ಭಾರೀ ಮಳೆ : ಸುಳ್ಯದ ಮುಖ್ಯರಸ್ತೆಗಳಲ್ಲಿ ತುಂಬಿ ಹರಿಯುತ್ತಿರುವ ಮಳೆಯ ನೀರು

Advt_Headding_Middle

 

ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ರಸ್ತೆಯ ಬದಿಯಲ್ಲಿ ಅಸಮರ್ಪಖ ಚರಂಡಿ ವ್ಯವಸ್ಥೆಯಿಂದ ಸುಳ್ಯ ನಗರದ ಮುಖ್ಯರಸ್ತೆಗಳಲ್ಲಿ ನೀರು ತುಂಬಿ ಹರಿಯುತ್ತಿದೆ. ಸುಳ್ಯ ನಗರಕ್ಕೆ ಸಂಬಂಧಿಸಿದಂತೆ ಅಸಮರ್ಪಕ, ಮತ್ತು ಅವೈಜ್ಞಾನಿಕ ಚರಂಡಿಗಳ ಕಾಮಗಾರಿಯಿಂದ ಮಳೆಯ ನೀರು ಸುಳ್ಯ ನಗರದ ಮುಖ್ಯ ರಸ್ತೆಗಳಲ್ಲಿ ಈ ರೀತಿ ತುಂಬಿ ನದಿಯಂತೆ ಹರಿಯುತ್ತಿದೆ.

ಮಳೆಯ ನೀರಿನ ಸಮಸ್ಯೆಗಳನ್ನು ಎದುರಿಸುತ್ತಿರುವ ಈ ಭಾಗದ ಜನತೆ, ರಸ್ತೆಗಳಲ್ಲಿ ಓಡಾಡುತ್ತಿರುವ ಜನರು, ದ್ವಿಚಕ್ರವಾಹನ ಸವಾರರು ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳನ್ನು ಹಿಡಿಶಾಪ ಹಾಕುವಂತಾಗಿದೆ. ಈ ರೀತಿಯ ಘಟನೆಗಳ ಕುರಿತು ಸ್ಥಳೀಯ ಪತ್ರಿಕೆಗಳು, ಮಾಧ್ಯಮಗಳಲ್ಲಿ ಸಂಬಂಧಪಟ್ಟವರನ್ನು ಎಚ್ಚರಿಸುವಂತ ವರದಿಗಳನ್ನು ಭಿತ್ತರಿಸುತ್ತವೆ. ಆದರೆ ಇದರ ಬಗ್ಗೆ ಗಮನ ಹರಿಸದ ಇವರು ನಮಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ.

ಇದರಿಂದ ಬೇಸತ್ತಿರುವ ಸುಳ್ಯ ನಗರದ ಕೆಲವು ವ್ಯಾಪಾರಸ್ಥರು ತಮ್ಮ ತಮ್ಮ ಅಂಗಡಿಗಳ ಮುಂಗಟ್ಟುಗಳ ಭಾಗಗಳಲ್ಲಿ ತಾವೇ ಸ್ವಚ್ಛತೆಯನ್ನು ಮಾಡಿ ನೀರು ಪಕ್ಕದ ಚರಂಡಿಗಳಲ್ಲಿ ಹಾದುಹೋಗುವಂತೆ ಮಾಡುತ್ತಿದ್ದರೆ, ಸಂಬಂಧಪಟ್ಟ ಅಧಿಕಾರಿಗಳು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಸಹಕರಿಸುತ್ತಿಲ್ಲ ಎಂದು ಸಾರ್ವಜನಿಕರು ಹೇಳುತ್ತಾರೆ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.