Breaking News

ಎಸ್.ಡಿ.ಪಿ.ಐ 12 ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ

Advt_Headding_Middle

 

 

ಹಲವು ಕಡೆ ಕಿಟ್ ವಿತರಣೆ

 

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ 12 ನೇ ವರ್ಷದ ಸಂಸ್ಥಪನಾ ದಿನಾಚರಣೆಯ ಅಂಗವಾಗಿ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸುಳ್ಯ, ಅರಂತೋಡು,ಬೆಳ್ಳಾರೆ, ಅಂಕತ್ತಡ್ಕ, ಸವಣೂರಿನಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಎಸ್.ಡಿ.ಪಿ.ಐ ಪಕ್ಷದ ಆಯಾಯ ವಲಯದ ಸ್ಥಳೀಯ ನಾಯಕರು ಧ್ವಜಾರೋಹಣಗೈದರು.


ಸಂಸ್ಥಾಪನಾ ದಿನದ ಪ್ರಯುಕ್ತ ಕೆಲವು ಕಡೆಗಳಲ್ಲಿ ಅರ್ಹ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ನಡೆಸಲಾಯಿತು.
ಹಲವು ಕಡೆಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರಾಧ್ಯಕ್ಷ, ಅಬ್ದುಲ್ ಕಲಾಂ ಸುಳ್ಯ, ಕಾರ್ಯದರ್ಶಿ ಮುಸ್ತಫಾ ದರ್ಜಿ,ಬೆಳ್ಳಾರೆ ಗ್ರಾ.ಪಂ ಸದಸ್ಯ ಹಾಗೂ ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಇಕ್ಬಾಲ್ ಬೆಳ್ಳಾರೆ, ಸವಣೂರು ಗ್ರಾ.ಪಂ ಸದಸ್ಯರಾದ ರಫೀಕ್ ಎಂ.ಎ,ರಝಾಕ್ ಕೆನರಾ,ಶ್ರೀಮತಿ ಚೆನ್ನು,ಬಾಬು ಎನ್ ಸವಣೂರು, ಸೇರಿದಂತೆ ಪಿಎಫ್ಐ ನಾಯಕರಾದ ಶಾಫಿ ಬೆಳ್ಳಾರೆ, ಫಾರೂಕ್ ನಿಂತಿಕಲ್, ರಝ್ಜಾಕ್ ಪೈಚಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಸವಣೂರಿನಲ್ಲಿ ದಲಿತ ಸಮುದಾಯದ ಚಂದ್ರಶೇಖರ ಮುಂಡತ್ತಡ್ಕ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿಕೊಂಡು ಪಕ್ಷಕ್ಕೆ ಸೇರ್ಪಡೆಗೊಂಡರು, ಸವಣೂರು ವಲಯಾಧ್ಯಕ್ಷ ಸಿದ್ದೀಕ್ ಅಲೆಕ್ಕಾಡಿ ಅವರನ್ನು ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.