ಅನೆಕ್ಷರ್ ಫಾರಂ ಲಸಿಕಾ ಕೇಂದ್ರದಲ್ಲೇ ನೀಡಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಸದಸ್ಯರ ಪ್ರತಿಭಟನೆ

Advt_Headding_Middle

ನ.ಪಂ. ಗೇ ಬರಬೇಕು. ಪುರಭವನದಲ್ಲಿ ಕೊಡಲು ಸಾಧ್ಯವಿಲ್ಲ : ನ.ಪಂ. ಅಧ್ಯಕ್ಷರ ಪ್ರತಿಪಾದನೆ

ಜನರಿಗೆ ತೊಂದರೆಯಾಗದಂತೆ ವ್ಯವಸ್ಥೆ ಏರ್ಪಡಿಸಿ : ತಹಶೀಲ್ದಾರ್ ಸಲಹೆ

ಕೋವಿಡ್ ಲಸಿಕೆ ಪಡೆಯಲು ಬರುವ 18 ರಿಂದ 44 ವರ್ಷದವರೆಗಿನ ಆದ್ಯತಾ ಪಟ್ಟಿಯಲ್ಲಿರುವ ಜನತೆಗೆ ಅನೆಕ್ಷರ್- 3 ಫಾರಂ ಅನ್ನು ನ.ಪಂ.ನವರು ಲಸಿಕಾ ಕೇಂದ್ರದಲ್ಲೇ ನೀಡುವಂತೆ ಮಾಡಿ ಜನತೆ ನ.ಪಂ. ಕಚೇರಿ ಮತ್ತು ಲಸಿಕಾ ಕೇಂದದ ಮಧ್ಯೆ ಅಲೆದಾಡುವುದನ್ನು ತಪ್ಪಿಸಲು ನಿನ್ನೆ ಮಾಡಲಾಗಿದ್ದ ವ್ಯವಸ್ಥೆಯನ್ನು ರದ್ದುಪಡಿಸಿದ ನ.ಪಂ. ನ ಆಡಳಿತ ಕ್ರಮದ ವಿರುದ್ಧ ವಿಪಕ್ಷ ಕಾಂಗ್ರೆಸ್ ಸದಸ್ಯರು ಇಂದು ಲಸಿಕಾ ಕೇಂದ್ರವಾದ ಪುರಭವನದಲ್ಲಿ ಪ್ರತಿಭಟನೆ ನಡೆಸಿದ, ಲಸಿಕೆ ಪಡೆಯಲು ಬರುವವರು ಯಾವ ಆದ್ಯತಾ ಪಟ್ಟಿಯಲ್ಲಿರುವವರೆಂಬ ಬಗ್ಗೆ ಪರಿಶೀಲನೆ ಮಾಡದೆ ಅನೆಕ್ಷರ್ ಫಾರಂಗೆ ಸಹಿ ಹಾಕಿ ಕೊಡಲಾಗುವುದಿಲ್ಲವಾದ್ದರಿಂದ ನ.ಪಂ. ಅಧಿಕಾರಿಗಳು ಪುರಭವನಕ್ಕೆ ಬಂದು ಕುಳಿತುಕೊಳ್ಳಲು ಸಾಧ್ಯವಿಲ್ಲ. ಜನರು ನ.ಪಂ. ಕಚೇರಿಗೆ ಬರಬೇಕು ಎಂದು ನ.ಪಂ. ಅಧ್ಯಕ್ಷರು ಪ್ರತಿಪಾದಿಸಿದ ಹಾಗೂ ಸ್ಥಳಕ್ಕೆ ಬಂದ ಸಬ್ ಇನ್ಸ್‌ಸ್ಪೆಕ್ಟರ್ ಹಾಗೂ ತಹಶೀಲ್ದಾರ್ ಜನರೊಂದಿಗೆ ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ, ಜನರಿಗೆ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ರೂಪಿಸುವಂತೆ ನ.ಪಂ. ಆಡಳಿತಕ್ಕೆ ಸಲಹೆ ನೀಡಿದ ಘಟನೆ ಇಂದು ನಡೆಯಿತು.
ಕೋವಿಡ್ ಲಸಿಕೆ ಪಡೆಯಲು ಪುರಭವನಕ್ಕೆ ಬರುವ ಜನರು ಅನೆಕ್ಷರ್ ಫಾರಂ ಪಡೆಯಲು ನ.ಪಂ. ಹೋಗಿ ಬರಬೇಕಾಗಿತ್ತು.

ಇದು ಜನರಿಗೆ ತ್ರಾಸದಾಯಕವಾಗಿ ಸಾರ್ವಜನಿಕರಲ್ಲಿ ಗೊಂದಲ ನಿರ್ಮಾಣವಾಗಿತ್ತು. ಫಲಾನುಭವಿಗಳ ಮತ್ತು ಜನಪ್ರತಿನಿಧಿಗಳ ಕೋರಿಕೆಯ ಮೇರೆಗೆ ಅನೆಕ್ಷರಿ ಫಾರಂ ಅನ್ನು ಸುಳ್ಯ ಪುರಭವನದಲ್ಲಿಯೇ ನ.ಪಂ.ನವರು ನೀಡುವಂತೆ ತೀರ್ಮಾನಿಸಿ, ನಿನ್ನೆ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನ.ಪಂ. ಮುಖ್ಯಾಧಿಕಾರಿಯವರು ನೀಡುತ್ತಿದ್ದರು. ಆದರೆ ನಿನ್ನೆ ಮಧ್ಯಾಹ್ನದ ನಂತರ ಫಾರಂನ್ನು ಪುರಭವನದಲ್ಲಿ ನೀಡುವುದನ್ನು ಸ್ಥಗಿತಗೊಳಿಸಿ, ನಗರ ಪಂಚಾಯತ್‌ಗೆ ವರ್ಗಾವಣೆ ಮಾಡಲಾಯಿತು. ಇದರಿಂದ ಆಕ್ರೋಶ ಗೊಂಡ ನಗರ ಪಂಚಾಯತ್ ಸದಸ್ಯ ಎಂ.ವೆಂಕಪ್ಪ ಗೌಡರ ನೇತೃತ್ವದಲ್ಲಿ ನ.ಪಂ. ಕಾಂಗ್ರೆಸ್ ಸದಸ್ಯರಾದ ಶರೀಫ್ ಕಂಠಿ ಹಾಗೂ ಡೇವಿಡ್ ಧೀರ ಕ್ರಾಸ್ತಾರವರು ಇಂದು ಪುರಭವನಕ್ಕೆ ಹೋಗಿ ಲಸಿಕೆ ನೀಡುವ ಕೇಂದ್ರದಲ್ಲಿ ಅನೆಕ್ಷರಿ ಅರ್ಜಿಗೆ ಸಹಿ ಹಾಕದೆ ಇರುವ ಬಗ್ಗೆ ಪ್ರತಿಭಟನೆಗೆ ಮುಂದಾಗಿ ಖಾಲಿ ಅರ್ಜಿಯನ್ನು ತರುವವರನ್ನು ವ್ಯಾಕ್ಸಿನೇಷನ್ ಕೇಂದ್ರದಲ್ಲಿ ಕೂರಿಸಿ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು. ಈ ವೇಳೆಗೆ ಸ್ಥಳಕ್ಕೆ ಬಂದ ಸುಳ್ಯ ಠಾಣಾ ಉಪನಿರೀಕ್ಷಕ ಎಂ.ಆರ್. ಹರೀಶ್‌ರವರ ಬಳಿ ಬೀರಮಂಗಲದ ಯುವತಿಯೊಬ್ಬಳು ಅರ್ಜಿ ಫಾರಂಗೆ ಸಹಿ ನೀಡಲಿಲ್ಲವೆಂಬ ವಿಷಯಕ್ಕೆ ಸಂಬಂಧಿಸಿದಂತೆ ಅಹವಾಲುಗಳನ್ನು ಹೇಳಿಕೊಂಡರು. ಈ ವೇಳೆಗೆ ಇದೇ ಘಟನೆಗೆ ಸಂಬಂಧಿಸಿದ ಇನ್ನೂ ನಾಲ್ಕೈದು ಮಂದಿ ಅಲ್ಲಿ ಸೇರಿಕೊಂಡು ಕಳೆದ ಮೂರು-ನಾಲ್ಕು ದಿನಗಳಿಂದ ಈ ರೀತಿ ಯಾಗುತ್ತಿದ್ದು, ಸಮಸ್ಯೆಯಾಗುತ್ತಿದೆ ಎಂದು ಹೇಳಿಕೊಂಡರು. ಇದಕ್ಕೆ ಉತ್ತರಿಸಿದ ಎಂ.ಆರ್.ಹರೀಶ್‌ರವರು ಸರ್ಕಾರವು ನೀಡಿರುವ ನಿಯಮಾನುಸಾರ ಲಸಿಕೆಗಳನ್ನು ನೀಡಲಾಗುತ್ತಿದ್ದು, ಆ ರೀತಿಯಲ್ಲಿಯೇ ಲಸಿಕಾ ಚಟುವಟಿಕೆ ನಡೆಯುತ್ತಿದೆ. 18 ರಿಂದ ಮೇಲ್ಪಟ್ಟವರ ಆದ್ಯತೆಯ ಮೇರೆಗೆ ಯಾರಿಗೆಲ್ಲಾ ಇಂದು ಲಸಿಕೆಗೆ ಅರ್ಹತೆ ಇರುವವರು ಅವರೆಲ್ಲರಿಗೂ ಲಸಿಕೆ ನೀಡಲಾಗುತ್ತಿದೆ. ಉಳಿದಂತೆ ಆಯಾ ಇಲಾಖೆಯ ಅಥವಾ ಸಂಸ್ಥೆಗಳ ವ್ಯವಸ್ಥಾಪಕರ ಸಹಿ ಪಡೆದುಕೊಂಡು ಬಂದಲ್ಲಿ ಅಂತಹವರಿಗೂ ಇದರ ಪ್ರಯೋಜನ ಲಭಿಸುತ್ತಿದೆ. ಬಾಕಿಯಿರುವಂತೆ ನಿಮ್ಮನಿಮ್ಮ ಆದ್ಯತೆಗೆ ಸಂಬಂಧಪಟ್ಟ ಲಸಿಕೆಯ ದಿನಗಳು ಬರುವವರೆಗೆ ಕಾಯುವಂತೆ ಮನವರಿಕೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಯುವತಿ ನನ್ನಂತೆ ಇನ್ನೂ ಹಲವಾರು ಯುವತಿಯರು ಕಳೆದ ಕೆಲವು ದಿನಗಳಿಂದ ಲಸಿಕೆಯನ್ನು ಪಡೆದುಕೊಂಡಿರುತ್ತಾರೆ. ಅವರು ಯಾವುದೇ ಆದ್ಯತೆಗೆ ಸೇರಿಕೊಂಡಿರಲಿಲ್ಲ. ಹೀಗಿರುವಾಗ ನಾನು ಕೂಡಾ ರಾತ್ರಿ ಪಾಳೆಯದ ಕೆಲಸವನ್ನು ಮುಗಿಸಿ ಇದೀಗ ಇಲ್ಲಿ ಎರಡು ದಿನಗಳಿಂದ ಬರುತ್ತ ಇದ್ದು, ನಮ್ಮ ಅರ್ಜಿಗಳಿಗೆ ಸಹಿ ಹಾಕಲು ನಗರ ಪಂಚಾಯತ್‌ಗೆ ಸಂಬಂಧಪಟ್ಟವರು ನಮ್ಮ ಮೇಲೆ ದರ್ಪದ ಮಾತನಾಡಿ ಅಷ್ಟು ಅವಶ್ಯಕತೆಯಿದ್ದರೆ ಹಣ ಕೊಟ್ಟು ಖಾಸಗಿ ಆಸ್ಪತ್ರೆಗಳಿಂದ ಪಡೆದುಕೊಳ್ಳಿ ಎಂದು ಬೇಜವಾಬ್ದಾರಿಯ ಮಾತುಗಳನ್ನಾಡುತ್ತಿದ್ದಾರೆಂದು ಆರೋಪಿಸಿದರು. ಈ ಸಮಯ ಎಂ.ವೆಂಕಪ್ಪ ಗೌಡರು ಲಸಿಕಾ ಕೇಂದ್ರದಲ್ಲಿ ರಾಜಕೀಯ ಆಟ ನಡೆಯುತ್ತಿದ್ದು, ನಿನ್ನೆ ಏಕಾಏಕಿ ಅನೆಕ್ಷರಿ ಅರ್ಜಿಗಳನ್ನು ಇಲ್ಲಿಂದ ಕೊಡುವುದನ್ನು ನಿಲ್ಲಿಸಿ, ಜನರನ್ನು ಗೊಂದಲಕ್ಕೀಡು ಮಾಡಿರುವುದು ಸರಿಯಲ್ಲವೆಂದು ಹೇಳಿದರು.

ಈ ವೇಳೆಗೆ ನಗರ ಪಂಚಾಯತ್ ಅಧ್ಯಕ್ಷ ವಿನಯ್‌ಕುಮಾರ್ ಕಂದಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಬುದ್ಧ ನಾಕ, ಮುಖ್ಯಾಧಿಕಾರಿ ಎಂ.ಆರ್ ಸ್ವಾಮಿ, ಗ್ರಾಮಲೆಕ್ಕಾಧಿಕಾರಿ ತಿಪ್ಪೇಶ್ ಲಸಿಕಾ ಕೇಂದ್ರಕ್ಕೆ ಬಂದರು. ಈ ಸಂದರ್ಭ ಇವರು ಲಸಿಕಾ ಕೇಂದ್ರದ ಒಳ ಭಾಗಕ್ಕೆ ಬರುತ್ತಿದ್ದಂತೆ ಇವರ ಬಳಿ ಬಂದ ಎಸ್.ಐ. ಹರೀಶ್‌ರವರು ಪಂಚಾಯತ್ ವತಿಯಿಂದ ಲಸಿಕೆಗೆ ಇರುವ ನಿಬಂಧನೆಯ ಬಗ್ಗೆ ಇಲ್ಲಿ ಸೇರಿರುವವರಿಗೆ ಮಾಹಿತಿ ನೀಡುವಂತೆ ಹೇಳಿದರು. ಈ ಸಂದರ್ಭ ವಿನಯ್‌ಕುಮಾರ್ ಕಂದಡ್ಕ ಮತ್ತು ವೆಂಕಪ್ಪ ಗೌಡರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆಯಿತು. ನೀವುಗಳು ರಾಜಕೀಯ ಮಾಡುತ್ತಿದ್ದು, ಜನರನ್ನು ಗೊಂದಲಕ್ಕೀಡು ಮಾಡುತ್ತಿದ್ದೀರಿ, ನಮ್ಮ ಇಂದಿನ ಆದ್ಯತೆಯ ಪ್ರಕಾರ ಆಟೋರಿಕ್ಷಾ ಚಾಲಕರು, ಕಾರ್ಮಿಕರು, ಬ್ಯಾಂಕ್ ಸಿಬ್ಬಂದಿಗಳು ಹೀಗೆ ಇನ್ನೂ ಕೆಲವು ವರ್ಗದವರನ್ನು ಸೂಚಿಸಿ ಇಂತಹವರಿಗೆ ಮಾತ್ರ 18 ರಿಂದ ೪೫ರ ಒಳಗಡೆ ಅರ್ಜಿಗಳಿಗೆ ಸಹಿ ಹಾಕಿ ಕೊಡಲಾಗುವುದು. 45 ವರ್ಷದ ಮೇಲಿನವರಿಗೆಲ್ಲರಿಗೂ ಲಸಿಕೆ ನೀಡುತ್ತಿದ್ದು, ಉಳಿದವರು ಸುಮ್ಮನೆ ವಾಟ್ಸಾಪ್ ಮೆಸೇಜ್‌ಗಳನ್ನು ನೋಡಿ ಬಂದವರಾಗಿರುತ್ತಾರೆ. ಅಂತಹವರಿಗೆ ಆದ್ಯತೆಯಿಲ್ಲದಿರುವ ಕಾರಣ ನೀಡಲು ಅಸಾಧ್ಯವೆಂದು ವಿನಯ್‌ಕುಮಾರ್ ಕಂದಡ್ಕ ಹೇಳಿದರು.

ಲಸಿಕೆ ಹಾಕಲು ಬರುವ ನಗರ ವ್ಯಾಪ್ತಿಯ ಜನರಿಗೆ ಇಲ್ಲೆ ಅನೆಕ್ಷರ್ ಫಾರಂ ನೀಡಬೇಕೆಂದು ವೆಂಕಪ್ಪ ಗೌಡರು ಒತ್ತಾಯಿಸಿದರೆ, ಅದು ಸಾಧ್ಯವಿಲ್ಲ. ಜನರು ನ.ಪಂ.ಗೇ ಬರಬೇಕೆಂದು ವಿನಯ್‌ಕುಮಾರ್ ಹೇಳಿದರು. ಈ ವೇಳೆ ಬಂದ ತಹಶೀಲ್ದಾರ್ ಅನಿತಾಲಕ್ಷ್ಮೀಯವರು ಎರಡೂ ಕಡೆಯವರ ಅಹವಾಲು ಆಲಿಸಿ, ಜನರಿಗೆ ತೊಂದರೆಯಾಗದಂತೆ ಅನೆಕ್ಷರ್ ಫಾರಂ ಕೊಡುವಂತೆ ನ.ಪಂ. ಆಡಳಿತಕ್ಕೆ ಸಲಹೆ ನೀಡಿದರು.
ಬಳಿಕ ಅಧ್ಯಕ್ಷ ವಿನಯ್ ಕಂದಡ್ಕರು, ಅನೆಕ್ಷರ್ ಫಾರಂಗೆ ಸಹಿ ಬೇಕಿದ್ದ ಅಲ್ಲಿದ್ದ ಸುಮಾರು 10 ಮಂದಿಯನ್ನು ನ.ಪಂ. ವಾಹನದಲ್ಲೆ ನ.ಪಂ. ಕಚೇರಿಗೆ ಕಳಿಸಿ ಸಹಿ ಹಾಕಿಸಿ ಕೊಡಿಸಿದರು.
ಆದ್ಯತೆ ಪಟ್ಟಿಯಲ್ಲಿಲ್ಲದೆಯೂ ಲಸಿಕೆ ಪಡೆಯಲು ಬಂದಿದ್ದವರು ವಾಪಸ್ ಹೋಗಬೇಕೆಂದು ಕಂದಡ್ಕರು ಹೇಳಿದಾಗ ನ.ಪಂ. ಸದಸ್ಯ ಶರೀಫ್ ಕಂಠಿ ಮತ್ತು ಅಲ್ಲಿಗೆ ಬಂದಿದ್ದ ಜನರು ಇವತ್ತು ಕೊಡುವಂತೆ ವಿನಂತಿ ಮಾಡಿಕೊಂಡರು.
ಕೊನೆಗೆ ಒಪ್ಪಿದ ಅಧ್ಯಕ್ಷ ವಿನಯ ಕಂದಡ್ಕ, ಅವರೆಲ್ಲರಿಗೂ ಅನೆಕ್ಷರ್ ಫಾರಂಗೆ ಸಹಿ ಹಾಕಿಸಿ ನೀಡಿ, ನಾಳೆಯಿಂದ ಆದ್ಯತೆ ಪಟ್ಟಿಯಲ್ಲಿ ಇಲ್ಲದ 18 ರಿಂದ 44 ವರ್ಷದೊಳಗಿನವರು ಬಂದರೆ ಲಸಿಕೆ ಕೊಡಲಾಗುವುದಿಲ್ಲ ಎಂದು ಘೋಷಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.