Breaking News

ಸುಳ್ಯ ಶಿವ ಆಂಬ್ಯುಲೆನ್ಸ್ ಮತ್ತು ಟ್ರಾವೆಲ್ಸ್ ವತಿಯಿಂದ 100 ಆಹಾರ ಪೊಟ್ಟಣಗಳ ವಿತರಣೆ

Advt_Headding_Middle

 

ಸುಳ್ಯ ಶಿವ ಆಂಬ್ಯುಲೆನ್ಸ್ ಮತ್ತು ಟ್ರಾವೆಲ್ಸ್ ಸಂಸ್ಥೆಯ ಮಾಲಕ ಶಿವರವರ ನೇತೃತ್ವದಲ್ಲಿ 100 ಮಂದಿಗೆ ಆಹಾರ ಪೊಟ್ಟಣ ವಿತರಣೆ ಇಂದು ನಡೆಯಿತು. ಸುದ್ದಿ ಪತ್ರಿಕೆಯ ವರದಿಗಾರ ಹಸೈನಾರ್ ಜಯನಗರ ಆಹಾರ ಪೊಟ್ಟಣವನ್ನು ಜ್ಯೋತಿ ವೃತ್ತದ ಬಳಿ ವಾಹನ ಚಾಲಕರಿಗೆ ವಿತರಿಸುವ ಮೂಲಕ ಚಾಲನೆ ನೀಡಿದರು.

 

ಈ ಸಂದರ್ಭದಲ್ಲಿ ಮಾತನಾಡಿದ ಶಿವರವರು “ಲಾಕ್ ಡೌನ್ ಹಿನ್ನೆಲೆಯಲ್ಲಿ ಅಂಗಡಿ-ಮುಂಗಟ್ಟುಗಳು ಮುಚ್ಚಲ್ಪಟ್ಟಿರುವುದರಿಂದ ಹೊರ ಊರುಗಳಿಂದ ಬರುತ್ತಿರುವ ಗೂಡ್ಸ್ ಲಾರಿ ಚಾಲಕರು, ಕಾರ್ಮಿಕರು, ಚಿಕಿತ್ಸಾ ನಿಮಿತ್ತ ಆಸ್ಪತ್ರೆಗಳಿಗೆ ತೆರಳುವವರು ಸಂಚರಿಸುವ ರಸ್ತೆಗಳಲ್ಲಿ ಆಹಾರ ಪದಾರ್ಥಗಳು ಸಿಗದೆ ಸಂಕಷ್ಟದಲ್ಲಿ ಇರುತ್ತಾರೆ. ಇದಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಕನಿಷ್ಠ ಒಂದು ದಿನವಾದರೂ ಈ ಸೇವೆಯನ್ನು ಮಾಡುವ ಬಗ್ಗೆ ಆಲೋಚನೆ ಮಾಡಿದೆ. ಅದರಂತೆ ಇಂದು ನನ್ನ ಸಹ ಚಾಲಕರ ಸಹಯೋಗದೊಂದಿಗೆ ಒಂದು ಕಾರ್ಯ ಮಾಡಲು ಸಾಧ್ಯವಾಯಿತು” ಎಂದು ಹೇಳಿದರು.

ಪ್ರಸ್ತುತ ಪರಿಸ್ಥಿತಿ ಕೊರೋನಾ ಸಂಕಷ್ಟದಿಂದ ಜನರು ಬಳಲುತ್ತಿದ್ದು ನಮ್ಮ ಸಂಸ್ಥೆಯ ವತಿಯಿಂದ ಹಲವಾರು ಉಚಿತ ಸೇವೆಗಳನ್ನು ನೀಡಿರುತ್ತೇವೆ. ಗುತ್ತಿಗಾರು ಸುಬ್ರಹ್ಮಣ್ಯ ಭಾಗದ ಜನತೆಗೆ ಸಹಕಾರವಾಗುವಂತೆ ಒಂದು ಆಂಬ್ಯುಲೆನ್ಸ್ ವಾಹನವನ್ನು ಉಚಿತವಾಗಿ ನೀಡಿರುತ್ತೇವೆ. ಇಂತಹ ಸಂಕಷ್ಟ ಸಂದರ್ಭದಲ್ಲಿ ನನ್ನಿಂದ ಆಗುವ ಸಹಾಯವನ್ನು ಸಮಾಜಕ್ಕೆ ನೀಡುತ್ತಿದ್ದೇನೆ ಎಂದು ಅವರು ಹೇಳಿದರು.

 ಪತ್ರಿಕಾ ಕಚೇರಿಯಲ್ಲಿ ಉದ್ಯೋಗದಲ್ಲಿರುವ ಸಿಬ್ಬಂದಿಗಳಿಗೆ ಸಹಕರಿಸುವ ನಿಟ್ಟಿನಲ್ಲಿ ಸುಳ್ಯ ಸುದ್ದಿ ಬಿಡುಗಡೆ ಕಚೇರಿಯ ಸಿಬ್ಬಂದಿಗಳಿಗೂ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ನೀಡಿರುತ್ತೇನೆ. ಇದೇ ರೀತಿ ಮುಂದಿನ ದಿನಗಳಲ್ಲಿ ಕೂಡ ನನ್ನಿಂದ ಆಗುವ ಸಮಾಜಸೇವೆಯನ್ನು ಸದಾ ಮುಂದುವರಿಸುತ್ತೇನೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಆಂಬ್ಯುಲೆನ್ಸ್ ಚಾಲಕರಾದ ಆಬಿದ್ ಜಯನಗರ, ಶಮೀಮ್ ಜೂನಿಯರ್ ಕಾಲೇಜ್, ಇಬ್ರಾಹಿಂ ಕುರುಂಜಿಗುಡ್ಡೆ ತೌಫೀಕ್ ಜಯನಗರ, ಶಫೀಕ್, ಶಾಹಿದ್ ಸಹಕರಿಸಿದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.