ಕೊರೋನ ಸಂಕಷ್ಟಕ್ಕೆ ನೆರವಾದ ಸಂಪಾಜೆ ಸಹಕಾರಿ ಸಂಘ

Advt_Headding_Middle

 

ಆಶಾ ಕಾರ್ಯಕರ್ತೆಯರಿಗೆ ಗೌರವಧನ,ಅಂಗನವಾಡಿ ಕಾರ್ಯಕರ್ತೆಯರು,ಬಡಕುಟುಂಬಗಳಿಗೆ ಆಹಾರ ಕಿಟ್

ಸಂಪಾಜೆ ಗ್ರಾಮ ಪಂಚಾಯತ್ ಗೆ ರೂ.25000 ಸಹಾಯಧನ

ದ. ಕ. ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಕೊರೋನ ಸಂಕಷ್ಟದ ಸಮಯದಲ್ಲಿ ಆಶಾ ಕಾರ್ಯಕರ್ತೆಯರು,ಅಂಗನವಾಡಿ ಕಾರ್ಯಕರ್ತೆಯರು, ಬಡಕುಟುಂಬಗಳಿಗೆ ವಿಶೇಷ ನೆರವು ನೀಡಿದ್ದು,ಪೋಲಿಸ್ ಇಲಾಖೆಗೆ ಮಾಸ್ಕ್, ಸಾನಿಟೈಸರ್ ಹಾಗೂ ಗ್ರಾಮ ಪಂಚಾಯತ್ ಗೆ ಸಹಾಯಧನ ನೀಡಿದೆ.
ಸಹಕಾರಿ ಸಂಘದಿಂದ ತನ್ನ ಗ್ರಾಮ ವ್ಯಾಪ್ತಿಯಲ್ಲಿರುವ ಆಶಾ ಕಾರ್ಯಕರ್ತೆರಿಗೆ ಗೌರವಧನ ,
ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕರಿಗೆ ಪಡಿತರ ಮತ್ತು ಆಹಾರ ಕಿಟ್, ಪೋಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಮಾಸ್ಕ್, ಹ್ಯಾಂಡ್ ಗ್ಲೌಸ್ ಹಾಗೂ ಸ್ಯಾನಿಟೈಸರ್, ಸಂಪಾಜೆ ಗ್ರಾಮ ಪಂಚಾಯತ್ ಸ್ವಚ್ಛತಾ ಸಮಿತಿಗೆ ರೂ.25,000/- ಸಹಾಯಧನ, ಸಂಪಾಜೆ ಗ್ರಾಮ ವ್ಯಾಪ್ತಿಯಲ್ಲಿ ವಾಸವಾಗಿರುವ ಪಡಿತರ ಕಾರ್ಡು ರಹಿತ ಮತ್ತು ಕಡು ಬಡಕುಟುಂಬಗಳಿಗೆ ಪಡಿತರದೊಂದಿಗೆ ಆಹಾರ ಕಿಟ್ ವಿತರಣೆಯು ಜೂ.16ರಂದು ಸಂಘದ ಸಮನ್ವಯ ಸಭಾಭವನದಲ್ಲಿ ಸಂಘದ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕೊರೋನಾದ ಈ ಸಂಕಷ್ಟದ ಸಂದರ್ಭದಲ್ಲಿ ತನ್ನ ಜೀವದ ಹಂಗನ್ನು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಪೋಲೀಸ್ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರ ಸೇವೆಯು ಅಮೂಲ್ಯವಾದದ್ದು. ಅಂತಹವರ ಸೇವೆಯನ್ನು ಗುರುತಿಸಿ ಗೌರವಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸಂಪಾಜೆ ಗ್ರಾಮದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರಲು ತಮ್ಮ ಅಮೂಲ್ಯ ಸೇವೆಯು ಕಾರಣವಾಗಿದೆ. ತಮ್ಮೆಲ್ಲರ ಬೆನ್ನೆಲುಬಾಗಿ ಸಂಘವು ಸದಾ ಇರುತ್ತದೆಯೆಂದು ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಹೇಳಿದರು. ಈ ಸಂದರ್ಭದಲ್ಲಿ ಸಂಪಾಜೆ ಗ್ರಾಮ ಪಂಚಾಯಿತಿನ ಸ್ವಚ್ಛತಾ ಸಮಿತಿಗೆ ಸಂಘದಿಂದ ರೂ.25,000/- ಸಹಾಯಧನವನ್ನು ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ .ಹಮೀದ್ ಸ್ವೀಕರಿಸಿದರು. ಸಂಘದನಿರ್ದೇಶಕರಾದ ಆನಂದ ಪಿ.ಎಲ್ .,ಜಗದೀಶ್ ಕೆ.ಆರ್, ಸುಮತಿ ಶಕ್ತಿವೇಲು ಯಮುನಾ ಬಿ.ಎಸ್, ಹಮೀದ್ ಎಚ್, ಜಾನಿ ಕೆ.ಪಿ, ಚಂದ್ರಶೇಖರ ಕೈಪಡ್ಕ ಮತ್ತು ಪ್ರಕಾಶ್ ಕೆ.ಪಿ .ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಕುಮಾರ್ ಜೈನ್ ಸ್ವಾಗತಿಸಿ ,ಉಪಾಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ ವಂದನಾರ್ಪಣೆಗೈದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.