Breaking News

ಬ್ಯಾಂಕ್, ಫೈನಾನ್ಸ್ ಗಳು ಸಾಲಗಾರರೊಂದಿಗೆ ಸಹಕರಿಸುವಂತೆ ನಿತಿನ್ ಭಟ್ ಆಗ್ರಹ

Advt_Headding_Middle

 

ಸರ್ಕಾರ ಮಧ್ಯೆ ಪ್ರವೇಶಿಸಲು ಮನವಿ

ಕುಕ್ಕೆ ಸುಬ್ರಹ್ಮಣ್ಯ ಒಂದು ಪ್ರವಾಸಿ ತಾಣ ಹಾಗೂ ಪ್ರವಾಸಿಗರು ಬಂದರೆ ಮಾತ್ರ ಇಲ್ಲಿಯ ಜನರು ಒಂದು ಹೊತ್ತು ಊಟ ಮಾಡಬಹುದು. ಇಂತಹ ಲಾಕ್ ಡೌನ್ ಪರಿಸ್ಥಿತಿಯಲ್ಲಿ ಯಾವುದೇ ವ್ಯಾಪಾರ ವ್ಯವಹಾರ ಇಲ್ಲದ ಕಾರಣ ಜೀವನ ನಡೆಸಲು ತುಂಬಾ ಕಷ್ಟ ಪಡುತಿದ್ದೇವೆ.

ಇದರ ನಡುವೆ ವ್ಯಾಪಾರಸ್ಥರು ಮಾಡಿದ ಮನೆ ಸಾಲ, ವ್ಯವಹಾರಿಕ ಸಾಲ ಹಾಗೂ ವಾಹನ ಸಾಲಗಳನ್ನು ಕಟ್ಟುವುದು ಈಗಿನ ಪರಿಸ್ಥಿತಿಯಲ್ಲಿ ಸಾಧ್ಯವಾಗುತ್ತಿಲ್ಲ. ಆದರೆ ಕೆಲವು ಬ್ಯಾಂಕ್ ಹಾಗೂ ಫೈನಾನ್ಸ್ ಕಂಪನಿ ಗಳಿಂದ ಫೋನ್ ಬರುತಿದ್ದು ಸಾಲದ ಕಂತನ್ನು ಕಟ್ಟುವಂತೆ ಒತ್ತಾಯಿಸುತಿದ್ದಾರೆ. ಆದರೆ ಈ ಭಾರಿ ಸರಕಾರ ಇಂತಹ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಸರಕಾರ ಸಾಲಗಳ ಮರುಪಾವತಿಯ ವಿಷಯವಾಗಿ ಮಾತನಾಡದೆ ಕುಳಿತರೆ ಈ ಮೊದಲೇ ವ್ಯಾಪಾರ ವ್ಯವಹಾರ ಇಲ್ಲದೆ ಬೇಸತ್ತು ಹೋಗಿರುವಾಗ ಸಾಲದ ಹೊರೆಯಿಂದ ಮಾನಸಿಕವಾಗಿ ಕೊರಗಬೇಕಾಗುತ್ತದೆ. ಯಾರು ಕೂಡ ಸಾಲ ಕಟ್ಟುದಿಲ್ಲ ಅಂತ ಹೇಳುತ್ತಿಲ್ಲ. ಆದರೆ ಸಾಲದ ಕೊಟ್ಟ ಸಂಸ್ಥೆಗಳು ಸಾಲಗಾರರಿಗೆ ಕಂತು ಕಟ್ಟುವಂತೆ ಒತ್ತಾಯ ಮಾಡದೆ ಮರು ಪಾವತಿಯ ಅವಧಿಯನ್ನು ಮುಂದೆ ಹಾಕಿ ಸಾಲಗಾರರ ನೆರವಿಗೆ ಬರಬೇಕಾಗಿ ಸುಬ್ರಹ್ಮಣ್ಯದ ನಿತಿನ್ ಭಟ್ ಆಗ್ರಹಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.