ಸೇವಾಜೆ‌- ಮಡಪ್ಪಾಡಿ ರಸ್ತೆ ದುರಸ್ಥಿಯ ಬಗ್ಗೆ ಸಚಿವ ಅಂಗಾರರವರಿಂದ‌ ಭರವಸೆ

Advt_Headding_Middle

 

 

ಸೇವಾಜೆ ಮಡಪ್ಪಾಡಿ ರಸ್ತೆ ಕೆಸರುಮಯಗೊಂಡು ಸಂಚರಿಸಲು ಸಾಧ್ಯವೇ ಇಲ್ಲದಂತಾಗಿದೆ. ಈ ಬಗ್ಗೆ‌ ಸುದ್ದಿ ಬಿಡುಗಡೆ ಪತ್ರಿಕೆ, ಸುದ್ದಿ ಆನ್ ಲೈನ್‌ ನ್ಯೂಸ್‌ನಲ್ಲಿ ವರದಿ ಪ್ರಕಟಗೊಂಡಿತ್ತಲ್ಲದೇ, ಊರಿನ ನೊಂದ‌ ನಾಗರಿಕರು ಸಚಿವರಿಗೆ ಮನವಿ ಸಲ್ಲಿಸಿದ್ದರು.‌ ಅಲ್ಲದೇ ಚುನಾವಣೆ ಬಹಿಷ್ಕಾರದ ಬಗ್ಗೆ ಯೂ ಬ್ಯಾನರ್ ಅಳವಡಿಸಿದ್ದರು. ನಾಗರಿಕರ ಮನವಿಗೆ ಸ್ಪಂದಿಸಿದ ಸಚಿವರು‌ ಸೋಮವಾರ ( ಜೂ.14) ರಂದು ತಾತ್ಕಾಲಿಕ ದುರಸ್ತಿ ಮಾಡುವ ಬಗ್ಗೆ ಹಾಗೂ ಮಳೆಗಾಲ ಮುಗಿದ ಕೂಡಲೇ ರಸ್ತೆ ಕಾಮಗಾರಿ ಆರಂಭಿಸುವ ಬಗ್ಗೆ ಭರವಸೆ ನೀಡಿದ್ದಾರೆಂದು‌ ತಿಳಿದು ಬಂದಿದೆ.
ಮನವಿ ನೀಡಿದ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ವಿನಯಕುಮಾರ್ ಮುಳುಗಾಡು, ಹರೀಶ್ ಕಂಜಿಪಿಲಿ, ನಾಗರಿಕರಾದ ಆನಂದ ಗೌಡ ಕರಂಗಲಡ್ಕ, ಪ್ರವೀಣ್ ಕರ್ಲಪ್ಪಾಡಿ, ಜಯದೀಪು ಕರಂಗಲಡ್ಕ, ರಮೇಶ್ ಕರಂಗಲಡ್ಕರವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.