Breaking News

ಸಹಾಯ್ ಸುಳ್ಯ ಸರ್ಕಲ್ ವತಿಯಿಂದ ಎಸ್ಸೆಸ್ಸೆಫ್ ಅಜ್ಜಾವರ ಸೆಕ್ಟರ್ ಸಹಯೋಗದೊಂದಿಗೆ ಸ್ಯಾನಿಟೈಸರ್ ಸಿಂಪಡಣೆ

Advt_Headding_Middle

 

ಕರ್ನಾಟಕ ಮುಸ್ಲಿಂ ಜಮಾಅತ್ ತುರ್ತು ಸೇವಾ ತಂಡ ‘ಸಹಾಯ್’ ಸುಳ್ಯ ಸರ್ಕಲ್ ನೇತೃತ್ವದಲ್ಲಿ ಎಸ್ಸೆಸ್ಸೆಫ್ ಅಜ್ಜಾವರ ಸೆಕ್ಟರ್ ಸಮಿತಿ ಸಹಯೋಗದೊಂದಿಗೆ ಅಜ್ಜಾವರ ಹಾಗು ಮಂಡೆಕೋಲು ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಜೂನ್ ಹದಿನಾರರಂದು ಪಂಚಾಯಿತ್ ಮುಖ್ಯಸ್ಥರ ಸಮ್ಮುಖದಲ್ಲಿ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಯಿತು.

ಅಜ್ಜಾವರ ಹಾಗೂ ಮಂಡೆಕೋಲು ಪಂಚಾಯತ್ ವ್ಯಾಪ್ತಿಯ ಶಾಲೆಗಳು, ಸರಕಾರಿ ಕಛೇರಿಗಳು, ಮಂದಿರಗಳು, ಅಂಗನವಾಡಿ ಕೇಂದ್ರಗಳು, ಬಸ್ ನಿಲ್ದಾಣ, ಅಂಗಡಿ ಮುಂಗಟ್ಟುಗಳ ಸಹಿತವಿರುವ ಸಾರ್ವಜನಿಕ ಪ್ರದೇಶಗಳಲ್ಲಿ ಸ್ಯಾನಿಟೈಸರ್ ಮಾಡಲಾಯಿತು. ಕೊರೋನಾ ದಿಂದ ತತ್ತರಿಸಿರುವ ಜನರಿಗೆ ಅನಿವಾರ್ಯ ಸ್ಥಳಗಳಿಗೆ ಹೋಗಲು ಕೂಡ ಭಯಪಡುತ್ತಿರುವ ಸಂದರ್ಭದಲ್ಲಿ ಪ್ರಸ್ತುತ ಸ್ಯಾನಿಟೈಸರ್ ಮೂಲಕ ಮಾರಕ ವೈರಸ್‌ಗಳನ್ನು ನಾಶಪಡಿಸುವ ಕಾರ್ಯ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾಯಿತು.
ಈ ಕಾರ್ಯಕ್ರಮದಲ್ಲಿ ಸಹಾಯ್ ತುರ್ತು ಸೇವಾ ತಂಡ ಸುಳ್ಯ ಸರ್ಕಲ್ ನ ನಾಯಕರಾದ ಅಬ್ಬಾಸ್ ಎ.ಬಿ, ಮಂಡೆಕೋಲು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಅನೀಲ್ ತೋಟಪ್ಪಾಡಿ, ಸಿಬ್ಬಂದಿಗಳಾದ ಹರೀಶ ಕನ್ಯಾನ, ಬಾಲಕೃಷ್ಣ ಮಾವಂಜಿ, ಅಜ್ಜಾವರ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಲೀಲಾ ಮನ್ಮೋಹನ್, ಪಂಚಾಯತ್ ಸದಸ್ಯರಾದ ಪ್ರಸಾದ್ ರೈ ಮೇನಾಲ, ಪಿ ಡಿ ಒ ಶ್ರೀಮತಿ ಜಯಮಾಲಾ, ಸಂತೋಷ್ ಶೆಟ್ಟಿ ಮೇನಾಲ, ಗ್ರಂಥಾಲಯ ಸಿಬ್ಬಂದಿ ಲಕ್ಷ್ಮಿ, ನೀರಾವರಿ ಬಿಲ್ ಕಲೆಕ್ಟರ್ ಲೋಕೇಶ್, ಗ್ರಾಮ ಲೆಕ್ಕಧಿಕಾರಿ ಸಹಾಯಕ ಶಿವಣ್ಣ ಮಂಡೆಕೋಲು, VRW ಉಮ್ಮರ್ ಬಯಂಬು,, ಎಸ್ಸೆಸ್ಸೆಫ್ ಅಜ್ಜಾವರ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಕಬೀರ್ ಹಿಮಮಿ ಮೇನಾಲ, ಕಾರ್ಯದರ್ಶಿ ಗಳಾದ ಅಶ್ರಫ್, ರಹೀಂ ಹಿಮಮಿ ಹಾಗೂ ಎಸ್ಸೆಸ್ಸೆಫ್ ಯೂನಿಟ್ ನ ಹಲವು ಕಾರ್ಯಕರ್ತರೂ, ಸಾರ್ವಜನಿಕರೂ ಭಾಗವಹಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.