ಸುಳ್ಯದ ವೆಂಕಟರಮಣ ದೇವಸ್ಥಾನದಲ್ಲಿ ಸೇವಾಂಜಲಿ ಆಶ್ರಯಹಸ್ತ ಕಿಟ್ ವಿತರಣೆ

Advt_Headding_Middle

 

ದಕ್ಷಿಣ ಕನ್ನಡ ಜಿಲ್ಲೆಯ ಅರ್ಹ ಫಲಾನುಭವಿಗಳಿಗೆ ಅಗತ್ಯವಸ್ತುಗಳನ್ನು ಒಳಗೊಂಡ ಸೇವಾಂಜಲಿ-ಆಶ್ರಯಹಸ್ತ ಕಿಟ್ ಅನ್ನು ವಿತರಿಸಲಾಗುತ್ತಿದ್ದು ಶನಿವಾರ ಸುಳ್ಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸುಮಾರು 3೦೦ ಕಿಟ್‌ಗಳನ್ನು ವಿತರಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತ್ಯೋದಯ ಕಾರ್ಡ್ ಹೊಂದಿರುವ ಬಿಪಿಎಲ್ ರೇಖೆಗಿಂತಲೂ ಕೆಳಗಿರುವ 3೦೦೦ ಕಡುಬಡವರಿಗೆ ಕಿಟ್ ಕೊಡುವ ಯೋಜನೆ ಹಾಕಿಕೊಳ್ಳಲಾಗಿದೆ. ಉತ್ತಮ ದರ್ಜೆಯ ಆಹಾರ ವಸ್ತುಗಳು, ದಿನನಿತ್ಯದ ಅಗತ್ಯ ವಸ್ತುಗಳನ್ನು ಹೊಂದಿರುವ ಕಿಟ್ ಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯದಲ್ಲಿ ಮಂಗಳೂರಿನ ಸಂಘಟನೆ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಕೈಜೋಡಿಸಲಿದೆ.
ಬೆಂಗಳೂರಿನಲ್ಲಿ ನೆಲೆಸಿರುವ ನಿವೃತ್ತ ಮೇಜರ್ ಎಸ್ ನಂಜುಂಡಯ್ಯ ಅವರು ಟ್ರಸ್ಟಿಗಳಾಗಿದ್ದು, ದಿನೇಶ್ ಕೆ, ಆಶಾ ದಿನೇಶ್ ಅವರು ಜೊತೆ ಸೇರಿ ಆರಂಭಿಸಿರುವ ಆಶ್ರಯಹಸ್ತ ಟ್ರಸ್ಟ್ ಅವರ ಮಕ್ಕಳಾದ ದಿವ್ಯಾ ಹಾಗೂ ದೀಕ್ಷಾ ಅವರ ನೇತೃತ್ವದಲ್ಲಿ ಜನ ಸೇವಾ ಕಾರ್ಯ ಕೈಗೊಂಡಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.