ರೈತರಿಗೆ ನೀಡುವ ಶೂನ್ಯ ಬಡ್ಡಿಯ ಬೆಳೆಸಾಲ ಮತ್ತು 3% ಬಡ್ಡಿಯ ಕೃಷಿ ಅಭಿವೃದ್ಧಿ ಸಾಲ ಯೋಜನೆ ನಿರಂತರವಾಗಿ ಮುಂದುವರಿಯಲಿ : ಕೃಷಿಕ ಎಂ.ಡಿ.ವಿಜಯಕುಮಾರ್

Advt_Headding_Middle

 

 

ಸಾಲಗಳಿಗೆ ಸರಕಾರ ಒಂದು ಕುಟುಂಬಕ್ಕೆ ಒಂದೇ ಸಾಲ ಸೌಲಭ್ಯ ಎಂಬ ಹೊಸ ನೀತಿಯೊಂದಿಗೆ ಆದೇಶ ಹೊರಡಿಸಿರುವುದು ಬೇಜವಾಬ್ದಾರಿತನದಿಂದ ಮತ್ತು ದಿವಾಳಿತನದಿಂದ ಕೂಡಿದ ಆದೇಶವೇ ಸರಿಯೆಂದರೆ ತಪ್ಪಾಗಲಾರದು.
ನಮಗೆಲ್ಲಾ ತಿಳಿದಿರುವಂತೆ ನಮ್ಮ ರಾಜ್ಯದ ರೈತರು ಬೆಳೆಯುವ ವಿವಿಧ ಕೃಷ್ಯುತ್ಪನ್ನ ಬೆಳೆಗಳಿಗೆ ಬೆಲೆ ಖಾತ್ರಿ (ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ನ್ಯಾಯಯುತ ಬೆಲೆ) ಇಲ್ಲದ ಕಾರಣ ಮತ್ತು ಹವಾಮಾನ ವೈಪರೀತ್ಯಗಳಿಂದ ಮತ್ತು ರೋಗರುಜಿನಗಳಿಂದ ಉಂಟಾಗುವ ಬೆಳೆ ನಷ್ಟಗಳಿಗೆ ಯೋಗ್ಯ ಪರಿಹಾರಗಳಿಲ್ಲದ ಕಾರಣಗಳಿಗೋಸ್ಕರ ನಮ್ಮನ್ನಾಳುವ ಸರಕಾರಗಳು ರೈತರಿಗೆ, ಅವರು ಹೊಂದಿರುವ ಜಮೀನಿನ ಆಧಾರದಲ್ಲಿ 3,೦೦,೦೦೦ ರೂ. ವರೆಗಿನ ಬೆಳೆಸಾಲಗಳಿಗೆ ಶೂನ್ಯ ಬಡ್ಡಿ ಮತ್ತು 1೦,೦೦,೦೦೦ ವರೆಗಿನ ದೀರ್ಘಾವಧಿ ಮತ್ತು ಮಧ್ಯಮಾವಧಿ ಸಾಲಗಳಿಗೆ 3% ಬಡ್ಡಿ ವಿಧಿಸಿ ರೈತರಿಗೆ ಸಾಲ ಸೌಲಭ್ಯ ಕಲ್ಪಿಸಿತ್ತು.
ಈ ಪರಿ ಸೌಲಭ್ಯಗಳಿಂದ ಸರಕಾರಕ್ಕೆ ಪ್ರತೀ ವರ್ಷ ಒಂದಷ್ಟು ಆರ್ಥಿಕ ಹೊರೆ ಖಂಡಿತಾ ಇದೆ. ಹಾಗಂತ ಆ ಕಾರಣಕ್ಕಾಗಿ ಕುಂಟು ನೆಪವೊಡ್ಡಿ ಸರಕಾರ ಈ ಯೋಜನೆ ಒಂದಷ್ಟು ಮಂದಿಗೆ ಸಿಗದಂತೆ ಮಾಡುವ ಹುನ್ನಾರ ನೂರಕ್ಕೆ ನೂರರಷ್ಟು ಸರಿಯಲ್ಲ. ರೈತರಿಗೆ ನೀಡುವ ಈ ಸೌಲಭ್ಯದಿಂದ ಸರಕಾರಕ್ಕೆ ಪರೋಕ್ಷವಾಗಿ ಸಹಕಾರವಾಗಲಿದೆ ಎಂಬುದನ್ನು ಸರಕಾರ ಮನಗಾಣಬೇಕು. ಸಾಕಷ್ಟು ವಿದ್ಯೆ ಕಲಿತ ಅದೆಷ್ಟೋ ಮಂದಿ ಉದ್ಯೋಗವಿಲ್ಲದೆ ಇದ್ದಾರೆ. ಅವರಿಗೆ ಉದ್ಯೋಗ ಕಲ್ಪಿಸಲು ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಇಂತಹ ಮಂದಿ ಸರಕಾರದ ಶೂನ್ಯಬಡ್ಡಿ ಮತ್ತು 3% ಬಡ್ಡಿ ಸಾಲ ಯೋಜನೆಯಿಂದ ಆಕರ್ಷಿತರಾಗಿ ತಮ್ಮ ಪಾಲಿಗೆ ಬಂದ ಹಿರಿಯರ ಜಮೀನುಗಳನ್ನು ಕೃಷಿ ಮಾಡಿ ಬದುಕು ಕಟ್ಟಿಕೊಳ್ಳುವ ನಿರ್ಧಾರಕ್ಕೆ ಬಂದವರಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲವೇ?
ಸರಕಾರ ಆರ್ಥಿಕ ಹೊರೆಯಿಂದ ಪಾರಾಗಲು ಬೇರೆ ಉಪಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ನಬಾರ್ಡ್ನಿಂದ ಸುಮಾರು 4.5% ಬಡ್ಡಿ ವಿಧಿಸಿ ಹೊರಬರುವ ಈ ಸಾಲ ಸೌಲಭ್ಯ ತ್ರಿಸ್ತರ ವ್ಯವಸ್ಥೆಯಲ್ಲಿ ರೈತರಿಗೆ ತಲುಪುವುದಾಗಿದೆ. ಅಂದರೆ ನಬಾರ್ಡ್ನಿಂದ ರಾಜ್ಯ ಅಪೆಕ್ಸ್ ಬ್ಯಾಂಕ್, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ಪ್ರಾಥಮಿಕ ಸಹಕಾರಿ ಸಂಘಗಳ ಮುಖಾಂತರ ರೈತರನ್ನು ತಲುಪುತ್ತದೆ. ಈ ಮೂರು ಬ್ಯಾಂಕ್‌ಗಳು ತಮ್ಮ ನಿರ್ವಹಣಾ ವೆಚ್ಚಕ್ಕನುಗುಣವಾಗಿ ನಬಾರ್ಡ್ ಬಡ್ಡಿಯನ್ನು ಸುಮಾರು 7 ರಿಂದ 8 ಶೇಕಡಾ ಹೆಚ್ಚಿಸಿ ರೈತರಿಗೆ 12% ಬಡ್ಡಿಯಲ್ಲಿ ನೀಡುವುದಾಗಿದೆ. ಸರಕಾರ ಈ ಬ್ಯಾಂಕ್‌ಗಳ ಬಡ್ಡಿಯನ್ನು ಭರಿಸುವುದಾಗಿದೆ. ಸರಕಾರ ಈ ತ್ರಿಸ್ತರ ವ್ಯವಸ್ಥೆಯ ಬದಲು ನಬಾರ್ಡ್ನಿಂದ ನೇರವಾಗಿ ಪ್ರಾಥಮಿಕ ಸಹಕಾರಿ ಸಂಘಗಳ ಮುಖಾಂತರ ರೈತರಿಗೆ ಸಾಲ ವಿತರಣಾ ಕ್ರಮವನ್ನು ಅನುಸರಿಸಿದಲ್ಲಿ ಅಪೆಕ್ಸ್ ಹಾಗೂ ಜಿಲ್ಲಾ ಬ್ಯಾಂಕ್‌ಗಳ ಮಟ್ಟದ ಬಡ್ಡಿದರವನ್ನು ಕಡಿತಗೊಳಿಸಿದಲ್ಲಿ ಸರಕಾರಕ್ಕೆ ಆರ್ಥಿಕ ಹೊರೆ ಕಡಿಮೆಯಾಗುವುದಿಲ್ಲವೇ? ಪ್ರಾಯಶಃ ಈಗ ಸರಕಾರ ಕೆಲವು ರೈತರಿಗೆ ಸೌಲಭ್ಯ ವಂಚಿಸಿ ಉಳಿತಾಯ ಮಾಡಬಲ್ಲ ಮೊಬಲಗಿನಿಂದ ನಾಲ್ಕು ಪಟ್ಟು ಹೆಚ್ಚು ಉಳಿತಾಯವಾಗಬಹುದಲ್ಲವೇ?
ರಾಜ್ಯ ಅಪೆಕ್ಸ್ ಹಾಗೂ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳು ರೈತರಿಗೆ ಕೃಷಿಯೇತರ ಇತರ ಸಾಲ ಸೌಲಭ್ಯಗಳನ್ನು ನೀಡಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬಹುದಲ್ಲವೇ? ಸರಕಾರದ ಈ ಸಾಲ ಸೌಲಭ್ಯವನ್ನು ಪಡೆದು ಅಧಿಕ ಬಡ್ಡಿಗೆ ವಿನಿಯೋಗ ಮಾಡಿದ ಬುದ್ಧಿವಂತ ರೈತರೂ ಇಲ್ಲದಿಲ್ಲ. ಅಂತಹ ರೈತರನ್ನು ಪತ್ತೆ ಹಚ್ಚಿ ಈ ಸೌಲಭ್ಯವನ್ನು ನಿರಾಕರಿಸುವುದರಲ್ಲಿ ತಪ್ಪೇನಿಲ್ಲ ಅಲ್ಲವೇ?
ಒಟ್ಟಿನಲ್ಲಿ ನಮ್ಮ ಶಾಸಕರುಗಳು, ಮಂತ್ರಿಗಳು ಈ ನಿಟ್ಟಿನಲ್ಲಿ ಯೋಚಿಸಿ ರೈತರಿಗೆ ತೊಂದರೆಯಾಗದಂತೆ ಮತ್ತು ಸರಕಾರಕ್ಕೂ ಆರ್ಥಿಕ ಹೊರೆಯಿಂದ ಹೊರಬರಲು ಅನುಕೂಲವಾಗುವಂತೆ ಒಂದು ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ ಮತ್ತು ಅವರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಚಿಂತಿಸಲಿ ಎಂಬುದು ನನ್ನ ಆಶಯ. ಒಂದು ವೇಳೆ ಸರಕಾರ ಒಂದು ಕಾರ್ಡ್ಗೆ ಒಂದು ಸಾಲ ನೀತಿಗೆ ಜೋತುಕೊಂಡರೆ, ಒಂದು ಕಾರ್ಡ್ಗೆ ಒಂದು ಸರಕಾರಿ ಉದ್ಯೋಗ ಮತ್ತು ಒಂದು ಕಾರ್ಡ್ಗೆ ಒಂದು ಜನಪ್ರತಿನಿಧಿ ಹುದ್ದೆ ಸಾಕೆಂಬ ಹೋರಾಟಗಳು ಹುಟ್ಟಿಕೊಂಡರೂ ಅಚ್ಚರಿಪಡಬೇಕಿಲ್ಲ. ಹಾಗಾಗಿ ಕಾರ್ಯಾಂಗ ಮತ್ತು ರಾಜ್ಯಾಂಗ ಎಚ್ಚೆತ್ತುಕೊಳ್ಳುವುದು ಒಳಿತಲ್ಲವೇ? ಎಂದು ಪ್ರಗತಿಪರ ಕೃಷಿಕ ಹಾಗೂ ಅಖಿಲ ಭಾರತ ಅಡಿಕೆ‌ ಬೆಳೆಗಾರರ ಸಂಘದ ಸದಸ್ಯ ಯಂ.ಡಿ. ವಿಜಯಕುಮಾರ್ ಮಡಪ್ಪಾಡಿ ಒತ್ತಾಯಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.