ಐವರ್ನಾಡು ಗ್ರಾಮಕ್ಕೆ ಆಂಬ್ಯುಲೆನ್ಸ್ ಕೊಡುಗೆ

Advt_Headding_Middle

 

ಸುಳ್ಯದಲ್ಲಿ ಸಚಿವ ಎಸ್.ಅಂಗಾರರಿಂದ ಲೋಕಾರ್ಪಣೆ

ಗ್ರಾಮ ಸಹಕಾರ ಸಿಂಧು ಆರೋಗ್ಯ ಸೇವೆಗೆ ಐವರ್ನಾಡು ಗ್ರಾಮಕ್ಕೆ ಕೊಡುಗೆಯಾಗಿ ನೀಡಿದ ನೂತನ ಆಂಬ್ಯುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮವು
ಜೂ.14 ರಂದು ಸುಳ್ಯ ತಾಲೂಕು ಪಂಚಾಯತ್ ಎದುರು ನಡೆಯಿತು.
ಶಾಸಕ,ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ಆಂಬ್ಯುಲೆನ್ಸ್ ನ್ನು ಲೋಕಾರ್ಪಣೆಗೊಳಿಸಿದರು.

ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಐವರ್ನಾಡು ಗ್ರಾಮದ ಉದ್ದಂಪಾಡಿ ಹರೀಶ್ ರಾವ್ ರವರು ಅವರ ತಾಯಿ ದಿ. ಶ್ರೀಮತಿ ಜಯಲಕ್ಷ್ಮೀ ರಾವ್ ಮತ್ತು ತಂದೆ ದಿ.ಶಿವರಾಮ ರಾವ್ ರವರ ಸ್ಮರಣಾರ್ಥವಾಗಿ ಆಂಬ್ಯುಲೆನ್ಸ್ ಕೊಡುಗೆಯಾಗಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪುತ್ತೂರು ಉಪವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್, ತಹಶೀಲ್ದಾರ್ ಅನಿತಾಲಕ್ಷ್ಮೀ, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ, ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ, ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ,ಉಪಾಧ್ಯಕ್ಷೆ ಶ್ರೀಮತಿ ಸುಜಾತ ಪವಿತ್ರಮಜಲು, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಸಹಕಾರಿ ಸಂಘದ ಉಪಾಧ್ಯಕ್ಷ ವಿಕ್ರಂ ಪೈ, ಮುಖ್ಯಕಾರ್ಯನಿರ್ವಹಣಾಧಿಕಾರಿ ರವಿಪ್ರಸಾದ್ ಸಿ.ಕೆ, ನಿರ್ದೇಶಕ, ಪುರಂದರ ಶಾಂತಿಮೂಲೆ,ಗ್ರಾಮ ಪಂಚಾಯತ್ ಸದಸ್ಯರಾದ ಯೋಗೀಶ ಕಲ್ಲಗದ್ದೆ, ದೇವಿಪ್ರಸಾದ್ ಕೊಪ್ಪತ್ತಡ್ಕ, ರಂಜನ್ ಮೂಲೆತೋಟ, ಸುಂದರಲಿಂಗಂ, ಗ್ರಾಮ ಲೆಕ್ಕಾಧಿಕಾರಿ ಕಾರ್ತಿಕ್, ಮಾಧವ ಭಟ್ ಶೃಂಗೇರಿ , ಶಾಂತಾರಾಮ ಕಣಿಲೆಗುಂಡಿ, ನವೀನ ಕಜೆತ್ತಡ್ಕ, ಪ್ರಸಾದ್ ಕಟ್ಟತ್ತಾರು, ಜಯಪ್ರಸಾದ್ ಕಜೆತ್ತಡ್ಕ, ಎಲ್ಯಣ್ಣ ಗೌಡ ಕುಳ್ಳಂಪಾಡಿ, ಧರ್ಮಪಾಲ ಲಾವಂತಡ್ಕ, ಸಂಪ್ರೀತ್ ಮಿತ್ತಮೂಲೆ, ಪ್ರಭಾಕರ ಬಾಂಜಿಕೋಡಿ, ಜಯಪ್ರಕಾಶ್ ಪಾಲೆಪ್ಪಾಡಿ ಹಾಗೂ
ಕೊಡುಗೆಯಾಗಿ ನೀಡಿದ ಹರೀಶ್ ರಾವ್ ಉದ್ದಂಪಾಡಿ, ಯೋಗೀಶ್ ರಾವ್, ವಿಶುಕುಮಾರ್ ಪಾಲೆಪ್ಪಾಡಿ
ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯು.ಡಿ.ಶೇಖರ್ ಸ್ವಾಗತಿಸಿ, ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.