Breaking News

ಕಲ್ಚೆರ್ಪೆ ಕೊಳಕು ನೀರು ಪಯಸ್ವಿನಿ ಸೇರುತ್ತಿರುವ ವಿಚಾರ : ಕಾಂಗ್ರೆಸ್ ಖಂಡನೆ

Advt_Headding_Middle

 

ಜನರಿಗೆ ವಿಷದ ನೀರು ನ.ಪಂ. ಕೊಡುಗೆ : ಆರೋಪ

ಪೂಮಲೆ ಕಾಡಿನಿಂದ ಹರಿದು ಬರುವ ನೈಸರ್ಗಿಕ ನೀರು ಕಲ್ಚೆರ್ಪೆ ಕಸದ ಜತೆ ಸೇರಿ ಕೊಳಕು ನೀರಾಗಿ ಪಯಸ್ವಿನಿ ಸೇರುತ್ತಿದ್ದು ನಗರ ಪಂಚಾಯತ್ ಕಲ್ಚೆರ್ಪೆ ಯಲ್ಲಿ ವ್ಯವಸ್ಥೆ ಸರಿಪಡಿಸಲಾಗದೇ ಜನರಿಗೆ ವಿಷದ ನೀರು ನೀಡುತ್ತಿದೆ ಎಂದು ನಗರ ಕಾಂಗ್ರೆಸ್ ಆರೋಪಿಸಿದೆ.

ಕಲ್ಚೆರ್ಪೆ ಗೆ ಭೇಟಿ ನೀಡಿರುವ ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ಶಶಿಧರ್ ಈ ಆರೋಪ ಮಾಡಿದ್ದಾರೆ.

ಇಲ್ಲಿಯ ಕಸದ ರಾಶಿ ನೋಡಿದರೆ ಖಾಲಿ ಮಾಡಲು 5 ವರ್ಷ ಬೇಕಾಗಬಹುದು. ಪೂಮಲೆಯಿಂದ ಕಲ್ಚೆರ್ಪೆ ಯಾಗಿ ಬರುವ ನೀರು ಕಸದ ಜತೆ ಸೇರಿ ಪಯಸ್ವಿನಿ ಸೇರುತ್ತಿದೆ. ಅದೇ ನೀರನ್ನು ಜನರು ಕುಡಿಯುತ್ತಿದ್ದಾರೆ. ನದಿಗೆ ತ್ಯಾಜ್ಯ ಎಸೆಯುವುದು ಅಪರಾಧ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಇಲ್ಲಿ ನ.ಪಂ. ಮಾಡುತ್ತಿರುವುದು ಏನು ? ಎಂದು ಪ್ರಶ್ನಿಸಿರುವ ಅವರು, ನಗರದ ಜನರು ವಿಷದ ನೀರು ಕುಡಿಯುತ್ತಿದ್ದಾರೆ. ಈ ನೀರನ್ನು ಕುಡಿಯುವ ಜನ ನ.ಪಂ. ವಿರುದ್ದ ದಂಗೆ ಏಳಬೇಕು ಎಂದು ಹೇಳಿದರು.

 

ಕಲ್ಚೆರ್ಪೆ ಯ ಕಸದ ಜಾಗಕ್ಕೆ ಕ್ರಿಮಿನಾಶಕ ಹಾಕುತ್ತಿಲ್ಲ. ಫಾಗಿಂಗ್ ಕೂಡಾ ಮಾಡುತ್ತಿಲ್ಲ. ಮತ್ತೆ ಡೆಂಗ್ಯೂ, ಜಾಂಡೀಸ್ ಬಾರದೇ ಇರಬಹುದೇ?. ಇಲ್ಲಿ ಕಳೆದ 25 ವರ್ಷದಿಂದ ಒಬ್ಬರೇ ಶಾಸಕರಿದ್ದಾರೆ. ಅವರು ಏನು ಮಾಡುತ್ತಾರೆ. ಈಗ ಸಚಿವರಾಗಿರುವ ಅವರು ಈಗಲಾದರೂ ಇಲ್ಲಿಯ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು. ಹಾಗೆಂದ ಮಾತ್ರಕ್ಕೆ ನಾವು ಸುಮ್ಮನಿರದೇ ಇಲ್ಲಿಯ ವಸ್ತು ಸ್ಥಿತಿಯನ್ನು ಜಿಲ್ಲಾಧಿಕಾರಿ ಗಳ ಮೂಲಕ ಸರಕಾರಕ್ಕೆ ತಲುಪಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಇಂಟೆಕ್ ಕಾಂಗ್ರೆಸ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ನ.ಪಂ. ಮಾಜಿ ಸದಸ್ಯ ಕೆ.ಗೋಕುಲ್ ದಾಸ್ ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.