ನೆನಪು

Advt_Headding_Middle

ಒಂದಾನೊಂದು ಕಾಲದಲ್ಲಿ ಹೃತಿಕ್ ರೋಷನ್ ನ ದೆಸೆಯಿಂದ ಅವನಂತೆ ಗಿಟಾರ್ ಹಿಡಿದು ಕುಣಿಯಬೇಕು ಎಂದು ಕನಸು ಕಂಡವರಲ್ಲಿ ನಾನು ಒಬ್ಬ. ಗಿಟಾರ್ ಕ್ಲಾಸಿಗೆ ಸೇರ್ಲಿಕ್ಕೆ ದುಡ್ಡು ಬೇಕಲ್ಲಾ? ಸೀದಾ ಪೊಪ್ಪನ ಹತ್ತಿರ ಹೋಗಿ ? ಪೊಪ್ಪ ನಾ ಗಿಟಾರ್ ಕ್ಲಾಸ್ ಸೇರೋಕಾ ?? ( ಮೊದ್ಲೇ ಹೀಗೆ ಕೆಲವು ಕ್ಲಾಸ್ಸ್ ಗಳನ್ನು ಸೇರಿ, ಬಿಟ್ಟು ಆಗಿತ್ತು). ಅದಕ್ಕೆ ಪೊಪ್ಪ ?ನಾ ಒಂದು ಕಥೆ ಹೇಳ್ನೆ . ಗಾಂಧೀಜಿ ಲಂಡನ್ಲಿ ಲಾ ಕಲೇತಾ ಇರ್ಕನ, ಅವ್ಕೆ ಯಾರ್ನೋ ನೋಡಿ ಪಿಯಾನೋ ಕಲೆವ ಮನ್ಸಾತ್. ಹಂಗೆ ಸೇರ್ದೋ ಪಿಯಾನೋ ಕಲೆಕೆ. ಮತ್ತೆ ಇನ್ಯಾರ್ನೋ ನೋಡಿ ಬೇರೇನೋ ಕಲೆವ ಮಾನ್ಸಾತ್. ಹಿಂಗೇ ಕಂಡದ್ದಕ್ಕೆಲ್ಲಾ ಸೇರಿ ಸೇರಿ ಕೊನೆಗೆ ರಾಗ ದರ ಬರ.? ಅಷ್ಟರಲ್ಲಿ ನನಗೆ ಅವರ ಮಾತಿನ ಅರ್ಥ ತಿಳಿದು ?ಹಂಗರೆ ಈಗ ಬೇಡ, ಒಂದು ತಿಂಗ ಬುಟ್ಟಾಕನ ಇದೇ Interest  ಇದ್ದರೆ ಆಗ ನೀವು ಸೇರ್ಸೋಕು.? ಅಂತ ಹೇಳಿ ಸುಮ್ಮನಾದೆ. ಹೀಗೆ ಕಥೆಯ ಮೂಲಕ ತನ್ನ ನಿಲುವನ್ನು ವ್ಯಕ್ತ ಪಡಿಸುವಲ್ಲಿ ಪೊಪ್ಪ ನಿಸ್ಸೀಮರಾಗಿದ್ದರು. ಪೊಪ್ಪನಿಗೆ ಮಕ್ಕಳಿಗೆ ಕಥೆ ಹೇಳುವುದೆಂದರೆ ಬಾರೀ ಇಷ್ಟ; ಅದರಲ್ಲೂ ಸಣ್ಣ ಮಕ್ಕಳಿಗೆ. ಕಥೆಯ ಮೂಲಕ ಮೌಲ್ಯಗಳನ್ನು ಅರ್ಥೈಸಿಕೊಳ್ಳುವ  method ನ್ನು ಅವರು ತುಂಬಾ ನಂಬಿದ್ದರು. ಇದು ಕೇವಲ ನನಗೆ ಹಾಗೂ ಮಹಿಮಳಿಗೆ ಸೀಮಿತವಲ್ಲ. ಉಂಞನ ಮನೆಯ ಮಕ್ಕಳಷ್ಟೇ ಅಲ್ಲದೆ ಸುಮಿಯಕ್ಕ, ಭಾಸ್ಕರ್ ಬಾವ, ಚೈತ್ರಕ್ಕ, ಪವಿಯಕ್ಕ, ಪುಟ್ಟಬಾವ ಹೀಗೆ ಎಲ್ಲಾರೂ ಅವರ ಕಥೆಗಳಿಂದ ಪ್ರಭಾವಿತರಾದವರೇ.

ಪೊಪ್ಪ “Simole living High thinking” ಸಿದ್ಧಾಂತವನ್ನು ತಮ್ಮ ಜೀವನದಲ್ಲಿ ಸಂಪೂರ್ಣವಾಗಿ ಅಳವಡಿಸಿಕೊಂಡಿದ್ದರು; ಅದರಲ್ಲಿ ಹೆಚ್ಚು ಕಡಿಮೆ ಯಶಸ್ವಿಯಾದವರು ಕೂಡ. ಬಹುಷಹ ಅದು ಅವರು ತಮ್ಮ ಬಾಲ್ಯದಲ್ಲಿ ಅನುಭವಿಸಿದ ಕಷ್ಟದ ದಿನಗಳಿಂದ ಆಗಿರಬಹುದೇನೋ. ಹಾಗೆಂದು ಆ ದಿನಗಳ ಬಗ್ಗೆ ಅವರಿಗೆ ಎಂದು ಬೇಸರವಿರಲಿಲ್ಲ, ಬದಲಾಗಿ ?ಆಟಿ ತಿಂಗದ ಮಳೆಗೆ ಹೊರಗೆ ಕಾಲಿಸಿಕೆ ಆತಿತ್ಲೆ. ಆದರೂ ನಮ್ಮವ್ವ ಬೇಸಗೆಲೇ ಸಾಂತಾಣಿ, ಮಾಂಬಳ, ಹಲಸಿನ ಕಾಯಿ ಹಪ್ಪಳ ಎಲ್ಲ ಮಾಡಿ ಇಸ್ತಿತ್ತ್. ಬಾರಿ ಅಪರೂರಪಕ್ಕೆ ಉಪ್ಪಣಸ ಇರ್ತಿತ್ತ್. ಅದರ್ಲೇ ಸೋಣ ತಿಂಗಮುಟ್ಟ ಸುದಾರ್ಸೋಕು. ಈಗದ ಹಂಗೆ ನಿಮ್ಮ Lays,kurkure , ಮಸಾಲೆ ಪುರಿ ಪುರ ಆಗ ಇತ್ಲೆ.? ಎಂದು ಹೇಳುತ್ತಾ ಪ್ರತಿ ಮಳೆಗಾಲ ಹಳೆಯ ನೆನಪುಗಳನ್ನು ನಮ್ಮೊಂದಿಗೆ ಹಂಚುತ್ತಿದ್ದರು. ಮನೆಯಲ್ಲಿ ಪೊಪ್ಪ ಕೆಲವು sEt of rules ಗಳನ್ನು ಜಾರಿ ಮಾಡಿದ್ದರು. ಮನೆಯವರೆಲ್ಲ ಜೊತೆಗೆ ಕುಳಿತು ಊಟ ಮಾಡುವುದು, ಪ್ರತಿದಿನ ಸಂಜೆ ಬಂದು ಶಾಲೆಯಲ್ಲಿ ಏನು ನಡೆಯಿತು ಅದನ್ನು ಟೀ ಕುಡಿಯುವ ಸಮಯದಲ್ಲಿ ಹಂಚಿಕೊಳ್ಳುವುದು ಇತ್ಯಾದಿ.ಮನೆಯ ಜವಾಬ್ದಾರಿಗಳನ್ನು ಅವರರವರ ಸಾಮರ್ಥ್ಯಕ್ಕೆ ಅನುಗುಣವಾಗಿ distribute  ಮಾಡುವುದು , ಮತ್ತು ಕೊಟ್ಟ ಜವಾಬ್ದಾರಿ ಸಮರ್ಪಕವಾಗಿ ಎಕ್ಸಿಕ್ಯೂಟ್ ಆಗ್ತಾ ಇದೆಯಾ? ಎಂದು ಅದರ ಬಗ್ಗೆ ಫಾಲೋ ಅಪ್ ಕೂಡ ಮಾಡ್ತಾ ಇದ್ದ ರೀತಿ ಅನುಕರಣೀಯ.
ಪೊಪ್ಪನಿಂದಾಗಿ ನಮ್ಮ ಮನೆಯಲ್ಲಿ ಮೋದಿಜಿಯವರ ಸ್ವಚ್ಛ ಭಾರತ್ ಅಭಿಯಾನ ನಮ್ಮ ಮನೆಯಲ್ಲಿ ೨೦೦೪ರಿಂದಲೇ ಜಾರಿಯಲ್ಲಿತ್ತು. ಅದರ ಪ್ರಕಾರ ಕಡ್ಡಾಯವಾಗಿ ಪ್ರತಿ ಆದಿತ್ಯವಾರ ಮನೆಯ ಸುತ್ತಲೂ ಇರುವ ಚಾಕಲೇಟ್ ರಾಪರ್ ಪ್ಲಾಸ್ಟಿಕ್ ಚೀಲ ಇವೆಲ್ಲವನ್ನು ಎತ್ತುವುದು, ಬಲೆ ತೆಗೆಯುವುದು ಮತ್ತೆ ಮನೆಯ ಬಾತ್ ರೂಮ್ , ಶೌಚಾಲಯ ಕ್ಲೀನ್ ಮಾಡುವುದು. ಇದಕ್ಕೆ ನಾವು ಎಲ್ಲಾದರೂ ತಕರಾರು ಎತ್ತುತ್ತಿದ್ದರೆ, ? ಅಂಥಾ ಗಾಂಧಿಯೇ ಅಫ್ರಿಕಾಲಿ ಇರ್ಕನ ಪಬ್ಲಿಕ್ ಟಾಯ್ಲೆಟ್ ಕ್ಲೀನ್ ಮಾಡ್ತಾ ಇದ್ದೋ ಗಡ; ನೀವ್ಗೆ ನಿಮ್ಮ ಮನೆ ಟಾಯ್ಲೆಟ್ ಕ್ಲೀನ್ ಮಾಡಿಕೆ ಆದ್ಲೆನಾ?? ಎಂದು ಹೇಳುತ್ತಾ ಅವರ ಗಾಂಧಿಗಿರಿ ಸ್ಟಾರ್ಟ್ ಮಾಡ್ತಾಇದ್ರು. ಗಾಂಧೀಜಿಯವರ ಚಿಂತನೆ, ಆದರ್ಶಗಳನ್ನು ಪ್ರಬಲವಾಗಿ ನಂಬಿದ್ದ ಅವರು ಬದುಕಿನಲ್ಲಿಯೂ ಸತ್ಯ, ಅಹಿಂಸೆ, ಮಿತವ್ಯಯ ಅಲ್ಲದೆ ಒಂದು ಹಂತದ ನಂತರ ಪೊಪ್ಪ ಬಹುತೇಕ ಸಸ್ಯಾಹಾರಿಯಾಗುವ ಮೂಲಕ Gandhism ಅಕ್ಷರಃ ಪಾಲಿಸಿದವರು. ಹಾಗೆಂದು ಗಾಂಧಿ ಮೇಲೆ ಅಂಧಶ್ರದ್ಧೆ ಇರಲಿಲ್ಲ. ಖಾದಿವಸ್ತ್ರ ಧರಿಸಿದವರಲ್ಲ; ?೧೫೦೦ರೂ ಖಾದಿ ಶರ್ಟ್ ಹಾಕಿ, ತೋರಿಕೆಯ ಗಾಂಧಿಗಿರಿ ನಂಗೆ ಬೇಡ. ಅದು ಅಂತವರಿಗೇ ಸೀಮಿತವಾಗಿರಲಿ.?ಎಂದು ಹೇಳ್ತಾಯಿದ್ರು. ಪ್ರತಿಯೊಬ್ಬ ಗಾಂಧಿಯನ್ ನ ಹಾಗೇ ಪೊಪ್ಪನಿಗೂ ಕೂಡ ಸಾಬರಮತಿ ಆಶ್ರಮಕ್ಕೆ ಒಮ್ಮೆಯಾದ್ರೂ ಹೋಗಬೇಕು ಎನ್ನುವ ಬಾರಿ ಮನಸಿತ್ತು. ೨೦೧೯ರಲ್ಲಿ ನನ್ನ ಎನ್.ಐ.ಡಿ ಅಡ್ಮಿಶನ್ ಗೆ ಅಹಮದಾಬಾದ್ ಹೋದಾಗ ಅಲ್ಲಿ ಗಾಂಧಿmuseum,  ಸಬರಮತಿ ಆಶ್ರಮ ಎಲ್ಲ ಕಣ್ತುಂಬಿಕೊಂಡು ಅವರ ಆ ಖುಷಿ ಅಷ್ಟಿಷ್ಟಲ್ಲ. ಇದರ ಜೊತೆಗೆ ಅವರಿಗೆ ವಿಮಾನದಲ್ಲಿ ಹೋದ ಮೊದಲ ಅನುಭವ. ಪೊಪ್ಪನ ಈ ಎರಡೂ ಆಸೆಯನ್ನು ಅವರ ಜೊತೆಯಾದದಕ್ಕೆ ನನಗೂ ಒಂದು ಸಂತೃಪ್ತಿ.

ನಾನೇನು ನನ್ನ ಪೊಪ್ಪನೇ ಶ್ರೇಷ್ಠ ಎಂದೇನೂ ಪ್ರೂವ್ ಮಾಡ್ಲಿಕ್ಕೆ ಹೋಗ್ತಾ ಇಲ್ಲ. ಎಲ್ಲರಂತೆಯೂ ಇವರಲ್ಲೂ ಕೆಲವು ಲೋಪದೋಷಗಳು ಇದ್ದವು. ಆದ್ರೆ ಪೊಪ್ಪ plusಗಳಿಂದ ಅವರ minus ಗಳು ಎದ್ದು ಕಾಣ್ತಾ ಇರಲಿಲ್ಲ. ಕಾಣುವಂತಹ ಸನ್ನಿವೇಶಗಳನ್ನು ಅವರು ತರ್ತಾ ಇರಲಿಲ್ಲ. ನಾನು ಬೆಂಗಳೂರಿನಲ್ಲಿದ್ದಾಗ ಕೆಲವೊಮ್ಮೆ ಕಾಲೇಜಿನಿಂದ ಲೇಟಾಗಿ ಬರುತಿದ್ದಾಗ ಮನೆಗೆ ಫೋನ್ ಮಾಡಲು ತಪ್ಪಿ ಹೋಗ್ತಾ ಇತ್ತು. ಮರುದಿನ ಬೆಳಗ್ಗೆ ಪೊಪ್ಪನ ಫೋನು; ?ಎಂತ ಮಾರೆಯ, ಮನೆಗೆ ದಿನಲಿ ಒಂದು ಸಲ ಫೋನ್ ಮಾಡಿಕೆ ಆದುಲೆನಾ??, ಈಚೆ ಇಂದ ನಾನೂ ಕೂಡಾ,? ನಾ busy ಇದ್ದೆ, ನೀವ್ಗಾರ್ ಫೋನ್ ಮಾಡಕಾಗಿತ್ತಲ್ಲಾ??. ?ಹಂಗರೆ ಕಾಲ್ ಮಾಡ್ಬೇಡ ? ಅಂತ ಹೇಳಿ ಫೋನ್ cut. ಕೊನೆಗೆ ಅದು ಅಮ್ಮ ಮೂಲಕವೋ, ಮಹಿಮನ ಮೂಲಕವೋ ಬಂದು sorry ಹೇಳಿದ ನಂತರವೇ ನಮಗೆ ಕ್ಷಮೆ. ಪೊಪ್ಪನಿಗೆ ಸೂರ್ಯವಂಶಸ್ತರನ್ನು ಕಂಡ್ರೆ ಎಲ್ಲಿಲ್ಲದ ಸಿಟ್ಟು. ಯಾವಾಗಲೂ ಬೇಗ ಏಳ್ಬೇಕು ಎನ್ನುವವರು, ಅವರೂ ಕೂಡ ೫.೩೦ಗೆ ಏಳ್ತಾ ಇದ್ರು ಕೂಡ. ಆದರೆ ಅವರು ಕಾಲೇಜಿಗೆ ತಲುಪುತಿದ್ದದ್ದು  on time ಗೇನೇ. ಮತ್ತೆ ಎಲ್ಲ ಇತರ ಪುರುಷರಂತೆ (citation ndeed.) ಇವರಿಗೂ ಅಮ್ಮನ ನೆಂಟರು ಬಂದರೆ ಅಷ್ಟಕಷ್ಟೇ. ?ಏನ್ ಬಾವ? ಹೇಂಗೊಳರಿ??, ಅಷ್ಟೇ. ಅವ್ವ ಬಂದರಂತೂ ಎರಡೇ ವಾಕ್ಯ; ಬಂದ ದಿನ ? ಏನ್ ಅತ್ತೆ ??. ಇನ್ನೊಂದು ವಾಕ್ಯ ಅವ್ವ ಹೋಗುವ ದಿನ ?ಇನ್ ಯಾಗ ಬಂದರೆ?, ಹತ್ತಿಕನ ಇಳೆಕನ ಜಾಗ್ರತೆ. ಪ್ರೀತಿ ಗೌರವ ಇಲ್ಲ ಎಂದಲ್ಲ, ಎಲ್ಲವೂ ಇದೆ. infact ಅವರು ಕೊಡಗಿನವರ  hospitatality ಯನ್ನು, ಅವರ ಕೆಲವು ಆಚಾರ ವಿಚಾರಗಳನ್ನು ಅತ್ಯಂತ  admire ಮಾಡುವವರು. ಆದರೂ ಅವರು ಬಂದಾಗ ಮಾತ್ರ ಹೀಗೆ. ಬಹುಷಃ ಅವರ ಸ್ವಭಾವವೇ ಹಾಗಿತ್ತು (ನನ್ನ ಅಂದಾಜು ತಪ್ಪಿರಬಹುದೇನೋ).

ಪ್ರಸ್ತುತತೆಗೆ ಪೊಪ್ಪ apitome ಆಗಿದ್ದರು. ಸಂದರ್ಭದ ವಿನಃ ಅನಗತ್ಯ ಪ್ರಶ್ನೆಗಳಿಗೆ, ಚರ್ಚೆಗಳಿಗೆ ಅವರಲ್ಲಿ ಉತ್ತರವಿರುತ್ತಿರಲಿಲ್ಲ . ಹೊಸ ಬಟ್ಟೆ ತಂದಾಗ ಅದಕ್ಕೆ ಸ್ವಲ್ಪ ನೀರು ಚಿಮುಕಿಸು, ತಪ್ಪಿಯೂ ಮೊಣಕಾಲೂರಿ ಕುಳಿತರೆ ? ಹೆಕ್, ಮುಂಡ್ ಹಾಕಿ ಕುದ್ದತ್, ಎಡದ ಕೈಲಿ ಕೊಟ್ಟದೆ, ಹೆಯ್ ಇವನ? ಎಂದೆಲ್ಲ ಗೊಣಗುತ್ತಿದ್ದರು. ಯಾಕೆ ಎಂದು ಪ್ರಶ್ನಿಸಿದರೆ ?ಅದು ಕ್ರಮ ಅಲ್ಲ?. ಎಂದಷ್ಟೇ ಹೇಳಿ ಸುಮ್ಮನಾಗುತ್ತಿದ್ದರು. ವಿಪರ್ಯಾಸವೆಂದರೆ ನನ್ನ ಇಂತಹ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು ಅವರ ಅಂತ್ಯ ಸಂಸ್ಕಾರದಲ್ಲಿ!

ಲೇಖನ ಬರೆಯುವುದು ನನ್ನ ಹವ್ಯಾಸವಲ್ಲ; ಇದೊಂದು ಪ್ರಯತ್ನ ಅಷ್ಟೆ. ಯಾಕಂದ್ರೆ ಪ್ರಯತ್ನಗಳಿಗೆ Failure  ಎಂಬುವುದಿಲ್ಲ. ಪೊಪ್ಪ ಯಾವತ್ತೂ ಒಂದು quote ಹೇಳ್ತಾ ಇದ್ರು “You will never know unless you try” ಆ ನಿಟ್ಟಿನಲ್ಲಿ ನನ್ನದೊಂದು ಈ ರೀತಿಯ ಪ್ರಯತ್ನ. ಅವರ ಬಗೆಗಿನ ಮಾತು  Father’s dayಗೆ ಸೀಮಿತ ಅಲ್ಲ. ಅದು ಪ್ರತಿಕ್ಷಣವೂ ಇದ್ದದ್ದೇ. ಇದೊಂದು ನೆಪ ಅಷ್ಟೇ. ಯಾಕಂದ್ರೆ ಅವರೇ ಹೇಳುತ್ತಿದ್ದಂತೆ? ಯಾಗೋಳು ಮಾತಾಡಿಕಂಡೇ ಇದ್ದರೆ, ಮಾತಿಗೂ ಬೆಲೆ ಇರ್ದುಲೆ, ವಿಷಯಕ್ಕೂ ಬೆಲೆ ಇರ್ದುಲೆ ಹಂಗೆ ಹೇಳುವವಂಗೂ ಬೆಲೆ ಇರ್ದುಲೆ; ಏನ್ ಹೇಳ್ರೆ ???.

ಮನ್ವಿತ್ ಯು. ಸುಬ್ರಾಯ
ಪದ್ಮಶ್ರೀ , ಸುಳ್ಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.