Breaking News

ಆಲೆಟ್ಟಿ ಪಂಚಾಯತ್ ನಲ್ಲಿ ತುರ್ತು ಸಭೆ

Advt_Headding_Middle

 

 

ತಾಲೂಕು ಅಧಿಕಾರಿಗಳು ಭೇಟಿ ನೀಡದಿರುವ ಕುರಿತು ಆಕ್ರೋಶಗೊಂಡ ಸದಸ್ಯರು

ಆಲೆಟ್ಟಿ ಗ್ರಾಮದಲ್ದಿ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಿನ ಸಂಖ್ಯೆಯಲ್ಲಿದೃಢಪಟ್ಟಿರುವಹಿನ್ನೆಲೆಯಲ್ಲಿ ಜೂ.19 ರಂದು ತುರ್ತು ಸಭೆಯನ್ನು ನಡೆಸಲಾಯಿತು.ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿಕುಡೆಕಲ್ಲುರವರು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ದಿನೇಶ್ ಕಣಕ್ಕೂರು, ಕೆ.ಎಫ್.ಡಿ.ಸಿ. ಇಲಾಖೆಯ ಆರ್. ಎಫ್. ಒ. ಹರೀಶ್, ಪಿ.ಡಿ.ಒ.ಕೀರ್ತಿಪ್ರಸಾದ್, ಕಾರ್ಯದರ್ಶಿ ಸೃಜನ್ ವೇದಿಕೆಯಲ್ಲಿದ್ದರು.
ಆಲೆಟ್ಟಿ ಗ್ರಾಮದಲ್ಲಿ ಒಟ್ಟು
164ಪ್ರಕರಣಕಂಡುಬಂದಿದೆ. ಒಂದೇ ದಿನ 31 ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು ಒಟ್ಟು 62 ಪ್ರಕರಣ ಪ್ರಸ್ತುತ ಪ್ರಚಲಿತದಲ್ಲಿದೆ. ಈಗಾಗಲೇ ಹೆಚ್ಚು ಪ್ರಕರಣ ಕಂಡು ಬಂದಿರುವ ಪ್ರದೇಶವನ್ನು ಪಂಚಾಯತ್ಅಧಿಕಾರಿಗಳು ಕಾರ್ಯಪಡೆಸದಸ್ಯರು ತೆರಳಿ ಕಂಟೈನ್ಮೆಂಟ್ ಝೋನ್ ಎಂದು ಪರಿಗಣಿಸಿ ಪಾಸಿಟಿವ್ ಬಂದಿರುವ ಮನೆಯವರು ಹೊರಗಡೆ ತಿರುಗಾಡದಂತೆ ಸೂಚಿಸಲಾಗಿದೆ .ಪ್ರಕರಣ 50 ಕ್ಕಿಂತ ಹೆಚ್ಚು ಬಂದಿರುವ ಕಾರಣಕ್ಕೆ ಜಿಲ್ಲಾಧಿಕಾರಿಯವರ ಆದೇಶದ ಮೇರೆಗೆ ಮುಂದಿನ ದಿನ ಲಾಕ್ ಡೌನ್ ಅಥವಾ ಸೀಲ್ ಡೌನ್ ಆದಾಗ ಕಾರ್ಯಪಡೆ ಸದಸ್ಯರು ಆಯಾಯ ವಾರ್ಡಿನ ಬಗ್ಗೆ ಜವಬ್ದಾರಿನಿರ್ವಹಿಸಬೇಕು. ಅಗತ್ಯಸಾಮಾಗ್ರಿಗಳನ್ನು ತಲುಪಿಸುವ ವ್ಯವಸ್ಥೆ ಮಾಡುವ ಕುರಿತು ಚರ್ಚಿಸಲಾಯಿತು. ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಸರ್ಕಾರದ ಅಧಿಕೃತ ಸೂಚನೆಯ ಮೇರೆಗೆ ಮುಂದಿನ ದಿನ ಲಸಿಕೆ ನೀಡುವ ವ್ಯವಸ್ಥೆ ಗ್ರಾಮದ ಕೇಂದ್ರ ಭಾಗದಲ್ಲಿ ನಡೆಸುವಂತೆ ಆರೋಗ್ಯ ಇಲಾಖೆಗೆ ಪತ್ರ ಬರೆಯುವ ಬಗ್ಗೆ ತೀರ್ಮಾನಿಸಲಾಯಿತು.
ಗ್ರಾಮದಲ್ಲಿ ಪೋಲಿಸ್ ಅಧಿಕಾರಿಗಳು ಗಸ್ತು ತಿರುಗುವ ವ್ಯವಸ್ಥೆ ಆಗಬೇಕು. ಕೊರೊನಾ ಪ್ರಕರಣ ಇರುವ ಮನೆಯವರು ಅಂಗಡಿ ಮುಂದೆ ಕುಳಿತುಕೊಂಡು ತಿರುಗಾಡುತ್ತಿರುತ್ತಾರೆ. ನಿಯಮ ಉಲ್ಲಂಘಿಸಿ ತಿರುಗಾಟನಡೆಸುತ್ತಿರುವವರ ಮೇಲೆ ಪಿ.ಡಿ.ಒ.ರವರು ದಂಡ ವಿಧಿಸಬೇಕು. ಗ್ರಾಮದಲ್ಲಿ ದಿನೇ ದಿನೇ ಪ್ರಕರಣ ಹೆಚ್ಚುತ್ತಿದ್ದರೂ ತಾಲೂಕು ಆಡಳಿತ ಅಧಿಕಾರಿಗಳು ಭೇಟಿ ನೀಡದಿರುವ ಕುರಿತು ಸಭೆಯಲ್ಲಿ ಸದಸ್ಯರು ಆಕ್ರೋಶವ್ಯಕ್ತಪಡಿಸಿದರು. ತಹಶೀಲ್ದಾರರವರಾಗಲಿ ಪೋಲಿಸ್ಅಧಿಕಾರಿಗಳಾಗಲಿ ಭೇಟಿ ನೀಡದೆ ಆಲೆಟ್ಟಿ ಗ್ರಾಮವನ್ನುಕಡೆಗಣಿಸಿದ್ದಾರೆಎಂದುಅಸಮಾಧಾನವ್ಯಕ್ತವಾಯಿತು. ಕಲ್ಟೆರ್ಪೆ ಕಸ ವಿಲೇವಾರಿಯ ತ್ಯಾಜ್ಯ ಘಟಕದ ಅವ್ಯವಸ್ಥೆಯ ಕುರಿತು ವ್ಯಾಪಕ ಚರ್ಚೆಯಾಯಿತು. ಇಂತಹ ಅವೈಜ್ಞಾನಿಕ ವ್ಯವಸ್ಥೆಯಿಂದ ಮಾರಕ ರೋಗಉಲ್ಭಣಗೊಳ್ಳುತ್ತಿದೆ. ಡೆಂಗ್ಯೂ ಪ್ರಕರಣವು ತಾಲೂಕಿನಲ್ಲಿಹೆಚ್ಚುತ್ತಿರುವ ಕಾರಣಕ್ಕೆ ಆಯಾಯ ವಾರ್ಡಿನ ಸದಸ್ಯರು ಜಾಗೃತಿಕಾರ್ಯಕ್ಕೆನಮ್ಮೊಂದಿಗೆ ಕೈಜೋಡಿಸಬೇಕು ಎಂದು ಆರೋಗ್ಯ ಇಲಾಖೆಯಸಹಾಯಕಿಯರುಅಭಿಪ್ರಾಯವ್ಯಕ್ತಪಡಿಸಿದ ರು. ಈ ಸಂದರ್ಭ ಪಂಚಾಯತ್ ಸದಸ್ಯರು, ಆರೋಗ್ಯಸಹಾಯಕಿಯರು,ಆಶಾಕಾರ್ಯಕರ್ತೆಯರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.