ದೇವಚಳ್ಳ : ಕೋವಿಡ್ ಸೆಂಟರ್‌ಗೆ ಹೋಗಲು ನಿರಾಕರಿಸಿದ ವ್ಯಕ್ತಿಯನ್ನು ಪೊಲೀಸ್ ಸಹಾಯದಿಂದ ಮನವೊಲಿಸಿ ಸೆಂಟರ್‌ಗೆ ದಾಖಲಿಸಿದ ಪಂಚಾಯತ್

Advt_Headding_Middle

ಪಿಡಿಓಗೆ ವ್ಯಕ್ತಿಯ ಬೆದರಿಕೆ ಆರೋಪ – ಪೋಲೀಸ್ ದೂರು

ದೇವಚಳ್ಳ ಗ್ರಾಮದಲ್ಲಿ ಕೊರೋನಾ ಸೋಂಕಿತರೊಬ್ಬರು ಕೊವಿಡ್ ಸೆಂಟರ್ ಗೆ ಹೋಗಲು ನಿರಾಕರಿಸಿದ ಮತ್ತು ಪಂಚಾಯತ್ ನವರು ಹಾಗೂ ಪೋಲೀಸರು ಆತನನ್ನು ಪತ್ತೆ ಮಾಡಿ ಕೋವಿಡ್ ಸೆಂಟರ್ ಗೆ ದಾಖಲಿಸಿದ ಹಾಗೂ ಆತ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಪೋಲೀಸ್ ದೂರು ನೀಡಲ್ಪಟ್ಟಿರುವ ಘಟನೆ ವರದಿಯಾಗಿದೆ.

ದೇವಚಳ್ಳ ಗ್ರಾಮದ ಕಂದ್ರಪ್ಪಾಡಿಯ ಯುವಕನೋರ್ವನಿಗೆ ಕೊವಿಡ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಕೊವಿಡ್ ಸೆಂಟರ್ ಗೆ ದಾಖಲಾಗುವಂತೆ ಪಂಚಾಯತ್ ವತಿಯಿಂದ ಹೇಳಲಾಯಿತಾದರೂ ಅವರು ಅದಕ್ಕೆ ಒಪ್ಪದೆ ಪ್ರತ್ಯೇಕ ಹೋಂ ಐಸೋಲೇಶನ್‌ನಲ್ಲಿ ಇರುವುದಾಗಿ ಹೇಳಿದರೆನ್ನಲಾಗಿದೆ. ಆದರೆ ಅವರ ತಾಯಿಗೂ ಪಾಸಿಟಿವ್ ಬಂತೆನ್ನಲಾಗಿದೆ. ಮತ್ತು ಆ ಯುವಕ ಊರಿನಲ್ಲಿ ತಿರುಗಾಡುತ್ತಿರುವ ಬಗ್ಗೆ ಊರವರಿಂದ ಪಂಚಾಯತ್ ಗೆ ದೂರು ಬಂತೆನ್ನಲಾಗಿದೆ. ಹೀಗಾಗಿ ಪಂಚಾಯತ್ ನವರು ಆತನನ್ನು ಕೋವಿಡ್ ಸೆಂಟರ್‌ಗೆ ಸೇರಿಸಲು ಪ್ರಯತ್ನ ಪಟ್ಟರೂ ಆತ ಹೋಗಲಿಲ್ಲವೆಂದೂ, ಬಳಿಕ ಸುಬ್ರಹ್ಮಣ್ಯ ಪೋಲೀಸರು ಪಂಚಾಯತ್ ನವರು ಹೋಗಿ ಆತನನ್ನು ಮನವೊಲಿಸಿದರೆನ್ನಲಾಗಿದೆ. ಅದಕ್ಕೆ ಒಪ್ಪಿದ ಅವರು ತಮ್ಮಸ್ವಂತ ವಾಹನದಲ್ಲೇ ಹೋಗುತ್ತೇನೆಂದು ಹೇಳಿದಾಗ ಪಂಚಾಯತ್ ನವರು ಮೇಲಾಧಿಕಾರಿಗಳ ಅನುಮತಿಯಂತೆ ಒಪ್ಪಿದರೆನ್ನಲಾಗಿದೆ. ಆದರೆ ಅವರು ಕೋವಿಡ್ ಸೆಂಟರ್ ಗೆ ಹೋಗದೇ ಬೇರೆ ಕಡೆಗೆ ಹೋದರೆಂದೂ, ಬಳಿಕ ತಹಶಿಲ್ದಾರರ ರಿಗೆ ಮಾಹಿತಿ ದೊರೆತು ಅವರ ಮೂಲಕ ಆ ವ್ಯಕ್ತಿಯನ್ನು ಮತ್ತೆ ಪಂಜದ ಕೋವಿಡ್ ಸೆಂಟರ್‌ಗೆ ದಾಖಲಿಸಿದರೆನ್ನಲಾಗಿದೆ. ಬಳಿಕ ಆ ಯುವಕ ಕ್ವಾರೆಂಟೈನ್ ಮುಗಿಸಿ ಬಂದ ಬಳಿಕ ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ದೇವಚಳ್ಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ಬೆದರಿಕೆ ಹಾಕಿದರೆನ್ನಲಾಗಿದ್ದು, ಈ ಬಗ್ಗೆ ಪಿ.ಡಿ.ಒ.ರವರು ಸುಬ್ರಹ್ಮಣ್ಯ ಪೋಲೀಸರಿಗೆ ದೂರು ನೀಡಿದ್ದಾರೆ.

ಉದಯಕುಮಾರ್ ಪ್ರತಿಕ್ರಿಯೆ
ನಾನು ಕಳೆದ ೯ ದಿನಗಳಿಂದ ನನ್ನ ತೋಟದ ಮನೆಯಲ್ಲಿಯೇ ಇದ್ದೆ. ನನ್ನ ಉದ್ಯೋಗದ ನಿಮಿತ್ತ ಮೊಬೈಲ್ ನಲ್ಲಿ ಹಣ ವರ್ಗಾವಣೆ ಮಾಡಲು ನೆಟ್ ವಕ್೯ ಗಾಗಿ ನಮ್ಮ ರಬ್ಬರ್ ಗುಡ್ಡಕ್ಕೆ ಹೋಗಿದ್ದೇನೆ. ಬೇರೆ ಎಲ್ಲೂ ತಿರುಗಾಡಿರಲಿಲ್ಲ. ಆದರೆ ನಮ್ಮ ಮಾತನ್ನು ಪಂಚಾಯತ್‌ನವರು ಅರ್ಥಮಾಡಿಕೊಳ್ಳುವುದಿಲ್ಲ. ಕೊವಿಡ್ ಸೆಂಟರ್ ನಲ್ಲಿಯೂ ಸರಿಯಾದ ವ್ಯವಸ್ಥೆಗಳಿಲ್ಲ. ಎಂದು ಪಾಸಿಟಿವ್ ಬಂದು ಪಂಜ ಕೋವಿಡ್ ಸೆಂಟರ್ ಗೆ ದಾಖಲಾಗಿರುವ ಉದಯಕುಮಾರ್ ಸುದ್ದಿಗೆ ಕರೆ ಮಾಡಿ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.