ಪಂಜ: ಅಪಾಯ ಆಹ್ವಾನಿಸುತ್ತಿರುವ ಮಂಜೇಶ್ವರ- ಸುಬ್ರಹ್ಮಣ್ಯ ರಸ್ತೆ

Advt_Headding_Middle

 

ಇಲಾಖೆಯ‌ ನಿರ್ಲಕ್ಷಕ್ಕೆ ಎಸ್.ಡಿ
ಪಿ.ಐ. ಖಂಡನೆ

ಮಂಜೇಶ್ವರ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಕರಿಕ್ಕಳದಿಂದ ಪಂಜಕ್ಕೆ ಹೋಗುವ ಭಾಗದಲ್ಲಿ ರಸ್ತೆಯ ಎಡಭಾಗದ ಗುಡ್ಡ ಜರಿದು ಅಪಾಯದ ಸ್ಥಿತಿಯಲ್ಲಿದ್ದು, ರಸ್ತೆ ಬದಿಯ ಮರಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಎಸ್‌ಡಿಪಿಐ ಆಗ್ರಹಹಿಸಿದೆ.
ಈ ರಸ್ತೆಯ ಕರಿಕ್ಕಳದ ಬಳಿ ಕಳೆದ ಎಂಟು ತಿಂಗಳ ಹಿಂದೆ ಬಂದ ಗಾಳಿ ಮಳೆಗೆ ರಸ್ತೆ ಬದಿಯ ಗುಡ್ಡ ಜರಿದು ರಸ್ಯೆಗೆ ಮಣ್ಣು, ವಿದ್ಯುತ್ ಕಂಬಗಳು ಮತ್ತು ಮರಗಳು ಬಿದ್ದಿತ್ತು. ಇದನ್ನು ಸ್ಥಳೀಯರು
ಹಾಗೂ ಎಸ್‌ಡಿಪಿಐ ಕಾರ್ಯಕರ್ತರು ಮಧ್ಯರಾತ್ರಿಯಲ್ಲಿ ಶ್ರಮದಾನದ ಮೂಲಕ ರಸ್ತೆ ತೆರವುಗೊಳಿಸಿದ್ದರು.
ಮರುದಿನ ಅಧಿಕಾರಿಗಳು ಆಗಮಿಸಿ ಜೆಸಿಬಿ ಮೂಲಕ ಮಣ್ಣನ್ನು ಸ್ವಲ್ಪ ಮಟ್ಟಿಗೆ ತೆರವುಗೊಳಿಸಿ ಹೋದವರು ಪುನಃ ಕಣ್ಣೆತ್ತಿಯು ನೋಡಿಲ್ಲ. ರಸ್ತೆಯ ಬದಿಯ ಬರೆ ಜರಿದಿರುವುದರಿಂದ ಹಲವಾರು ಮರಗಳು ಇಂದೋ ನಾಳೆಯೋ ಬೀಳುವ ಅಪಾಯಕಾರಿ ಸ್ಥಿತಿಯಲ್ಲಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾದ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ. ಇದೇ ಭಾಗದಲ್ಲಿ ಕೆಇಬಿಯವರು ಬೆಳ್ಳಾರೆಯಿಂದ ಗುತ್ತಿಗಾರಿಗೆ ಸಂಪರ್ಕ ಕಲ್ಪಿಸುವ 33 ಕೆ.ವಿ. ವಿದ್ಯುತ್ ಕಂಬಗಳನ್ನು ಹಾಕಿದ್ದಾರೆ. ಅರ್ಧ ಜರಿದಿರುವ ಬರೆಯ ಪಕ್ಕದಲ್ಲಿರುವ ಮರಗಳು ಸಣ್ಣ ಗಾಳಿ ಮಳೆ ಬಂದು ಬಿದ್ದರೆ ವಿದ್ಯುತ್ ಲೈನಿನ ಮೇಲೆ ಬಿದ್ದರೆ ವಿದ್ಯುತ್ ಕಂಬಗಳು ರಾಜ್ಯ ಹೆದ್ದಾರಿಯ ರಸ್ತೆಯ ಮೇಲೆ ಬೀಳಲಿದೆ.
ಈ ಮಾರ್ಗದಲ್ಲಿ ದಿನ ನಿತ್ಯ ಸುಬ್ರಹ್ಮಣ್ಯ ದೇವಾಸ್ತಾನಕ್ಕೆ ಸಾವಿರಾರು ಭಕ್ತರು, ಶಾಲಾ ಕಾಲೇಜ್ ವಿದ್ಯಾರ್ಥಿಗಳು ಸೇರಿದಂತೆ ನೂರಾರು ವಾಹನಗಳು ಸಂಚರಿಸುತ್ತಿರುತ್ತದೆ. ಈ ಮಾರ್ಗವಾಗಿ ‌ದಿನ ನಿತ್ಯ ಹಲವಾರು ಜನಪ್ರತಿನಿಧಿಗಳು, ಸರಕಾರಿ ಅಧಿಕಾರಿಗಳು ಸಂಚರಿಸುತ್ತಿದ್ದರೂ ಈ ಬಗ್ಗೆ ಯಾರೂ ಗಮನ ಹರಿಸದಿರುವುದು ದುರಂತವೇ ಸರಿ. ಹಾಗಾಗಿ ತಕ್ಷಣವೆ ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಂಡು ಸಂಭಾವ್ಯ ಅಪಾಯವನ್ನು ತಪ್ಪಿಸುವಂತೆ ಎಸ್‌ಡಿಪಿಐ ಎಣ್ಮೂರು ವಲಯ ಅಧ್ಯಕ್ಷರಾದ ಹಮೀದ್ ಮರಕ್ಕಡ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.