ಸುಳ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ.7ಕ್ಕೆ ಇಳಿಕೆ

Advt_Headding_Middle

 

ಸುಳ್ಯದಲ್ಲಿ ಸಚಿವರು, ಡಿ.ಸಿ. ನೇತೃತ್ವದಲ್ಲಿ ಸಭೆ

ಮೂರು ದಿನಗಳ ಹಿಂದೆ ಸುಳ್ಯದಲ್ಲಿ ಶೇ.26 ಇದ್ದ ಪಾಸಿಟಿವಿಟಿ ರೇಟ್ ಈಗ ಶೇ. 7 ಕ್ಕೆ ಇಳಿಕೆ ಯಾಗಿದೆ. ಇದು ಹೀಗೆ ಮುಂದುವರಿಸಿ ಪಾಸಿಟಿವಿಟಿ ರೇಟ್ ಇನ್ನೂ ಇಳಿಕೆಯಾಗುವಂತೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಎಸ್.ಅಂಗಾರ ಹಾಗೂ ದ.ಕ. ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಹೇಳಿದರು.

ಕೊರೊನಾ ನಿಯಂತ್ರಣದ ಕುರಿತು ಇಂದು ಸುಳ್ಯದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಪತ್ರಕರ್ತರರಿಗೆ ಸಚಿವರು ಮತ್ತು ಜಿಲ್ಲಾಧಿಕಾರಿಗಳು ಸಭೆಯ ವಿವರ ನೀಡಿದರು.

 

ಇದುವರೆಗೆ ನಮ್ಮಲ್ಲಿ ಸಿಮ್ ಟಮ್ ಇದ್ದವರನ್ನು ಮಾತ್ರ ಟೆಸ್ಟಿಂಗ್ ಮಾಡಲಾಗುತ್ತಿತ್ತು. ಅದರಿಂದ ಪಾಸಿಟಿವ್ ದರ ಹೆಚ್ಚಾಗಿ ಕಂಡು ಬರುತ್ತಿತ್ತು. ಒಬ್ಬರಿಗೆ ಪಾಸಿಟಿವ್ ಬಂತೆಂದರೆ ಅವರ ಸುತ್ತ ಮುತ್ತಲಿನ ಮನೆಯವರು, ಓಡಾಡಿದ ಪ್ರದೇಶದವರನ್ನು ಟೆಸ್ಟಿಂಗ್ ಮಾಡಬೇಕಾಗುತ್ತದೆ. ಉಳಿದ ಜಿಲ್ಲೆಯಲ್ಲಿ ಈ ಕ್ರಮ ಅನುಸರಿಸುತ್ತಿದ್ದರು.

ಇದೀಗ ಇಲ್ಲಿಯೂ ಅದೇ ನಿರ್ದೇಶನ ನೀಡಲಾಗಿದೆ. ಈಗ ಪರವಾಗಿಲ್ಲ. ಸುಳ್ಯ ಬೆಟರ್. ಇದೆ ಕ್ರಮ ಮುಂದುವರಿಯಬೇಕು ಎಂದು ಹೇಳಿದರು. ದ.ಕ. ಜಿಲ್ಲೆಗೆ ಮುಂದಿನ ಒಂದು ವಾರ ಸವಾಲು. ಅದನ್ನು ನಾವು ಉತ್ತಮ ರೀತಿಯಲ್ಲಿ ಫೇಸ್ ಮಾಡಬೇಕಾಗಿದೆ ಎಂದು ಹೇಳಿದರು.

 

ವಾಕ್ಸಿನೇಶನ್ ಉತ್ತಮ : ಇಲ್ಲಿ ವಾಕ್ಸಿನೇಶನ್ ಉತ್ತಮವಾಗಿ ನಡೆಯುತ್ತಿದೆ. ಕೆಲವು ಕಡೆ ಸ್ವಲ್ಪ ಸಮಸ್ಯೆ ಇದ್ದರೂ ಅದೆಲ್ಲವೂ ಸರಿಯಾಗಿದೆ. ಗ್ರಾ.ಪಂ. ಪಿ.ಡಿ.ಒ. ಗಳಿಗೂ ಜವಾಬ್ದಾರಿ ನೀಡಲಾಗಿದೆ ಎಂದರಲ್ಲದೆ, ವಾಕ್ಸಿನ್ ಪಡೆಯಬೇಕೆಂದರೆ ಕೋವಿಡ್ ಟೆಸ್ಟಿಂಗ್ ಆಗಬೇಕೆಂಬ ನಿಯಮ ಇಲ್ಲ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಟ್ರೇಡ್ ಲೈಸೆನ್ಸ್ ರದ್ದು : ಖಾಸಗಿ ಕ್ಲಿನಿಕ್ ನಲ್ಲಿ ಜ್ವರ ಬಂದವರು ಔಷಧ ಪಡೆಯುತ್ತಾರಾದರೆ ಅಂತವರ ಮಾಹಿತಿ ವೈದ್ಯರು ನೀಡಲು ಸೂಚಿಸಲಾಗಿದೆ. ಮೆಡಿಕಲ್ ನಿಂದ ಮಾತ್ರೆ ಪಡೆದರೂ ಮಾಹಿತಿ ಕೊಡಬೇಕು. ಇಲ್ಲವಾದರೆ ಟ್ರೇಡ್ ಲೈಸೆನ್ಸ್ ರದ್ದು ಮಾಡಲಾಗುವುದು ಎಂದು ಡಿ.ಸಿ. ಹೇಳಿದರು.

ಗ್ಯಾರೆಜ್ ಓಪನ್ : ಮಳೆಗಾಲ ಆರಂಭವಾಗಿರುವುದರಿಂದ ಮತ್ತು ಗೂಡ್ಸ್ ವಾಹನಗಳ ಸೇವೆಗೆ ಗ್ಯಾರೆಜ್ ಗಳು ಅಗತ್ಯತೆ ಇರುವುದರಿಂದ ಅವುಗಳಿಗೆ ಅವಕಾಶ ನೀಡಲಾಗಿದೆ. ಹಾಗೂ ಅನ್ ಲೈನ್ ಕ್ಲಾಸ್ ಗಳಿಗೆ ಕನ್ನಡಕ ಅಗತ್ಯತೆ ಕಂಡು ಬಂದುದರಿಂದ ಅದಕ್ಕೂ ಅವಕಾಶ ನೀಡಲಾಗಿದೆ ಎಂದು ಡಿ.ಸಿ. ಹೇಳಿದರು.

ಪತ್ರಕರ್ತರು ಹೊರಗೆ : ಸಭೆ ಅರಂಭವಾಗುವ ಸಂದರ್ಭದಲ್ಲಿ ಡಿ.ಸಿ.ಯವರು ಪತ್ರಕರ್ತರನ್ನು ಕರೆದು ಈ ಸಭೆಯ ಬಳಿಕ ಮಾಹಿತಿ ನೀಡುತ್ತೇವೆ. ಕೆಲವು ಸಂದರ್ಭ ಅಧಿಕಾರಿಗಳಿಂದ ಕೆಲಸ ತೆಗೆದುಕೊಳ್ಳಲು ಜೋರು ಮಾತನಾಡಬೇಕಾಗುತ್ತದೆ. ಪ್ಲೀಸ್ ಮತ್ತೆ ಬನ್ನಿ ಎಂದರು. ಬಳಿಕ ವರದಿಗಾಗಿ ತೆರಳಿದ ಪತ್ರಕರ್ತರರು ಸಭೆಯ ಹೊರಗೆ ಬಂದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.