ಅಮರಮುಡ್ನೂರು ಪಂಚಾಯತ್ ವ್ಯಾಪ್ತಿಯಲ್ಲಿ ಸೀಲ್ ಡೌನ್ – ಬ್ಯಾರಿಕೇಡ್ ಅಳವಡಿಸಿ ಪ್ರವೇಶ ನಿರ್ಬಂಧ

Advt_Headding_Middle

 

ಅಮರಮುಡ್ನೂರು ಪಂಚಾಯತ್ ಸೀಲ್ ಡೌನ್ ಹಿನ್ನೆಲೆಯಲ್ಲಿ ತುರ್ತು ಸಭೆಯು ಜೂ.14 ರಂದು ಪಂ.ಅಧ್ಯಕ್ಷೆ ಪದ್ಮಪ್ರಿಯ ಮೇಲ್ತೋಟ ರವರ ಅಧ್ಯಕ್ಷ ತೆಯಲ್ಲಿ ನಡೆಯಿತು. ಪಂ.ಉಪಾಧ್ಯಕ್ಷೆ ಶಶಿಕಲಾ ಕೇನಡ್ಕ, ಪಿ.ಡಿ.ಒ ಆಕಾಶ್, ಕಾರ್ಯದರ್ಶಿ ದಯಾನಂದ ಪತ್ತುಕುಂಜ ಉಪಸ್ಥಿತರಿದ್ದರು.

ಅಮರಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸೀಲ್ ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ರಸ್ತೆಯ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸುವುದು. ಅಮರಪಡ್ನೂರು ಮತ್ತು ಅಮರಮುಡ್ನೂರು ಗ್ರಾಮದಲ್ಲಿರುವ ಎಲ್ಲಾ ಅಂಗಡಿ ಮುಂಗಟ್ಟುಗಳು, ಬ್ಯಾಂಕ್, ಅಂಚೆ ಕಛೇರಿ, ಸಹಕಾರಿ ಸಂಘಗಳು ಸಂಪೂರ್ಣ ಬಂದ್ ಮಾಡಿಸುವುದು. ಬೇರೆ ಗ್ರಾಮಗಳಿಂದ ಬರುವ ವಾಹನಗಳಿಗೆ ಪ್ರವೇಶ ನಿರ್ಬಂಧ ಹೇರುವುದಾಗಿ ತೀರ್ಮಾನಿಸಲಾಯಿತು.

ಅಗತ್ಯ ಆಹಾರ ಸಾಮಾಗ್ರಿಗಳು ಬೇಕಾದಲ್ಲಿ ಸ್ಥಳೀಯ ಪಂಚಾಯತ್ ಸದಸ್ಯರಿಗೆ ಅಥವಾ ಅಂಗಡಿ ಮಾಲಕರಿಗೆ ದೂರವಾಣಿ ಮೂಲಕ ತಿಳಿಸಿದಲ್ಲಿ ಪಾವತಿ ಆಧಾರದಲ್ಲಿ ಸಾಮಾಗ್ರಿಗಳನ್ನು ಮನೆಗೆ ತಲುಪಿಸುವ ವ್ಯವಸ್ಥೆ ಮಾಡುವುದಾಗಿ ತೀರ್ಮಾನಿಸಲಾಗಿದೆ. ಕೋವಿಡ್ ಸಂದರ್ಭ ಅವಶ್ಯ ಸಹಾಯ ಬೇಕಾದಲ್ಲಿ ಕೋವಿಡ್ ಸಹಾಯವಾಣಿಗೆ ಸಂಪರ್ಕಿಸುವುದು. ಸೀಲ್ ಡೌನ್ ಸಂದರ್ಭ ಅನಗತ್ಯ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಪ್ರಕಾರ ದಂಡ ವಿಧಿಸುವ ಬಗ್ಗೆ ನಿರ್ಣಯಿಸಲಾಗಿದೆ. ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಹಾಲು ಹಾಕಲು ಬೆಳಗ್ಗೆ ಮತ್ತು ಸಂಜೆ ನಿಯಮದ ಪ್ರಕಾರ ಸಾಮಾಜಿಕ ಅಂತರ ಕಾಯ್ದುಕೊಂಡು ನಿರ್ವಹಿಸಲು ಸೂಚನೆ ನೀಡುವುದಾಗಿ ತೀರ್ಮಾನಿಸಲಾಗಿದೆ. ಸಭೆಯಲ್ಲಿ ಪಂಚಾಯತ್ ಸದಸ್ಯರು, ಗ್ರಾಮ ಲೆಕ್ಕಾಧಿಕಾರಿ, ಆರೋಗ್ಯ ಸಹಾಯಕಿಯರು, ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.