Breaking News

ಕಲ್ಚರ್ಪೆಯ ಕೊಳಕು ನೀರು ಪಯಸ್ವಿನಿ ಸೇರುತ್ತಿದೆ

Advt_Headding_Middle

 

ವ್ಯವಸ್ಥೆ ಸರಿಪಡಿಸದ ನ.ಪಂ. ವಿರುದ್ಧ ಸ್ಥಳೀಯರ ಆಕ್ರೋಶ

ಸುಳ್ಯ ನಗರದ ತ್ಯಾಜ್ಯವನ್ನು ಕಲ್ಚರ್ಪೆಯಲ್ಲಿ ಹಾಕಲಾಗಿದ್ದು ಇದೀಗ ಮಳೆಯ ನೀರು ಕಸದ ಮೇಲೆ ಬಿದ್ದು ಜೊತೆಗೆ ಪೂಮಲೆಯಿಂದ ಹರಿದು ಬರುವ ನೀರು ಸೇರಿ ಪಯಸ್ವಿನಿ ಸೇರುತ್ತಿದೆ. 

 

ಕಲ್ಚರ್ಪೆ ಕಸಕ್ಕೆ ಮುಕ್ತಿ ಕಾಣಿಸದ ನ.ಪಂ.ನ ವಿರುದ್ಧ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರಲ್ಲದೇ ತ್ಯಾಜ್ಯದಿಂದ ಹೊರಬರುವ ಕೊಳಕು ನೀರು ಪಯಸ್ವಿನಿ ಸೇರುತ್ತಿರುವುದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಪತ್ರಿಕೆಗೆ ಕಳುಹಿಸುವುದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿಯೂ ಹರಿಬಿಟ್ಟಿದ್ದಾರೆ.

 

ಸುಳ್ಯ ಪೆರಾಜೆ ಕಲ್ಚರ್ಪೆ ಸಿರಿಕುರಲ್ ನಗರದ ಶ್ರೀ ವನದುರ್ಗಾ ದೈವಸ್ಥಾನದ ಸಮೀಪ ಪೂಮಲೆ ಭಾಗದಿಂದ ಹರಿದುಬರುತ್ತಿರುವ ನೀರಿನ ಕಣಿಯಲ್ಲಿ ತ್ಯಾಜ್ಯಗಳು ತುಂಬಿದ ಚೀಲಗಳು ಇಂದು ಮುಂಜಾನೆ ಸಂಕ್ರಮಣ ಪ್ರಯುಕ್ತ ದೈವಸ್ಥಾನಕ್ಕೆ ದೀಪ ಹಚ್ಚಲು ತೆರಳಿರುವ ಸ್ಥಳೀಯರ ಕಣ್ಣಿಗೆ ಕಂಡಿದೆ. ವಿಷಯ ತಿಳಿದ ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಗೋಕುಲ್ ದಾಸ್ ಹಾಗೂ ಊರವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಈ ಪರಿಸರದಲ್ಲಿ ಪ್ರಾಕೃತಿಕ ರಮಣೀಯವಾಗಿ ಹರಿದುಬರುತ್ತಿರುವ ನೀರಿನ ಜರಿಗೆ ಕಸ ತುಂಬಿದ ಚೀಲಗಳನ್ನು ಹಾಕಿ ಪರಿಸರವನ್ನು ಕಲುಷಿತಗೊಳಿಸಿರುವುದು ಖಂಡನೀಯ. ಹಾಗೂ ಈ ಭಾಗದಿಂದ ಹರಿದು ಬರುವ ನೀರು ಪಯಸ್ವಿನಿ ನದಿಗೆ ಸೇರುತ್ತಿದ್ದು ಇದರಿಂದ ಜೀವನದಿ ಪಯಸ್ವಿನಿ ಕೂಡ ಕಲುಷಿತಗೊಳ್ಳಲು ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದೀಗ ಮಳೆಗಾಲ ಆರಂಭಗೊಂಡಿದ್ದು ಕಲ್ಚರ್ಪೆ ಪರಿಸರದಲ್ಲಿ ಈಗಾಗಲೇ ಶೇಖರಿಸಿಟ್ಟಿರುವ ಕಸದ ರಾಶಿಯನ್ನು ಖಾಲಿ ಮಾಡುವ ಉದ್ದೇಶದಿಂದ ಸಂಬಂಧಪಟ್ಟವರು ಈ ರೀತಿಯ ಕೃತ್ಯ ನಡೆಸಿರಬಹುದೆಂದು ಅವರು ಹೇಳಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.