ಕಮಿಲದಲ್ಲಿ ಸಾರ್ವಜನಿಕ ವೈಫೈ ಸೇವೆ ಆರಂಭ

Advt_Headding_Middle

 

2000 ಚದರ ಅಡಿ ವ್ಯಾಪ್ತಿಯಲ್ಲಿ ಲಭ್ಯ

ಗುತ್ತಿಗಾರಿನ ಕಮಿಲದಲ್ಲಿ ಸಾರ್ವಜನಿಕ ವೈಫೈ ಸೇವೆ ಸಿಗಲಾರಂಭಿಸಿದೆ. ನೆಟ್ವರ್ಕ್‌ಗಾಗಿ ಕಾಡು-ಗುಡ್ಡಗಳನ್ನು ಏರುತ್ತಿದ್ದ ಕೆಲ ಮಂದಿ ಇದೀಗ ತಮ್ಮ ಊರಲ್ಲೇ ಲಭಿಸುವ ಹೈ ಸ್ಪೀಡ್ ಇಂಟರ್ನೆಟ್‌ನ ಪ್ರಯೋಜನ ಪಡೆಯಲಾರಂಭಿಸಿದ್ದಾರೆ.

ಕಮಿಲದಲ್ಲಿ ಆರಂಭಗೊಂಡ ಪಿಎಂ ವಾಣಿ ಹೈಸ್ಪೀಡ್ ಸಾರ್ವಜನಿಕ ವೈಫೈನಿಂದ ಏಕಾನೆಟ್ ಹೆಸರಲ್ಲಿ ಕಮಿಲದಲ್ಲಿ ಕಾರ್ಯಾರಂಭಿಸಿದೆ.

ಕೇಂದ್ರ ಸರಕಾರವು ಸಾರ್ವಜನಿಕ ವೈ ಫೈ ಪಿ ಎಂ ವಾಣಿ ಎಂಬ ಯೋಜನೆ ಮುಖಾಂತರ ಕಳೆದ ಡಿಸೆಂಬರ್ ನಲ್ಲಿ ಟೆಲಿಕಾಂ ಇಲಾಖೆಯ ಮೂಲಕ ವ್ಯವಸ್ಥೆಗೆ ಮುಂದಾಗಿತ್ತು. ಇದರ ಅನ್ವಯ ಟೆಲಿಕಾಂ ಇಲಾಖೆಗಳನ್ನು ಸಂಪರ್ಕಿಸಿದ ಸುಳ್ಯದ ಸಾಯಿರಂಜನ್ ಕಲ್ಚಾರು ಹಾಗೂ ಸದಾಶಿವ ಕೊಡಪಾಲ ಅವರು ಇದಕ್ಕೆ ಬೇಕಾದ ವ್ಯವಸ್ಥೆಗೆ ಮುಂದಾದರು. ಇದೀಗ ಈ ನೆಟ್ವರ್ಕ್ ಗೆ ಏಕಾನೆಟ್ ಎಂಬ ಹೆಸರು ಇರಿಸಲಾಗಿದ್ದು, ಒಂದು ನೆಟ್ವರ್ಕ್ ಎಲ್ಲರಿಗಾಗಿ ಎಂಬ ಸಂದೇಶ ಇದರ ಹಿಂದಿದೆ. ಸೇವಾ ಉದ್ದೇಶ ಇದಾದರೂ ಇದಕ್ಕೆ ಬೇಕಾದ ಇಂಟರ್ನೆಟ್ ಹಾಗೂ ಇತರ ಉಪಕರಣಗಳಿಗೆ ವೆಚ್ಚಗಳಾಗುವುದರಿಂದ ಬಳಸುವ ಡಾಟಾಗಳ ಮೇಲೆ ಕನಿಷ್ಟ ದರ ವಿಧಿಸಲಾಗುತ್ತದೆ. ಸದ್ಯ ಸುಮಾರು 2೦೦೦ ಚದರ ಅಡಿಯಲ್ಲಿ ಈ ಸಿಗ್ನಲ್ ಲಭ್ಯವಿರುತ್ತದೆ. ತೀರಾ ಅಗತ್ಯ ಇರುವ ವಿದ್ಯಾರ್ಥಿಗಳಿಗೆ, ತುರ್ತು ಇಂಟರ್ನೆಟ್ ಅಗತ್ಯ ಇದ್ದವರಿಗೆ, ವರ್ಕ್ ಫ್ರಂ ಹೋಂ ವ್ಯವಸ್ಥೆಯ ಮಂದಿಗೆ ಈ ಸಾರ್ವಜನಿಕ ವೈ ಫೈ ಬಳಕೆ ಮಾಡಬಹುದು.

ಹೇಗೆ ಕೆಲಸ ಮಾಡುತ್ತದೆ ?

ಟೆಲಿಕಾಂ ಇಲಾಖೆಗಳು ಅನುಮತಿಯೊಂದಿಗೆ ಆರಂಭವಾಗುವ ಈ ಯೋಜನೆಗೆ ವೇಗದ ಇಂಟರ್ನೆಟ್ ಅಗತ್ಯವಿದೆ. ಕಮಿಲದಲ್ಲಿ ಬಿ ಎಸ್ ಎನ್ ಎಲ್ ಭಾರತ್ ಏರ್ ಫೈಬರ್ ಮೂಲಕ ಇಂಟರ್ನೆಟ್ ಸಂಪರ್ಕ ಪಡೆದು ಪ್ರತ್ಯೇಕ ಡಿವೈಸ್ ಮೂಲಕ ಸಾರ್ವಜನಿಕ ವೈ ಫೈ ನೀಡಲಾಗುತ್ತಿದೆ. ಇಂಟರ್ನೆಟ್ ಖಾಸಗೀ ವಲಯಕ್ಕೆ ಬಿ ಎಸ್ ಎನ್ ಎಲ್ ಪ್ರಾಂಚೈಸಿ ಮೂಲಕ ನೀಡುವ ಕಾರಣದಿಂದ ಸಾಮಾನ್ಯ ಜನರಿಗೂ ಇಂತಹ ಸಂಪರ್ಕ ಪಡೆಯಲು ಕಷ್ಟವಾಗಿದೆ. ಈ ಕಾರಣದಿಂದ ಸಾರ್ವಜನಿಕ ವೈ ಫೈ ವ್ಯವಸ್ಥೆ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕೈ ಕೊಡುವ ಸಂದರ್ಭ ನೆಟ್ವರ್ಕ್ ಸಮಸ್ಯೆ ಆದರೂ, ಭಾರತ್ ಏರ್ ಫೈಬರ್ ಅಥವಾ ಫೈಬರ್ ವ್ಯವಸ್ಥೆಗಳು ಪ್ರತ್ಯೇಕ ಬ್ಯಾಟರಿಯಿಂದ ಚಾಲೂಗೊಳ್ಳುವ ಕಾರಣದಿಂದ ಸದ್ಯಕ್ಕೆ ಬಿ ಎಸ್ ಎನ್ ಎಲ್ ಈ ವ್ಯವಸ್ಥೆ ಮಾಡಿದೆ.
ಕೇಂದ್ರ ಸಚಿವ ಸಂಪುಟವು ೨೦೨೦ ರ ಡಿ. ೯ ರಂದು ಪ್ರಧಾನ ಮಂತ್ರಿಯ ವೈ-ಫೈ ಆಕ್ಸೆಸ್ ನೆಟ್‌ವರ್ಕ್ ಇಂಟರ್ಫೇಸ್ (ಪಿಎಂ-ವಾಣಿ) ಚೌಕಟ್ಟಿನಡಿಯಲ್ಲಿ ಸಾರ್ವಜನಿಕ ವೈ-ಫೈ ನೆಟ್‌ವರ್ಕ್‌ಗಳ ಮೂಲಕ ಬ್ರಾಡ್‌ಬ್ಯಾಂಡ್ ಅನ್ನು ಹೆಚ್ಚಿಸುವ ಟೆಲಿಕಾಂ ಇಲಾಖೆಯ ಪ್ರಸ್ತಾವನೆಯನ್ನು ಅಂಗೀಕರಿಸಿತ್ತು. ಡಿಜಿಟಲ್ ಸಂವಹನ ಮೂಲಸೌಕರ್ಯವನ್ನು ರಚಿಸುವ ರಾಷ್ಟ್ರೀಯ ಡಿಜಿಟಲ್ ಸಂವಹನ ನೀತಿಯ ಮುಂದುವರಿದ ಭಾಗ ಇದಾಗಿದೆ. ಸಾರ್ವಜನಿಕ ವೈ-ಫೈ ಹಾಟ್‌ಸ್ಪಾಟ್ ಪೂರೈಕೆದಾರರ ಮೂಲಕ ಬ್ರಾಡ್‌ಬ್ಯಾಂಡ್ ಒದಗಿಸುವುದು ಕೂಡಾ ಸರಕಾರದ ಉದ್ದೇಶವಾಗಿತ್ತು. ಇದಕ್ಕೆ ಒಟಿಪಿ ಮೂಲಕ ರಿಜಿಸ್ಟರ್ ಮಾಡುವುದು ಹಾಗೂ ಡಾಟಾಗಳ ಬಳಕೆಯ ಮೇಲೆ ನಿಗಾ ಇರಿಸುವ ವ್ಯವಸ್ಥೆಯನ್ನೂ ಹೊಂದಿದೆ.
ಫೋಟೋ : ಮಹೇಶ್ ಪುಚ್ಚಪ್ಪಾಡಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.