Breaking News

ನ್ಯೂಝಿಲೆಂಡ್ ನಲ್ಲಿ ಇಂಜಿನಿಯರ್ ಆಗಿದ್ದ ಜಯಪ್ರಕಾಶ್ ಮೇರ್ಕಜೆ ನಿಧನ

Advt_Headding_Middle

 

ನ್ಯೂಝಿಲೆಂಡ್ ನಲ್ಲಿ ಇಂಜಿನಿಯರ್ ಆಗಿದ್ದ ಅರಂತೋಡು ಮೇರ್ಕಜೆಯ ಜಯಪ್ರಕಾಶ್ ರವರು ತೀವ್ರ ಅಸೌಖ್ಯದಿಂದ ಕಳೆದ ರಾತ್ರಿ ನ್ಯೂಝಿಲೆಂಡ್ ನಲ್ಲಿ ನಿಧನರಾದರು. ಅವರಿಗೆ 45 ವರ್ಷ ವಯಸ್ಸಾಗಿತ್ತು.

ಅಸೌಖ್ಯದ ಕಾರಣದಿಂದ ಮೂರು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಬ್ರೈನ್ ಟ್ಯೂಮರ್ ಇರುವುದು 3 ವಾರದ ಹಿಂದೆ ಗೊತ್ತಾಗಿತ್ತು. ಅದಕ್ಕಾಗಿ ಆಪರೇಶನ್ ಮಾಡಲು ಸಿದ್ಧತೆ ನಡೆಸಿದಾಗ ಅವರು ಅಸೌಖ್ಯ ತೀವ್ರಗೊಂಡು ಕೋಮಕ್ಕೆ ಜಾರಿದರೆನ್ನಲಾಗಿದೆ. ಕಳೆದ ರಾತ್ರಿ 2.30 ಕ್ಕೆ ಅವರು ಕೊನೆಯುಸಿರೆಳೆದರು.
ಜಯಪ್ರಕಾಶರ ಪತ್ನಿ ಪುಷ್ಪಾರವರು ನ್ಯೂಝಿಲೆಂಡ್ ನಲ್ಲಿದ್ದು, ಐದು ವಾರದ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ ಬಾಣಂತಿಯಾಗಿದ್ದಾರೆ. ಹಿರಿಯ ಪುತ್ರಿಗೆ 6 ವರ್ಷವಾಗಿದೆ.
ಜಯಪ್ರಕಾಶರು ದುಬೈ, ಆಸ್ಟ್ರೇಲಿಯಾ, ಸಿಂಗಾಪುರ ಮೊದಲಾದೆಡೆ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ಎರಡು ವರ್ಷ ಹಿಂದೆ ನ್ಯೂಝಿಲೆಂಡ್ ಗೆ ಹೋಗಿದ್ದರು. ಅವರ ಧಿಡೀರ್ ಾಸಗಲಿಕೆಯಿಂದ ಕಂಗಾಲಾಗಿರುವ ಪುಷ್ಪಾರವರಿಗೆ ಅಲ್ಲಿರು ಭಾರತೀಯರು ಆಸರೆಯಾಗಿ ನಿಂತಿದ್ದಾರೆ. ಅಲ್ಲಿಯ ಕನ್ನಡ ಸಂಘದವರು, ಇತರ ಭಾರತೀಯ ಸಂಘ ಸಂಸ್ಥೆಯವರು, ಬಿ.ಜೆ.ಪಿ.ಯ ವಿದೇಶ್ ವಿಭಾಗ್ ದವರು ಸಹಕಾರ ನೀಡುತ್ತಿದ್ದಾರೆ
ಅರಂತೋಡಿನ ಕಲ್ಲುಮುಟ್ಲು ನಿವಾಸಿಗಳಾಗಿರುವ ಮೇರ್ಕಜೆ ಆನಂದ ಗೌಡ – ದೇವಕಿ ದಂಪತಿಯ ಪುತ್ರ ರಾಗಿರುವ ಜಯಪ್ರಕಾಶರು ತಂದೆ, ತಾಯಿ, ಸಹೋದರರಾದ ಧನಂಜಯ ಮೇರ್ಕಜೆ, ಉಮೇಶ್ ಮೇರ್ಕಜೆ, ಸಹೋದರಿ ಪುಷ್ಪಾವತಿ ಯಶೋಚಂದ್ರ ಪರಮಲೆ, ಪತ್ನಿ ಪುಷ್ಪಾ, ಮಕ್ಕಳಾದ ಶ್ರಾವಿಕಾ ಹಾಗೂ ಶ್ರವಣ್ ರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.