Breaking News

ಕಲ್ಲಪ್ಪಳ್ಳಿಯಲ್ಲಿ ಡಿವೈಎಫ್‌ಐ ವತಿಯಿಂದ ಶ್ರಮದಾನ

Advt_Headding_Middle

ಕೇರಳ ಗಡಿ ಪ್ರದೇಶದ ಕಲ್ಲಪ್ಪಳ್ಳಿಯ ಕಮ್ಮಾಡಿ ಎಂಬಲ್ಲಿ ಕರ್ನಾಟಕ-ಕೇರಳ ರಾಜ್ಯಗಳ ಗಡಿ ಭಾಗದಲ್ಲಿರುವ ಸುಳ್ಯ-ಕಮ್ಮಾಡಿ ರಸ್ತೆಯ ಸಂಪರ್ಕ ಸೇತುವೆಯ ನೀರು ಹೋಗುವ ಕೊಳವೆಗಳು ಮರದ ದಿಮ್ಮಿಗಳು, ಬಿದಿರು ಬೊಂಬುಗಳು, ಕಸಗಳಿಂದ ತುಂಬಿ ಜೋರು ಮಳೆ ಬಂದಾಗ ನೀರು ಸೇತುವೆಯ ಮೇಲೆ ಹರಿಯುವ ಸ್ಥಿತಿಯಲ್ಲಿತ್ತು. ಇದನ್ನು ಕಲ್ಲಪ್ಪಳ್ಳಿಯ ಡಿ.ವೈ.ಎಫ್.ಐ. ಸದಸ್ಯರು ಜೂನ್ 20 ರಂದು ಶ್ರಮದಾನದ ಮೂಲಕ ತೆರವು ಗೊಳಿಸಿದರು, ಹಾಗೂ ಪಾಣತ್ತೂರು-ಕಲ್ಲಪ್ಪಳ್ಳಿ-ಸುಳ್ಯ ರಸ್ತೆಯ ಹೊಂಡಗಳಿಗೆ ಕಲ್ಲು ಹಾಕಿ ಹೊಂಡ ಮುಚ್ಚಲಾಯಿತು.

ಶ್ರಮದಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪನತ್ತಡಿ ಗ್ರಾಮಪಂಚಾಯತಿನ ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎ ರಾಧಾಕೃಷ್ಣ, ಪರಪ್ಪ ಬ್ಲಾಕ್ ಪಂಚಾಯತ್ ಸದಸ್ಯರಾದ ಅರುಣ್ ರಂಗತ್ತಮಲೆ, ಆಲೆಟ್ಟಿ ಗ್ರಾಮ ಪಂಚಾಯತ್ ಸದಸ್ಯರಾದ ಸತ್ಯಕುಮಾರ್ ಆಡಿಂಜ ಮತ್ತು ಇತರರು ಭಾಗವಹಿಸಿದ್ದರು. ಶ್ರಮದಾನದ ನೇತೃತ್ವವನ್ನು DYFI ಕಲ್ಲಪ್ಪಳ್ಳಿ ಯುನಿಟಿನ ಅಧ್ಯಕ್ಷರಾದ ವಸಂತ ಯಂ. ಯಂ., ಕಾರ್ಯದರ್ಶಿಗಳಾದ ನಿತಿನ್ ಯಂ ಯಸ್, ವಹಿಸಿದ್ದರು, ಶ್ರಮದಾನದಲ್ಲಿ ಯುವಕರೊಂದಿಗೆ ಬಾಬಣ್ಣ ಮೂಲೆಹಿತ್ಲು, ತೀರ್ಥರಾಮ ಆಲುಗುಂಜ, ಶುಭಕುಮಾರ ಆಲುಗುಂಜ, ಚಿದಾನಂದ ಗರುಗುಂಜ,
ನವೀನ್ ಪನೆಯಾಲ, ಜಯಪ್ರಕಾಶ್ ಮೂಲೆಹಿತ್ಲು, ಅನಂತ ರಾಜ್ ದೇವಸ್ಯ, ಪವಿತ್ರ ಕಮ್ಮಾಡಿ ಮತ್ತು ಊರ ಇತರರು ಪಾಲ್ಗೊಂಡಿದ್ದರು.
ಶ್ರಮದಾನದ ನೇತೃತ್ವವನ್ನು ಡಿವೈಎಫ್‌ಐ ಕಲ್ಲಪ್ಪಳ್ಳಿ ಯುನಿಟಿನ ಅಧ್ಯಕ್ಷರಾದ ವಸಂತ ಯಂ ಯಂ, ಕಾರ್ಯದರ್ಶಿಗಳಾದ ನಿತಿನ್ ಯಂ ಯಸ್, ವಹಿಸಿದ್ದರು. ಶ್ರಮದಾನದಲ್ಲಿ ಬಾಬಣ್ಣ ಮೂಲೆಹಿತ್ಲು, ತೀರ್ಥರಾಮ ಆಲುಗುಂಜ, ಶುಭಕುಮಾರ ಆಲುಗುಂಜ, ಚಿದಾನಂದ ಗರುಗುಂಜ, ನವೀನ್ ಪನೆಯಾಲ, ಜಯಪ್ರಕಾಶ್ ಮೂಲೆಹಿತ್ಲು, ಅನಂತ ರಾಜ್ ದೇವಸ್ಯ, ಪವಿತ್ರ ಕಮ್ಮಾಡಿ ಪಾಲ್ಗೊಂಡಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.