ಯೂತ್ ಕಾಂಗ್ರೆಸ್ ವತಿಯಿಂದ ಸುಳ್ಯದ 4 ಪೆಟ್ರೋಲ್ ಬಂಕ್‌ಗಳಲ್ಲಿ ಪ್ರತಿಭಟನೆ

Advt_Headding_Middle

ಪೆಟ್ರೋಲ್, ಡೀಸೆಲ್, ಬೆಲೆ ಏರಿಕೆ ವಿರುದ್ಧ ಕೆಪಿಸಿಸಿ ನಿರ್ದೇಶನದಂತೆ ರಾಜ್ಯ ವ್ಯಾಪ್ತಿ ಪೆಟ್ರೋಲ್ ಬಂಕ್ ಗಳಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆಗಳನ್ನು ಹಮ್ಮಿಕೊಂಡಿದೆ.

 


ಇದರ ಅಂಗವಾಗಿ ಸುಳ್ಯ ಯೂತ್ ಕಾಂಗ್ರೆಸ್ ವತಿಯಿಂದ ಇಂದು ಸುಳ್ಯದ ಗಾಂಧಿನಗರ ಪೆಟ್ರೋಲ್ ಬಂಕ್ ನಿಂದ ಪೈಚಾರ್ ವರೆಗೆ 4 ಬಂಕ್ ಗಳಲ್ಲಿ ಕ್ರಿಕೆಟ್ ಬ್ಯಾಟ್ ಮತ್ತು ವಿಕೆಟುಗಳನ್ನು ಇರಿಸಿ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಗಳನ್ನು ಕೂಗಿ ,ಕೇಕು ಕತ್ತರಿಸುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

 


ಗಾಂಧಿನಗರದ ಪೆಟ್ರೋಲ್ ಬಂಕ್‌ನಲ್ಲಿ ಆರಂಭಗೊಂಡ ಪ್ರತಿಭಟನೆ ಹಳೆಗೇಟು, ಒಡಬಾಯಿ ಪೆಟ್ರೋಲ್ ಪಂಪ್ ಬಳಿ ಮುಂದುವರೆದು ಬಳಿಕ ಪೈಚಾರು ಪೆಟ್ರೋಲ್ ಪಂಪ್‌ನಲ್ಲಿ ಸಮಾರೋಪಗೊಂಡಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿರುವ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಧನಂಜಯ ಅಡ್ಪಂಗಾಯ, ರಾಜರಾಮ್ ಭಟ್ ಹಳೆಗೇಟು, ಪಿ.ಎಸ್. ಗಂಗಾಧರ್, ಶ್ರೀಹರಿ ಕುಕ್ಕುಡೇಲು, ಎಂ. ವೆಂಕಪ್ಪಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ್ ಕೇಂದ್ರ ಮತ್ತು ರಾಜ್ಯ ಸರ್ಕಾರದ ಬೆಲೆ ಏರಿಕೆಯ ನೀತಿಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿ ಇದ್ದ ಸಂದರ್ಭ ಇಂಧನ ಬೆಲೆಯನ್ನು ವಿರೋಧಿಸಿ ಸೈಕಲ್ ಏರಿದ ಬಿಜೆಪಿ ನಾಯಕರು ಇಂದು ಎಲ್ಲಿ ಅಡಗಿದ್ದಾರೆ? ಎಂದು ಪ್ರಶ್ನಿಸಿದರು. ದೇಶದ ಸಂಪತ್ತನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಿ, ಇಂಧನ ಬೆಲೆಯಿಂದ ಬರುತ್ತಿರುವ ಕೋಟಿ ಕೋಟಿ ಆದಾಯವನ್ನು ಏನು ಮಾಡಿದರು? ಎಂದು ಕೇಳಿದರು. ದೇಶವನ್ನು ಅಧಃಪತನಕ್ಕೆ ಕೊಂಡೊಯ್ಯುತ್ತಿರುವ ಬಿಜೆಪಿ ಸರ್ಕಾರ ದೇಶದ ಜನತೆಯನ್ನು ಸರ್ವನಾಶ ಮಾಡಲು ಹೊರಟಿದೆ ಎಂದು ಆರೋಪಿಸಿದರು.

ಹಿಂದೆ ಬಿಜೆಪಿಯವರು ನೆರೆ ಹೊರೆ ದೇಶಗಳಲ್ಲಿನ ಪೆಟ್ರೊಲ್ ಬೆಲೆಯನ್ನು ನಮ್ಮ ದೇಶದ ಪೆಟ್ರೊಲ್ ಬೆಲೆಗೆ ಹೋಲಿಸಿ ,ಬಿಜೆಪಿ ಸರಕಾರ ದೇಶದಲ್ಲಿ ಬಂದರೆ ಬಿಸ್ಲೇರಿ ನೀರಿನ ಬಾಟಲಿ ದರದಲ್ಲಿ ಮಾರಾಟ ಮಾಡುತ್ತೇವೆ ಎಂದು ಅಂದು ಭಾಷಣ ಮಾಡಿ, ಇಂದು ನಿದ್ದೆ ಮಾಡಿದ್ದಾರಾ ? ಅಥವಾ ಬೇರೆ ಏನಾದರೂ ಮಾಡುತ್ತಿದ್ದಾರಾ ? ಇವರು ಹಿಂದಿನ ಸರಕಾರ ಸಾಲಮಾಡಿ ಹೋಗಿದೆ ಎಂಬ ಆರೋಪ ಮಾಡುತ್ತಿದ್ದಾರೆ ,ಆದರೆ 70 ವರ್ಷಗಳಲ್ಲಿ ಕಾಂಗ್ರೆಸ್ ಮಾಡಿದ ಸಾಲ 53 ,11 ,081 ಸಾವಿರ ಕೋಟಿ ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕೇವಲ 57 ತಿಂಗಳಲ್ಲಿ ಅಂದರೆ 2014 ರಿಂದ 2018 ರ ಅವಧಿಗೆ ಮಾಡಿದ ಸಾಲ ಎಷ್ಟು ಗೊತ್ತೇ ? 3028 ,945 ಸಾವಿರ ಕೋಟಿಗಳು ಎಂದು ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಪ್ರಶ್ನಿಸಿದರು.


ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಎನ್ ಎಸ್ ಯು ಐ ಅಧ್ಯಕ್ಷ ಕೀರ್ತನ್ ಕೊಡಪಾಲ ಇಂಧನ ಬೆಲೆ ಏರಿಕೆಯನ್ನು ವಿರೋಧಿಸಿ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ ಟಿ.ಎಂ. ಶಹೀದ್, ಕಾಂಗ್ರೆಸ್ ಮುಖಂಡರುಗಳಾದ ಮಹಮ್ಮದ್ ಕುಂಞಿ ಗೂನಡ್ಕ, ಗೋಕುಲ್‌ದಾಸ್, ನಂದರಾಜ್ ಸಂಕೇಶ್, ಸುರೇಶ್ ಅಮೈ, ಶರೀಫ್ ಕಂಠಿ, ಶಾಫಿ ಕುತ್ತಮೊಟ್ಟೆ, ಶೌವಾದ್ ಗೂನಡ್ಕ ಹಾಗೂ ಯೂತ್ ಕಾಂಗ್ರೆಸ್, ಎಸ್‌ಎಸ್‌ಯುಐನ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.