Breaking News

ಕೊರೋನಾ ಗೆದ್ದವರ ಮಾತು

Advt_Headding_Middle

ಕೊರೋನಾ ಭಯದ ತೀವ್ರತೆ ಹೋಗಿದೆ

– ರಮ್ಯ ಲೋಹಿತ್‌ಎಣ್ಣೆಮಜಲು

2019 ರಲ್ಲಿ ಪ್ರಥಮ ಬಾರಿಗೆ ಕೋರೋನ ದೇಶಕ್ಕೆ ಲಗ್ಗೆ ಇಡುವ ಸಂದರ್ಭದಲ್ಲಿ ಭೀತಿಯ ಪ್ರಮಾಣ ಬಹಳಷ್ಟು ಇತ್ತು . ಎಲ್ಲೋ ಇದೆ ಎಂಬ ಕೋರೋನ ಇಂದು ಮನೆ ಬಾಗಿಲಿಗೆ ಬಡಿದಪ್ಪಳಿಸಿದೆ!!
ನನಗೆ ಉದ್ಯೋಗದ ನಿಮಿತ್ತ ಬ್ಯಾಂಕಿಗೆ ಸೇವಾ ದೃಷ್ಟಿಯಿಂದ ಹೋಗಿ ಬರಬೇಕಾಗಿತ್ತು . ಅಲ್ಲದೇ ಸಮಯ ಪರಿಪಾಲನೆಯ ಕಾನೂನು ಕ್ರಮದಿಂದಾಗಿಯೋ ಏನೋ ಗ್ರಾಹಕರ ಸಂಖ್ಯೆ (ದಟ್ಟಣೆ)ಯೂ ಬಹಳಷ್ಟಿತ್ತು. ಹೀಗಾಗಿಯೋ ಅಥವಾ ಇನ್ನಾವುದೋ ರೀತಿಯಲ್ಲಿ ಕೊರೋನ ನನ್ನನ್ನು ಬೆನ್ನಟ್ಟಿ ಬಂತು!
ತನಗೇ ಕೋವಿಡ್ ಪಾಸಿಟಿವ್ ಬಂದು ಹೋದ ಮೇಲೆ ಭಯದ ತೀವ್ರತೆ ತೀರಾ ಕಡಿಮೆಯಾಗಿದೆ. ಪ್ರತಿ ವರ್ಷ ಬರುವ ಜ್ವರದಂತೆ ಅನ್ನಿಸಿತು. ಆದರೆ ಕೋರೋನ ವೈರಸ್ ಇದೆ ಎಂಬುದು ಕಟು ಸತ್ಯ. ನನ್ನ ಅನುಭವದ ಪ್ರಕಾರ ಜ್ವರ ,ಶೀತ ,ಕೆಮ್ಮು , ಆಯಾಸದ ಜೊತೆಗೆ ಬಾಯಿ ರುಚಿ , ವಾಸನೆ ಗ್ರಹಿಸುವಿಕೆ ಇರಲಿಲ್ಲ. ಆದರೆ ಯಾವುದೇ ಕಾರಣಕ್ಕೂ ಭಯ ಪಡುವ ಅವಶ್ಯಕತೆ ಇಲ್ಲ. ವೈದ್ಯರ ಸಲಹೆ ಮೇರೆಗೆ ಔಷಧಿಗಳನ್ನು ಸರಿಯಾದ ರೀತಿಯಲ್ಲಿ ತೆಗೆದುಕೊಂಡು ಜೊತೆಗೆ ದಿನಕ್ಕೆ ಮೂರು ಬಾರಿ ಬಿಸಿನೀರಿನಲ್ಲಿ ಅರಶಿಣ, ಬೆಳ್ಳುಳ್ಳಿ, ತುಳಸಿ ಎಲೆಗಳನ್ನು ಬಳಸಿ ಹಬೆ ತೆಗೆದು ಕೊಂಡು ರಾತ್ರಿ ಮಲಗುವ ಮುಂಚೆ ೫- ೬ ಕರಿಮೆಣಸು ಒಂದು ಸಣ್ಣ ಕಲ್ಲುಪ್ಪನ್ನು ತಿನ್ನುವುದು ಹಾಗೂ ಶ್ವಾಸಕೋಶಕ್ಕೆ ಈ ವೈರಸ್ ಬಹಳಷ್ಟು ತೊಂದರೆ ಮಾಡುವುದರಿಂದ ಭಸ್ತ್ರಿಕ ಪ್ರಾಣಾಯಾಮವನ್ನು ಕೂಡ ಮಾಡಿದ್ದರಿಂದಲೋ ಏನೋ ನಾನು ೬ತಿಂಗಳ ಗರ್ಭಿಣಿಯಾಗಿದ್ದರೂ ಕೂಡ ಕೇವಲ ೫ ದಿನಗಳಲ್ಲಿ ಗುಣಮುಖ ಗೊಂಡಿರುವೆ .
ನಾವು ನಮಗೆ ಹಾಗೂ ಇತರರಿಗೋಸ್ಕರ ಕೋವಿಡ್ ನಿಯಮವನ್ನು ಪಾಲಿಸುವುದರ ಜೊತೆಗೆ ಉತ್ತಮ ಆಹಾರ ಪದ್ಧತಿಯನ್ನು ಇಟ್ಟುಕೊಂಡಲ್ಲಿ ಬಹುಮುಖ್ಯವಾಗಿ ಆತ್ಮವಿಶ್ವಾಸ ಇದ್ದಲ್ಲಿ ಅಲ್ಲದೆ ಇಂದಿನ ಮಾಧ್ಯಮಗಳಲ್ಲಿ ಬರುವಂತಹ ಕರೋನವೈರಸ್ ಮಹಾಮಾರಿಯ ವೈಭವೀಕರಣದಿಂದ ಭಯ ಆತಂಕ ಒತ್ತಡ ಹೆಚ್ಚಿಸುವಂತಹ ಕಾರ್ಯಕ್ರಮಗಳನ್ನು ನೋಡುವುದರಿಂದ ದೂರ ಇದ್ದು ಆತ್ಮವಿಶ್ವಾಸವನ್ನು ಹೆಚ್ಚಿಸುವ ಕಾರ್ಯಕ್ರಮವನ್ನು ನೋಡುವುದರಿಂದಲೂ ಕೂಡ ಮಾನಸಿಕ ಸ್ವಾಸ್ಥ್ಯವನ್ನು ಹೆಚ್ಚಿಸಿಕೊಂಡಲ್ಲಿ ಕೋರೋನ ವೈರಸ್ ಕೆಲವೇ ದಿನಗಳಲ್ಲಿ ನಮ್ಮ ದೇಹದಿಂದ ಬಹುದೂರ ಹೋಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.
ತನಗಾಗಿ ಪರರಿಗಾಗಿ ಕೋವಿಡ್ ನಿಯಮವನ್ನು ಪಾಲಿಸಿ ಅತ್ಯಂತ ಶೀಘ್ರವಾಗಿ ಕೋವಿಡ್ ೧೯ ವೈರಸ್ ಮಹಾಮಾರಿಯನ್ನು ಬಡಿದೋಡಿಸುವಲ್ಲಿ ಎಲ್ಲರೂ ಏಕ ಮನಸ್ಕರಾಗಿ ಸಹಕರಿಸೋಣ…
– ರಮ್ಯ ಲೋಹಿತ್‌ಎಣ್ಣೆಮಜಲು
ಉದ್ಯೋಗಿ, ದ ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಕಡಬ ಶಾಖೆ .

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.