯಿ ತೆರಿಗೆ ವಿಧಿಸಿದರೆ ರಾಜ್ಯ ಸರ್ಕಾರ 26 ರೂಪಾಯಿಗಳ ತೆರಿಗೆ ವಿಧಿಸುತ್ತದೆ.
2013 ರಲ್ಲಿ ಇಂಧನದಿಂದ 52 ಸಾವಿರ ಕೋಟಿ ತೆರಿಗೆ ಸಂಗ್ರಹವಾಗುತ್ತಿತ್ತು. ಆದರೆ 2021 ರಲ್ಲಿ ಇಂಧನದಿಂದ 3 ಲಕ್ಷದ 5೦ ಸಾವಿರ ಕೋಟಿ ತೆರಿಗೆ ಬರುತ್ತಿದೆ ಈ ಹಣವೆಲ್ಲಾ ಎಲ್ಲಿ ಹೋಯಿತು ? ಎಂದು ಪ್ರಶ್ನಿಸಿದ ಅವರು ಹಿಂದೆ ಪೆಟ್ರೋಲ್, ಡೀಸೆಲ್, ಗ್ಯಾಸ್ ಕೊಂಚ ಏರಿಕೆಯಾದಾಗ ಪ್ರತಿಭಟಿಸಿದ್ದ ಬಿಜೆಪಿಗರು ಇಂದು ಎಲ್ಲಿದ್ದಾರೆ ? ಯಾಕೆ ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ಪ್ರಶ್ನಿಸಿದರು.

ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ ಎಂ ಶಹೀದ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದ ಸಮಯ ಅಗತ್ಯ ಸಮಯ ಬಂದಾಗ ಇಂಧನ ಬೆಲೆಯನ್ನು ಹೆಚ್ಚಿಸಿದರು. ಆ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಡಿವಿ ಸದಾನಂದ ಗೌಡರು, ಶೋಭಾ ಕರಂದ್ಲಾಜೆ, ಸೈಕಲ್ ಗಳನ್ನು ಏರಿ ಪ್ರತಿಭಟನೆಯನ್ನು ಮಾಡಿದ್ದರು. ಇದೀಗ ಅಧಿಕಾರಕ್ಕೇರಿರುವ ಬಿಜೆಪಿಯವರು ಜನರನ್ನು ಹಿಂಸಿಸಿ ಮೋಸ ಮಾಡುತ್ತಿದ್ದಾರೆ. ಕೊರೋನಾ ದಂತ ಸಂದರ್ಭದಲ್ಲಿ ಎಷ್ಟೇ ಉತ್ತಮ ವ್ಯಕ್ತಿಯಾದರೂ ಇದೀಗ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಇಂಧನದ ಬೆಲೆಗಳನ್ನು ಏರಿಸಿ ಜನರನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ. ಮೋದಿಜಿ ಅವರ ಅಚ್ಚೆದಿನ್ ಅದಾನಿ ಅಂಬಾನಿ ಅವರಿಗೆ ಮಾತ್ರ ಬಂದಿದೆ. ಪ್ರಸ್ತುತ ಸಮಯದಲ್ಲಿ ಅದಾನಿ ಯವರು 5 ಲಕ್ಷದ 90 ಸಾವಿರ ಕೋಟಿ ರೂಪಾಯಿಗಳ ಧನಿಕನಾಗಿ ದ್ದಾರೆ. ಅಂದ ಭಕ್ತರು ಪೆಟ್ರೋಲ್ ಬೆಲೆ 1 ಸಾವಿರ ರೂಪಾಯಿಯಾದರೂ ನಮಗೆ ಸಮಸ್ಯೆ ಇಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ. ಹಾಗಾದರೆ ಅವರಿಗೆ ಒಂದು ಲೀಟರ್ ಪೆಟ್ರೋಲಿಗೆ 1 ಸಾವಿರ ರೂಪಾಯಿಯಂತೆ ನೀಡಿ ಬಾಕಿ ಇರುವವರಿಗೆ ಇಂಧನವನ್ನು ಅತಿ ಕಡಿಮೆ ಬೆಲೆಯಲ್ಲಿ ನೀಡಲಿ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ ಎಂ ಶಹೀದ್ ಹೇಳಿದರು.

ಡಿಸಿಸಿ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ನ.ಪಂ.ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ. ಶಹೀದ್, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಎಂಜೆ, ಕಾಂಗ್ರೆಸ್ ಪ್ರಮುಖರಾದ ಸುಧೀರ್ ರೈ ಮೇನಾಲ, ಶಾಹುಲ್ ಹಮೀದ್ ಕುತ್ತಮೊಟ್ಟೆ, ಶಾಫಿ ಕುತ್ತಮೊಟ್ಟೆ, ರಂಜಿತ್ ರೈ ಮೇನಾಲ, ಶಹೀದ್ ಪಾರೆ, ಧರ್ಮಪಾಲ ಕೊಯಿಂಗಾಜೆ, ಮೂಸ ಕುಂಞಿ ಪೈಂಬೆಚ್ಚಾಲು, ಕೆ.ಗೋಕುಲ್ ದಾಸ್, ನಂದರಾಜ ಸಂಕೇಶ, ಕೀರ್ತನ್ ಕೊಡಪಾಲ, ಶರೀಫ್ ಕಂಠಿ, ಸುರೇಶ್ ಎಂ.ಎಚ್., ಅನಿಲ್ ರೈ ಬೆಳ್ಳಾರೆ, ಆನಂದ ಬೆಳ್ಳಾರೆ, ಬೆಟ್ಟ ಜಯರಾಮ ಭಟ್, ಡೇವಿಡ್ ಧೀರಾ ಕ್ತಾಸ್ತ, ಶಿವರಮ್ ಅಮೈ ಜಿ.ಕೆ.ಹಮೀದ್, ರಿಯಾಝ್ ಕಲ್ಲುಗುಂಡಿ, ಎಸ್.ಕೆ.ಹನೀಫ ಮೊದಲಾದವರಿದ್ದರು.
ಪ್ರತಿಭಟನೆಯಲ್ಲಿ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಕಾಂಗ್ರೆಸ್ ನಾಯಕರು ಭಾಷಣ ಮುಗಿದ ಬಳಿಕ ರಸ್ತೆಯಲ್ಲಿ ವಿಕೆಟ್ ಇಟ್ಟು ಬ್ಯಾಟ್ ಬೀಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.