ಕಲ್ಮಡ್ಕ ಹೊನಲು ಬೆಳಕಿನ ಕ್ರೀಡಾಂಗಣ ರಚನೆಯಲ್ಲಿ ಭ್ರಷ್ಟಾಚಾರದ ಆರೋಪ – ಪಂಚಾಯತ್ ಆಡಳಿತ ಮಂಡಳಿ ಸಭೆ

Advt_Headding_Middle

5 ವರ್ಷಗಳ ಎಲ್ಲ ಕಾಮಗಾರಿಗಳ ತನಿಖೆಗೆ ಶಿಫಾರಸು

ಕಲ್ಮಡ್ಕ ಗ್ರಾ.ಪಂ. ವ್ಯಾಪ್ತಿಯ ಕಲ್ಮಡ್ಕ ಶಾಲಾ ಬಳಿ 14-15ನೇ ಸಾಲಿನಲ್ಲಿ ಹೊನಲು ಬೆಳಕಿನ ಕ್ರೀಡಾಂಗಣ ರಚನೆಯಲ್ಲಿ ಭ್ರಷ್ಟಾಚಾರ ನಡೆದಿದೆಯೆಂದು ಗ್ರಾಮಸ್ಥ ರಾಜಾರಾಮ್ ಭಟ್ ವೀಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹಾಕಿ ಅದು ವೈರಲ್ ಆಗಿ ಗ್ರಾಮದಲ್ಲಿ ಸಂಚಲನ ಉಂಟಾದ ಬಗ್ಗೆ ಚರ್ಚಿಸಲು ಕಲ್ಮಡ್ಕ ಪಂಚಾಯತ್ ನ ವಿಶೇಷ ಸಭೆಯು ಜೂ. 15ರಂದು ನಡೆದು ಕಳೆದ 5 ವರ್ಷಗಳಲ್ಲಿ ಗ್ರಾಮ ವ್ಯಾಪ್ತಿಯಲ್ಲಿ ನಡೆದ ಎಲ್ಲ ಕಾಮಗಾರಿಗಳ ತನಿಖೆ ನಡೆಸಬೇಕೆಂದು ತಾಲೂಕು ಪಂಚಾಯತ್ ಗೆ ಶಿಫಾರಸು ಮಾಡಿದ ಘಟನೆ ನಡೆಯಿತು.

ಗ್ರಾ.ಪಂ.‌ ಅಧ್ಯಕ್ಷೆ ಶ್ರೀಮತಿ ಹಾಜಿರಾ ಗಫೂರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ ಸಿ.ವಿ, ಕಾರ್ಯದರ್ಶಿ ಗೋಪಾಲಕೃಷ್ಣ ಕೆ, ಉಪಾಧ್ಯಕ್ಷರಾದ ಮಹೇಶ್ ಕುಮಾರ್ ಕರಿಕ್ಕಳ, ಸದಸ್ಯರಾದ ಕೆ.ಡಿ. ಜಯಲತಾ, ಪವಿತ್ರ ಕುದ್ವ, ಲೋಕೇಶ್ ಆಕ್ರಿಕಟ್ಟೆ, ಲೋಕಯ್ಯ ನಾಯ್ಕ ಬೊಳಿಯೂರು, ಮೀನಾಕ್ಷಿ ಕೆ, ಹರೀಶ್ ಎಂ, ಮೋಹಿನಿ ಎಂ, ಸಭೆಯಲ್ಲಿ ಉಪಸ್ಥಿತರಿದ್ದರು.
5 ವರ್ಷಗಳಿಂದ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಎಲ್ಲಾ ಕಾಮಗಾರಿಗಳನ್ನು ಪಂಚಾಯತ್ ಸದಸ್ಯರು ಮೊದಲಾಗಿ ಪರಿಶೀಲಿಸಿ ಬಳಿಕ ತಾ.ಪಂ. ಕಾರ್ಯನಿರ್ವಹಣಾಧಿಕಾರಿಯವರಿಗೆ ಸೂಕ್ತ ತನಿಖೆ ನಡೆಸುವಂತೆ ಮನವಿ ನೀಡಲಾಗುವುದೆಂದು ಸಭೆಯಲ್ಲಿ ನಿರ್ಣಯಿಸಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.