Breaking News

ಲಾಡ್ಜ್‌ಗೆ ಬಂದ ಯುವತಿ ಠಾಣೆಗೆ

Advt_Headding_Middle

ಲಾಡ್ಜ್ ಮಾಲಕರ ಪುತ್ರನ ವಿಚಾರಣೆ

ಸುಳ್ಯ ಗಾಂಧಿನಗರದ ಲಾಡ್ಜೊಂದರಲ್ಲಿದ್ದ ಯುವತಿ ಮತ್ತು ಆ ಲಾಡ್ಜ್‌ನ ಮಾಲಕರ ಮಗನನ್ನು ಪೋಲೀಸರು ಠಾಣೆಗೆ ಕರೆದೊಯ್ದಿದ್ದಾರೆಂದು ಪ್ರಚಾರವಾದ ಹಾಗೂ ಪೋಲೀಸರು ಅದನ್ನು ನಿರಾಕರಿಸಿದ ಘಟನೆ ವರದಿಯಾಗಿದೆ.
ಜೂ.೧೨ರಂದು ಬೆಳಗ್ಗೆ ೮.೩೦ರ ಹೊತ್ತಿಗೆ ಯುವತಿಯೊಬ್ಬಳು ವಸತಿಗೃಹಕ್ಕೆ ಬಂದಳೆಂದೂ, ವಿಷಯ ತಿಳಿದ ಭಜರಂಗದಳದ ಲತೀಶ್ ಗುಂಡ್ಯ ಪೋಲೀಸ್ ಅಧಿಕಾರಿಗೆ ಫೋನ್ ಮಾಡಿ ತಿಳಿಸಿದರೆಂದೂ, ತಕ್ಷಣ ಸುಳ್ಯ ಎಸ್.ಐ. ಮತ್ತು ಪೋಲೀಸರು ಅಲ್ಲಿಗೆ ಧಾವಿಸಿದಾಗ ಯುವತಿ ಒಬ್ಬಳೇ ಇದ್ದಳೆಂದೂ ಹೇಳಲಾಗಿದ್ದು, ಪೋಲೀಸರು ಆಕೆಯನ್ನು ಠಾಣೆಗೆ ಕಳುಹಿಸಿಕೊಟ್ಟರಲ್ಲದೆ, ಲಾಡ್ಜ್ ನೋಡಿಕೊಳ್ಳುತ್ತಿರುವ ಅದರ ಮಾಲಕರ ಮಗನನ್ನೂ ಠಾಣೆಗೆ ಬರ ಹೇಳಿದರೆಂದು ತಿಳಿದು ಬಂದಿದೆ.
ಯುವತಿ ಮಂಗಳೂರಿನವಳಾಗಿದ್ದು ಆಕೆಯನ್ನು ವಿಚಾರಣೆ ನಡೆಸಿದ ಪೊಲೀಸರು ಆಕೆಯನ್ನು ಮಂಗಳೂರಿಗೆ ಕಳುಹಿಸಿಕೊಟ್ಟರೆಂದೂ, ಬಳಿಕ ಲಾಡ್ಜ್‌ನ ಯುವಕನನ್ನೂ ವಿಚಾರಣೆ ನಡೆಸಿ ಕಳುಹಿಸಿದರೆಂದೂ ಗೊತ್ತಾಗಿದೆ.
ಈ ಘಟನೆ ರೆಕ್ಕೆಪುಕ್ಕ ಕಟ್ಟಿಕೊಂಡು ಪ್ರಚಾರ ವಾಗುತ್ತಿದ್ದು, ಎಸ್.ಐ.ಯವರನ್ನು ಸಂಪರ್ಕಿಸಿ ವಿಚಾರಿಸಿದಾಗ ‘`ಆಕೆ ಮಂಗಳೂರಿನವಳು. ಕಾರಲ್ಲಿ ಬಂದಿದ್ದಳು. ಕಾರಿನ ಚಾಲಕ ಆಕೆಯನ್ನು ಲಾಡ್ಜಲ್ಲಿ ಬಿಟ್ಟು ಮಡಿಕೇರಿ ಕಡೆಗೆ ಹೋಗಿದ್ದ. ನಾವು ಅವನಿಗೆ ಫೋನ್ ಮಾಡಿದಾಗ ಅವನು ವಾಪಸ್ ಬರುವುದಾಗಿ ಹೇಳಿದ. ಅದಕ್ಕಾಗಿ ನಾವು ಬೇರೆ ವಾಹನದಲ್ಲಿ ಆಕೆಯನ್ನು ಮಂಗಳೂರಿಗೆ ಕಳುಹಿಸಿ ಕೊಟ್ಟಿದ್ದೇವೆ. ಕೆಲವರು ಪ್ರಚಾರ ಮಾಡುವಂತೆ ಅಲ್ಲೇನೂ ನಡೆದಿಲ್ಲ ” ಎಂದು ಹೇಳಿದ್ದಾರೆ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.