ನನ್ನ ವಿರುದ್ಧ ಸುಳ್ಳು ದೂರು, ದೂರುದಾರರೇ ಕ್ಷಮೆ ಕೋರಿದ್ದಾರೆ

Advt_Headding_Middle

ಲಂಚ ಸ್ವೀಕರಿಸಿದರೆಂಬ ಆರೋಪಕ್ಕೆ ಬ್ಯಾಂಕ್ ಮ್ಯಾನೇಜರ್ ಸ್ಪಷ್ಟನೆ
ಗೃಹ ಸಾಲ ಮಂಜೂರಾತಿಗೆ ಸುಳ್ಯದ ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಶೇ.2 ಲಂಚ ಸ್ವೀಕರಿಸಿದರೆಂಬ ಆರೋಪಕ್ಕೆ ಬ್ಯಾಂಕ್ ಮ್ಯಾನೇಜರ್ ಹರೀಶ್‌ರವರು ಸ್ಪಷ್ಟನೆ ನೀಡಿದ್ದು, ನನ್ನ ವಿರುದ್ಧ ಸುಳ್ಳು ದೂರು ನೀಡಿರುವವರು ಇದೀಗ ತಪ್ಪಿನ ಅರಿವಾಗಿ ಕ್ಷಮೆ ಕೋರಿದ್ದಾರೆ ಎಂದು ಹೇಳಿದ್ದಾರೆ.
ಗೃಹ ಸಾಲ ಬೇಕೆಂದು ಬೆಟ್ಟಂಪಾಡಿ ಯ ರಾಧಾಕೃಷ್ಣರು ಅರ್ಜಿ ಸಲ್ಲಿಸಿದ್ದು, ಅದನ್ನು ಮಂಗಳೂರು ಪ್ರಾದೇಶಿಕ ಕಚೇರಿಗೆ ಕಳುಹಿಸಿ ಕೊಟ್ಟಿದ್ದೇವೆ. ಅಲ್ಲಿಂದ ನಿಯಮ ಪ್ರಕಾರ ಪ್ರಕ್ರಿಯೆ ನಡೆದಿದೆ. ಮತ್ತು ಅರ್ಜಿದಾರ ರಾಧಾಕೃಷ್ಣರಿಗೆ ಮಂಜೂರಾತಿಯ ಷರತ್ತು ಮತ್ತು ನಿಬಂಧನೆಗಳನ್ನು ತಿಳಿಸಲಾಗಿದೆ.

 

ಆದರೆ ಸಾಲದ ಅರ್ಜಿಯಲ್ಲಿ ಎರಡು ದಾಖಲೆಗಳು ಇರಬೇಕಿದ್ದು ಅದನ್ನು ಇಡುವಂತೆ ಸೂಚಿಸಲಾಗಿದೆ. ಈ ನಡುವೆ ಲಂಚ ಕೇಳಿದೆವೆಂಬ ಹಾಗೂ ಚೆಕ್‌ಗೆ ಸಹಿ ಮಾಡಿಸಿಕೊಂಡ ಕುರಿತು ಸುಳ್ಳು ಆರೋಪವನ್ನು ಅವರು ನಮ್ಮ ಮೇಲೆ ಮಾಡಿದ್ದರು. ಬ್ಯಾಂಕಿನ ನಿಯಮದ ಪ್ರಕಾರ ಟ್ರಾನ್ಸಫರ್ ಡೆಬಿಟ್ ವೋಚರ್ ಗೆ ಸಹಿ ಪಡೆಯಲಾಗಿದೆ. ಇದನ್ನು ಅವರ ಸಾಲದ ಅರ್ಜಿಯ ದಾಖಲೆಯಲ್ಲಿ ಇಡಲಾಗಿದೆ. ಆದರೆ ಇದುವರೆಗೂ ದಾಖಲೆಗಳನ್ನು ಅರ್ಜಿದಾರರು ಬ್ಯಾಂಕಿಗೆ ಸಲ್ಲಿಸಿಲ್ಲ. ಅರ್ಜಿದಾರರಿಗೆ ಅವರ ತಪ್ಪಿನ ಅರಿವಾಗಿದ್ದು ಬ್ಯಾಂಕಿಗೆ ಬಂದು ಕ್ಷಮೆ ಕೇಳಿದ್ದಾರೆ ಎಂದು ಅವರು ಸುದ್ದಿಗೆ ತಿಳಿಸಿದ್ದಾರೆ.
`’ನಾನು ಬ್ಯಾಂಕಿಗೆ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಿದೆ. ಕೆಲವೊಂದು ದಾಖಲೆ ಹಾಜರು ಪಡಿಸಲು ಬಾಕಿ ಇತ್ತು. ಈ ನಡುವೆ ನಾನು ಲಂಚ ಕೇಳಿದ ಬಗ್ಗೆ ಸುಳ್ಳು ಆರೋಪ ಮಾಡಿದೆ. ನನ್ನ ತಪ್ಪಿನ ಅರಿವಾಗಿ ಇದೀಗ ಕ್ಷಮೆ ಕೋರುತ್ತೇನೆ. ಮತ್ತು ನಾನು ನೀಡಿರುವ ದೂರನ್ನು ವಾಪಸ್ ಪಡೆದಿದ್ದೇನೆ ಎಂದು ರಾಧಾಕೃಷ್ಣರು ಸುದ್ದಿಗೆ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.