ಕಲ್ಚೆರ್ಪೆ ಕಸದ ಕೊಳಕು ನೀರು ಪಯಸ್ವಿನಿ ಸೇರಿದ ಕುರಿತು ಮಾಧ್ಯಮದಲ್ಲಿ ವರದಿ

Advt_Headding_Middle

 

ಸ್ಥಳ ಪರಿಶೀಲನೆಗೆ ತೆರಳಿದ ನ.ಪಂ. ಅಧ್ಯಕ್ಷ ಹಾಗೂ ಅಧಿಕಾರಿಗಳು

ಭರವಸೆ ಈಡೇರಿಸದ ನ.ಪಂ. ತಂಡಕ್ಕೆ ಸ್ಥಳೀಯರ ಆಕ್ರೋಶ

.

 

ಕಲ್ಚೆರ್ಪೆ ಯಲ್ಲಿ ತ್ತಾಜ್ಯದ ಕೊಳಕು ನೀರು ಪಯಸ್ವಿನಿ ಸೇರಿದ ವರದಿ ಮಾಧ್ಯಮ ದಲ್ಲಿ ಪ್ರಕಟವಾದ ಹಿನ್ನಲೆಯಲ್ಲಿ ಇಂದು ನ.ಪಂ. ಅಧ್ಯಕ್ಷರು ಹಾಗೂ ಅಧಿಕಾರಿಗಳು ಪತ್ರಕರ್ತರನ್ನು ಜತೆಗೂಡಿ ಸ್ಥಳ ವೀಕ್ಷಣೆಗೆ ತೆರಳಿದ ಹಾಗೂ ಈ ವೇಳೆ ಸ್ಥಳೀಯರು ನ.ಪಂ. ನವರ ಮೇಲೆ ಆಕ್ರೋಶಗೊಂಡ ಘಟನೆ ನಡೆಯಿತು.

.

 

ಕಲ್ಚೆರ್ಪೆ ಯಲ್ಲಿ ನಗರದ ಕಸವನ್ನು ಹಾಕಲಾಗಿದ್ದು ಪ್ರತೀ ವರ್ಷದಂತೆ ಮಳೆಗಾಲದಲ್ಲಿ ಮಳೆಯ ನೀರು ಹಾಗೂ ಪೂಮಲೆ ಗುಡ್ಡ ದಿಂದ ಹರಿದು ಬರುವ ನೀರು ಕಸವನ್ನು ಸೇರಿ ಅದು ಪಯಸ್ವಿನಿ ಸೇರುತ್ತಿತ್ತು. ಈ ಬಾರಿಯೂ ಕೊಳಕು ನೀರು ಪಯಸ್ವಿನಿ ಸೇರಿದ ಕುರಿತು ಸ್ಥಳೀಯರೇ ವಿಡಿಯೋ ಚಿತ್ರೀಕರಿಸಿ ಮಾಧ್ಯಮಗಳಿಗೆ ನೀಡಿದ್ದರು. ಆ ವಿಡಿಯೋ ಜತೆಗೆ ವರದಿ ಮಾಧ್ಯಮದಲ್ಲಿ ಪ್ರಕಟಗೊಂಡಿತು. ಆದರೆ ನ.ಪಂ.ಅಲ್ಲಿ ಅಭಿವೃದ್ಧಿ ಕಾರ್ಯಕೈಗೊಳ್ಳುತ್ತಿದೆ ಈ ಬಗ್ಗೆ ತಾವು ಸ್ಥಳಕ್ಕೆ ಬರಬೇಕು. ಸಮಸ್ಯೆ ಪರಿಹರಿಸಲು ನ.ಪಂ. ಕೆಲಸ ಮಾಡುತ್ತಿದೆ ಎಂದ
ನ.ಪಂ. ಅಧ್ಯಕ್ಷ ವಿನಯ ಕಂದಡ್ಕರು ಪತ್ರಕರ್ತರ ಸಂಘವನ್ನು ಸಂಪರ್ಕಿಸಿ ಸ್ಥಳ ವೀಕ್ಷಣೆಗೆ ಹೋಗುತ್ತಿದ್ದು ತಾವು ಬರಬೇಕೆಂದು ವಿನಂತಿಸಿದ್ದರು. ಈ ಹಿನ್ನಲೆಯಲ್ಲಿ ಪತ್ರಕರ್ತರು ನ.ಪಂ. ತಂಡದ ಜತೆ ಸ್ಥಳಕ್ಕೆ ಹೋಗಿದ್ದರು

ನ.ಪಂ. ನವರು ಬರುವ ವಿಷಯ ತಿಳಿದು ಕಲ್ಚೆರ್ಪೆಯ ಸ್ಥಳೀಯರು ಬಂದಿದ್ದರು.

ಸ್ಥಳ ವೀಕ್ಷಣೆ ಸಂದರ್ಭ ವಿವರ ನೀಡಿದ ನ.ಪಂ.ಅಧ್ಯಕ್ಷರು ಕಳೆದ ಹಲವಾರು ವರ್ಷಗಳಿಂದ ಇಲ್ಲಿ ತುಂಬಿರುವ ಕಸದ ರಾಶಿಗಳನ್ನು ಬೇರೆಡೆಗೆ ಕೊಂಡೊಯ್ಯದೇ ಇದಕ್ಕೆ ಇಲ್ಲಿಯೇ ಸೂಕ್ತ ವ್ಯವಸ್ಥೆಯನ್ನು ಮಾಡುವ ಬಗ್ಗೆ ಮಾತನಾಡುತ್ತಿದ್ದರು. ಕಳೆದ ಎರಡು ದಿನಗಳಿಂದ ಇಲ್ಲಿ ತುಂಬಿರುವ ಕಸದ ರಾಶಿಯ ಹಿಂಭಾಗದಲ್ಲಿ ಮೇಲೆ ಜರಿಯಿಂದ ನೀರು ಬರುತ್ತಿದ್ದು ಇದರಿಂದ ಇಲ್ಲಿ ಹರಿಯುವ ನೀರು ಕಲುಷಿತಗೊಳ್ಳುತ್ತದೆ ಎಂಬ ಮುನ್ನೆಚ್ಚರಿಕೆಯಿಂದ ನೀರು ಹರಿಯುವ ಕಣಿಯನ್ನು ಬಿಡಿಸಿ ಕೊಡಲಾಗುತ್ತಿತ್ತು. ಆದರೆ ಕಳೆದ ಎರಡು ದಿನಗಳಿಂದ ಏಕಾಏಕಿ ಭಾರಿ ಮಳೆ ಸುರಿಯುತ್ತಿದ್ದು ಒಮ್ಮೆಲೆ ನೀರಿನ ಪ್ರಮಾಣ ಹೆಚ್ಚಾದ ಕಾರಣ ಈ ಘಟನೆ ನಡೆಯಲು ಕಾರಣವಾಯಿತು ಎಂದು ಮಾಹಿತಿ ನೀಡುತ್ತಿದ್ದರು.

ಈ ವೇಳೆ ಸ್ಥಳಿಯ ನಿವಾಸಿ ಗಳಾದ ಬಾಲಚಂದ್ರ, ಅಶೋಕ ಪೀಚೆ, ಜನಾರ್ದನ ಕಲ್ಚರ್ಪೆ, ಸ್ಥಳಕ್ಕೆ ಬಂದ ನ.ಪಂ. ತಂಡವನ್ನು ಉದ್ದೇಶಿಸಿ ಇಲ್ಲಿಯ ವಸ್ತು ಸ್ಥಿತಿಯನ್ನು ಪತ್ರಕರ್ತರಿಗೆ ನೀಡಬೇಕು. ನಿಮಗೆ ಬೇಕಾದಂತೆ ಹೇಳಬಾರದು. ಮಳೆ ಆರಂಭವಾಗಲು ಕಾದು ಕುಳಿತು ಇದೀಗ ಇಲ್ಲಿಗೆ ಬಂದು ಸ್ಥಳೀಯ ಪರಿಸರದ ನಮಗೆ ಸಮಸ್ಯೆಯನ್ನುಂಟು ಮಾಡಿದ್ದೀರಿ. ಕಳೆದ ವರ್ಷ ವೂ ಇಲ್ಲಿಗೆ ಬಂದು ಭರವಸೆ ನೀಡಿ ಹೋದವರು ಆ ಬಳಿಕ ಬಂದಿಲ್ಲ. ನಾವು ಎಷ್ಟು ಎಂದು ಸಹಿಸಿಕೊಳ್ಳೋದು. ಯಾಕೆ ಈ ರೀತಿ ಮಾಡುತ್ತೀರಿ. ನೆಮ್ಮದಿಯಿಂದ ಬದುಕುವ ವಾತಾವರಣ ಮಾಡಿಕೊಡಿ ಎಂದು ಆಕ್ರೋಶಗೊಂಡರು. ಈಗ ಮಾಡಿದ ಕೆಲಸವನ್ನು ಕಳೆದ ಎರಡು ಅಥವಾ ಮೂರು ತಿಂಗಳ ಮೊದಲೇ ಮಾಡಿದ್ದಲ್ಲಿ ಈಗ ಈ ಸಮಸ್ಯೆ ಬರುತ್ತಿರಲಿಲ್ಲ. ಇಲ್ಲಿ ಅಭಿವೃದ್ದಿ ಮಾಡುವುದಿದ್ದರೆ ನಾವು ನಿಮ್ಮ ಕೆಲಸಕ್ಕೆ ಅಡ್ಡಿಪಡಿಸಲು ಬಂದಿರುವುದಿಲ್ಲ. ಆದರೆ ಕೊಳಕು ನೀರು ಪಯಸ್ವಿನಿ ಸೇರುವುದನ್ನು ತಪ್ಪಿಸಲು ವಿನಂತಿಸುತ್ತೇವೆ. ಕಳೆದ ಹತ್ತಾರು ವರ್ಷಗಳಿಂದ ನಾವು ನೀಡುವ ಸಲಹೆಯನ್ನು ಸ್ವೀಕರಿಸಿದೆ ಇರುವುದರಿಂದ ಇಂದು ಇದು ಇಷ್ಟು ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ ಎಂದು ಅವರು ಹೇಳಿದರು. ಈಗಿನ ಅಧ್ಯಕ್ಷರ ಮೇಲೆ ನಮಗೆ ವಿಶ್ವಾಸವಿದೆ ಅವರ ನೇತೃತ್ವದಲ್ಲಿ ಹಲವಾರು ವರ್ಷಗಳ ಕಸಗಳಿಗೆ ಮುಕ್ತಿ ಸಿಗಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ನಿಮ್ಮ ವಿಶ್ವಾಸದಂತೆ ಆದಷ್ಟು ಶೀಘ್ರದಲ್ಲಿ ಈ ಕಸಗಳನ್ನು ಇಲ್ಲಿಯೇ ಮುಕ್ತಿ ದೊರಕಿಸಿ ಕೊಡುತ್ತೇವೆ ಎಂದು ಭರವಸೆ ನೀಡಿದರು.

 

.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.