ಮೊಬೈಲ್ ನೆಟ್ ವರ್ಕ್ ಸಮಸ್ಯೆ ಪರಿಹಾರಕ್ಕೆ ಸಚಿವರ ನೇತೃತ್ವದಲ್ಲಿ ಸಭೆ

Advt_Headding_Middle

 

ತಾಲೂಕಿನಲ್ಲಿ ನೆಟ್ ವರ್ಕ್ ಸಮಸ್ಯೆ ಆಗದಂತೆ ಕ್ರಮಕ್ಕೆ ಸಚಿವರ ಸೂಚನೆ

 

ತಾಲೂಕಿನಲ್ಲಿ ಮೊಬೈಲ್ ನೆಟ್ ವರ್ಕ್ ಸಮಸ್ಯೆ ಪಡಿಹರಿಸುವ ನಿಟ್ಟಿನಲ್ಲಿ ಸಚಿವ ಎಸ್.ಅಂಗಾರರ ಅಧ್ಯಕ್ಷತೆಯಲ್ಲಿ ಸಭೆಯು ಇಂದು ಸುಳ್ಯ ತಾ.ಪಂ. ಸಭಾಂಗಣದಲ್ಲಿ ನಡೆಯಿತು.

ಪುತ್ತೂರು ಸಹಾಯಕ ಕಮಿಷನರ್ ಡಾ.ಯತೀಶ್ ಉಳ್ಳಾಲ್, ತಹಶೀಲ್ದಾರ್ ಅನಿತಾಲಕ್ಷ್ಮೀ, ಇ.ಒ. ಭವಾನಿಶಂಕರ್, ಕಡಬ ತಹಶೀಲ್ದಾರ್ ಅನಂತಶಂಕರ್ ಹಾಗೂ ಬಿಎಸ್ ಎನ್ ಎಲ್ ನ ಎಸ್.ಡಿ.ಇ. ಪ್ರಸಾದ್, ಜೆಟಿಒ ರೇಣುಕಾ, ಏರ್ ಟೆಲ್ ಸಂಸ್ಥೆಯ ಇಶಾನ್ ಶೆಟ್ಟಿ, ಜಿಯೋ ಸಂಸ್ಥೆಯ ಶಿವನಂದನ್ ಇದ್ದರು.

ಮೊಬೈಲ್ ನೆಟ್ ವರ್ಕ್ ಸಮಸ್ಯೆ ಯ ಕುರಿತು ಪ್ರಸ್ತಾಪವಾದಾಗ ಮಾತನಾಡಿದ ಮೊಬೈಲ್ ನೆಟ್ ವರ್ಕ್ ಸಂಸ್ಥೆಯವರು, ” ಎಲ್ಲರಿಗೂ ನೆಟ್ ವರ್ಕ್ ಬೇಕು. ಆದರೆ ಟವರ್ ಗೆ ಆಕ್ಷೇಪ ಬರುತ್ತಿದೆ. ನಾವು ಸರ್ವೆ ನಡೆಸಿ ಜಾಗ ಗುರುತಿಸುತ್ತೇವೆ. ಅದನ್ನು ಕೊಡಿಸುವಂತೆ ಆದರೆ ನೆಟ್ ವರ್ಕ್ ಸಮಸ್ಯೆ ಪರಿಹಾರವಾಗುತ್ತದೆ ಎಂದು ಹೇಳಿದರು.

“ಎಲ್ಲಿ ಟವರ್ ಆದರೆ ನೆಟ್ ವರ್ಕ್ ಸುತ್ತಮುತ್ತಲ ಪ್ರದೇಶಕ್ಕೆ ಕವರ್ ಆಗುತ್ತದೋ ಅಲ್ಲೇ ಟವರ್ ಮಾಡಬೇಕು. ಅದು ದೀರ್ಘ ಕಾಲ ಪ್ರಯೋಜಕ್ಕೆ ಸಿಗಬೇಕು. ಪದೇ ಪದೇ ಸಮಸ್ಯೆ ಇರಬಾರದು. ನೀವೆಲ್ಲರೂ ಜನರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಿ ಎಂದು ಹೇಳಿದರು.

” ಟವರ್ ಗೆ ಜಾಗ ಗುರುತಿಸಿ. ಅದು ಸರಕಾರಿ ಎಂದು ಕಂಡು ಬಂದರೆ ಸಾರ್ವಜನಿಕ ಉದ್ದೇಶ ನೆಲೆಯಲ್ಲಿ ಕೊಡಲು ಜಿಲ್ಲಾಧಿಕಾರಿಗಳು ಒಪ್ಪಿಗೆ ಪಡೆಯಲಾಗುವುದು” ಎಂದು ಹೇಳಿದರು.

ಬಿಎಸ್ ಎನ್ ಎಲ್ ನೆಟ್ ವರ್ಕ್ ಸಮಸ್ಯೆಯೂ ಚರ್ಚೆ ನಡೆಯಿತು. ಕೆಲ ಹೊತ್ತು ಸಭೆ ನಡೆದು ತಾಲೂಕಿನಲ್ಲಿ ನಿರ್ಮಾಣ ಆಗಲಿರುವ 12 ಟವರ್ ನ ಪಟ್ಟಿ ಕೊಡಬೇಕು. ನಾವು ನಮ್ಮ ಬೇಡಿಕೆಯ ಪಟ್ಟಿ ಕೊಡುತ್ತೇವೆ. ಒಟ್ಟಾರೆಯಾಗಿ ಸಾರ್ವಜನಿಕರಿಗೆ ನೆಟ್ ವರ್ಕ್ ಸಮಸ್ಯೆ ಆಗಬಾರದು. ಮತ್ತು ಎಲ್ಲ ಕಡೆಯೂ ನೆಟ್ ವರ್ಕ್ ಸಿಗಬೇಕು. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.