ಗುತ್ತಿಗಾರು : ಸೀಲ್ ಡೌನ್ ಹಿನ್ನಲೆ-ಕಠಿಣ ಕ್ರಮಕ್ಕೆ ನಿರ್ಧಾರ

Advt_Headding_Middle

 

ಅಂಗಡಿ, ಬ್ಯಾಂಕ್ ಸೇರಿದಂತೆ ಒಂದು ವಾರ ಯಾವುದು ತೆರೆಯುವುದಿಲ್ಲ

ಕೊವಿಡ್ ಪ್ರಕರಣಗಳು ಐವತ್ತಿಕ್ಕಿಂತ ಹೆಚ್ಚು ಇರುವ ಗ್ರಾಮಗಳನ್ನು ಸೀಲ್ ಡೌನ್‌ ಮಾಡುವಂತೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಗುತ್ತಿಗಾರು ಗ್ರಾಮ ಪಂಚಾಯತ್ ನಲ್ಲಿ ನಡೆದ ಸಭೆಯಲ್ಲಿ ಒಂದು ವಾರದ ಸೀಲ್‌ ಡೌನ್ ಬಗ್ಗೆ ಕಠಿಣ ನಿರ್ಧಾರ ಕ್ಕೆ ಬರಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ರೇವತಿ ಆಚಳ್ಳಿಯವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರಮೀಳಾ ಭಾಸ್ಕರ‌ ಎರ್ದಡ್ಕ, ಆರೋಗ್ಯಾಧಿಕಾರಿ ಡಾ. ಚೈತ್ರಾ ಭಾನು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಂ ಪ್ರಸಾದ್ ಎಂ.ಆರ್.‌, ಪಂಚಾಯತ್ ಸದಸ್ಯರು, ಟಾಸ್ಕ್ ಪೋಸ್೯ ಸಮಿತಿಯವರು ಉಪಸ್ಥಿತರಿದ್ದರು.

ಇಂದಿನಿಂದ ಎಲ್ಲವೂ ಬಂದ್
ಕೋವಿಡ್ ಸರಪಳಿ ತುಂಡರಿಸುವ ಉದ್ದೇಶದಿಂದ ಇಂದಿನಿಂದ ಗುತ್ತಿಗಾರು ಗ್ರಾಮ ಸಂಪೂರ್ಣ ಸೀಲ್‌ಡೌನ್ ಆಗಲಿದೆ. ಈ ಬಗ್ಗೆ ಕೈಗೊ‌ಂಡ ತೀರ್ಮಾನಗಳು ಹೀಗಿವೆ.
ಅಂಗಡಿಗಳು, ಬ್ಯಾಂಕ್, ಸೊಸೈಟಿ, ಹೋಟೆಲ್, ಪಡಿತರ ಸೇರಿದಂತೆ ಯಾವುದು ಅಂಗಡಿ ಮುಂಗಟ್ಟುಗಳು ತೆರೆಯುವುದಿಲ್ಲ. ಗ್ರಾಮದ ಗಡಿಗಳನ್ನು ಇಂದಿನಿಂದ ಮುಚ್ಚಲಾಗುತ್ತಿದೆ. ಗಡಿಗಳಲ್ಲಿ ಕೋರೊನಾ ಕಾರ್ಯಪಡೆಯ ಸದಸ್ಯರನ್ನು ನೇಮಿಸಲಾಗಿದೆ. ಅಗತ್ಯ ವಸ್ತುಗಳ ಅವಶ್ಯಕತೆಯಿದ್ದರೆ ಗ್ರಾ.ಪಂ. ಸದಸ್ಯರು ಅಥವಾ ಕೊರೋನಾ ಕಾರ್ಯಪಡೆಗೆ ಮುಂಚಿತವಾಗಿ ತಿಳಿಸಿದಲ್ಲಿ ಅವರು ಪಾವತಿ ಆದರದಲ್ಲಿ‌ ಅವರವರ ಮನೆಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಿದ್ದಾರೆ. ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಂದು ವಾರ ವ್ಯಾಕ್ಸಿನೇಷನ್‌ ನೀಡದಂತೆಯೂ ತೀರ್ಮಾನ ಕ್ಕೆ ಬರಲಾಗಿದೆ. ಗ್ರಾಮದಲ್ಲಿ ವಿಶೇಷ ಚೇತನರಿಗೆ ಮಾತ್ರ‌ ವ್ಯಾಕ್ಸಿನೇಷನ್‌ ದೊರಕಲಿದ್ದು, ಅಂತಹವರನ್ನು ಕರೆದುಕೊಂಡು ಬರುವ ಹಾಗೂ ಬಿಡುವ ವ್ಯವಸ್ಥೆ ಮಾಡಲಾಗಿದೆ.

https://youtu.be/wAmGvvySweM

ಧರ್ಮಸ್ಥಳ ಸಂಘಗಳ ನಗದು ಸಂಗ್ರಹಣೆ ಕೂಡ ಇರುವುದಿಲ್ಲ.

ಇಂದು ಅಗತ್ಯ ವಸ್ತು ಖರೀದಿಗೆ ಸಮಯ ವಿಸ್ತರಣೆ

ಗುತ್ತಿಗಾರು ಗ್ರಾಮ ಪಂಚಾಯತ್ ಇಂದಿನಿಂದ ಒಂದು ವಾರ ಸೀಲ್ ಡೌನ್ ಆಗುವ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳನ್ನು ಒಂದು ಗಂಟೆ ಹೆಚ್ಚು ಖರೀದಿ ಮಾಡಲು ಅವಕಾಶ ನೀಡಲಾಯಿತು. ಗುತ್ತಿಗಾರು ಪೇಟೆ ಇಂದು ಮುಂಜಾನೆ ರಶ್ ಇರುವುದು ಕಂಡು ಬಂತು.

ಹಾಲಿನ ಅಂಗಡಿಗೆ ಅವಕಾಶ

ಗುತ್ತಿಗಾರಿನಲ್ಲಿ ಸುದ್ದಿ ಸೆಂಟರ್ ಮುಂಜಾನೆ 6 ರಿಂದ 8 ಗಂಟೆಯವರೆಗೆ ತೆರೆದಿರುತ್ತದೆ. ಇಲ್ಲಿ ಹಾಲು ಮಾತ್ರ ದೊರೆಯಲಿದ್ದು, ದಿನಪತ್ರಿಕೆ ಗಳು ಲಭ್ಯವಿರುವುದಿಲ್ಲ.

ಕೂಲಿ ಕಾರ್ಮಿಕರಿಗೆ, ಹಾಲಿನ ಡೈರಿಗೆ ಅವಕಾಶ

ಕೂಲಿ ಕಾರ್ಮಿಕರು ಗುತ್ತಿಗಾರು ಗ್ರಾಮದಲ್ಲಿ ತಮ್ಮ ಕೆಲಸ ಕಾರ್ಯಗಳಿಗೆ ತೆರಳಲು ಅವಕಾಶ‌ವಿದ್ದು, ಬೆಳಿಗ್ಗೆ 8ರಿಂದ 9 ಗಂಟೆಯೊಳಗೆ ಹಾಗೂ ಸಂಜೆ 5ರಿಂದ 6 ಗಂಟೆಯೊಳಗೆ ಮನೆಗೆ ಸೇರಬೇಕಾಗಿದೆ. ಹೊರ ಗ್ರಾಮಗಳಿಗೆ ತೆರಳಲು ಅವಕಾಶವಿಲ್ಲವೆಂದು ಸಭೆಯಲ್ಲಿ ನಿರ್ಣಯಿಸಲಾಯಿತು. ಹಾಲಿನ ಡೈರಿಗೆ ಅವಕಾಶವಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.