Breaking News

ಜನಪ್ರತಿನಿಧಿಗಳ ಒತ್ತಾಯ ಪರಿಣಾಮ

Advt_Headding_Middle

 

ಕೋವಿಡ್ ಲಸಿಕೆ – ಅನೆಕ್ಷರ್ ಫಾರಂ ಲಸಿಕಾ ಕೇಂದ್ರದಲ್ಲೇ ವಿತರಣೆ

ಅನೆಕ್ಷರ್ ಫಾರಂಗೆ ನ.ಪಂ. ಗೆ ಬರಬೇಡಿ : ಮುಖ್ಯಾಧಿಕಾರಿ

18 ವರ್ಷ ಮೇಲ್ಪಟ್ಟ ನಗರ ಪ್ರದೇಶದ ಜನರು ಲಸಿಕೆ ಪಡೆಯಲು ಅನೆಕ್ಷರ್ ಫಾರಂ ಗಾಗಿ ಲಸಿಕಾ ಕೇಂದ್ರದಿಂದ ನಗರ ಪಂಚಾಯತ್ ಗೆ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿತ್ತು. ಇದರಿಂದ ಗೊಂದಲಗಳು ಸೃಷ್ಟಿ ಯಾಗಿತ್ತು. ವಿಷಯ ಅರಿತ ಜನಪ್ರತಿನಿಧಿಗಳು ಲಸಿಕಾ ಕೇಂದ್ರವಾದ ಕೆ.ವಿ.ಜಿ. ಪುರಭವನದಲ್ಲೇ ಅನೆಕ್ಷರ್ ಫಾರಂ ನೀಡಬೇಕೆಂದು ಒತ್ತಾಯಿಸಿದ್ದರು. ಇಂದು ಬೆಳಗ್ಗೆ ಕೂಡಾ ಕೆಲವರು ಅನೆಕ್ಷರ್ ಫಾರಂ ಗಾಗಿ ನ.ಪಂ. ಗೆ ತೆರಳಿದ್ದು ಅಲ್ಲಿ ಸಹಿ ಸಿಕ್ಕಿರಲಿಲ್ಲ. ವಿಷಯ ಜನಪ್ರತಿನಿಧಿಗಳ ಗಮನಕ್ಕೆ ಹೋಗಿ ನ.ಪಂ. ಮುಖ್ಯಾಧಿಕಾರಿ ಯವರನ್ನು ಜನಪ್ರತಿನಿಧಿಗಳು ಒತ್ತಾಯಿಸಿದರು. ಅದರಂತೆ ಇಂದಿನಿಂದ ಅನೆಕ್ಷರ್ ಫಾರಂ ಲಸಿಕಾ ಕೇಂದ್ರದಲ್ಲಿ ವಿತರಿಸಲು ಕ್ರಮಕೈಗೊಳ್ಳಲಾಗಿದೆ.

ನ.ಪಂ. ನ ಇಬ್ಬರು ಸಿಬ್ಬಂದಿಗಳು ಲಸಿಕಾ ಕೇಂದ್ರದ ಹೊರಗೆ ಕುಳಿತಿದ್ದು ಅವರು ಫಾರಂ ನೀಡುತ್ತಾರೆ. “ಇಂದಿನಿಂದ ಫಾರಂಗೆ ನ.ಪಂ. ಗೆ ಯಾರೂ ಬರುವುದು ಬೇಡ. ನಾವು ಇಲ್ಲೆ ವಿತರಿಸಲು ಕ್ರಮ ಕೈಗೊಂಡಿದ್ದೇವೆ” ಎಂದು ಮುಖ್ಯಾಧಿಕಾರಿ ಎಂ. ಆರ್. ಸ್ವಾಮಿ ಹೇಳಿದರು.

ಜನಪ್ರತಿನಿಧಿಗಳಾದ ಮಾಜಿ ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ, ನ.ಪಂ. ಸದಸ್ಯ ಎಂ. ವೆಂಕಪ್ಪ ಗೌಡ, ಡೇವಿಡ್ ಧೀರಾ ಕ್ರಾಸ್ತ, ಕೆ.ಎಸ್. ಉಮ್ಮರ್, ಸುಧಾಕರ ಕುರುಂಜಿಭಾಗ್, ತಾ.ಪಂ. ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ ಮೊದಲಾದವರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.