Breaking News

ಶಾಲೆಗಳಿಗೆ ಮರು ಜೀವ ಬರಲಿ

Advt_Headding_Middle

ಅಯ್ಯೋ…ಕೊರೋನಾ ನೀನೆಷ್ಟು ಕ್ರೂರಿ.ಇಡೀ ಪ್ರಪಂಚವನ್ನೇ ಸ್ತಬ್ಧ ಗೊಳಿಸಿದ ನಿನ್ನ ಸಾಮರ್ಥ್ಯ ಅಸಾಮಾನ್ಯ.ಈ ಮಧ್ಯೆ ಮಕ್ಕಳು, ಕಿರಿಯರು,ಹಿರಿಯರು,ಬಡವರು,ಶ್ರೀಮಂತರು,ರಾಜಕಾರಣಿಗಳೆನ್ನದೆ ಎಲ್ಲರನ್ನೂ ನಲುಗಿಸಿದೆ.ಅದರಲ್ಲೂ ಪುಟ್ಟ ಮಕ್ಕಳು ತಮ್ಮ ಶೈಕ್ಷಣಿಕ ಜೀವನಕ್ಕೆ ಕಾಲಿಡುವಾಗಿನ ಆನಂದವನ್ನೇ ಕಸಿದುಕೊಂಡು ಅದೇನು ಆನಂದ ಪಡೆದೆಯೋ? ನಮ್ಮಂತಹ ಶಿಕ್ಷಕರಿಗೆ ಆತ್ಮತೃಪ್ತಿ ಇಲ್ಲದಂತೆ ಮಾಡಿದೆ.ನಾವು ಪುಟ್ಟ ಮಕ್ಕಳೊಂದಿಗೆ ಸೇರಿ ಆಟ,ಪಾಠ ಮಾಡುತ್ತ ಅನುಭವಿಸಿದ ದಿನಗಳನ್ನು ಮತ್ತೆಂದು ಕಾಣುವೆವೋ? ಎಫ್.ಡಿ.ಎ.,ಎಸ್.ಡಿ.ಎ. ಕೆಲಸ ಮಾಡುತ್ತಿರುವಂತೆ ಅನಿಸುತ್ತದೆ. ನಿನ್ನಿಂದ ಶಿಕ್ಷಣ ಇಲಾಖೆ ಅರ್ಥಾತ್ ಮೂಲ ಶಿಕ್ಷಣ ಪಡೆಯಬೇಕಾದ ಮಕ್ಕಳ ಭವಿಷ್ಯದ ಚಿಂತೆಯಾಗುತ್ತಿದೆ.ಇದೆಲ್ಲ ನಿನ್ನಲ್ಲಿ ಹೇಳಿ ಏನೂ ಪ್ರಯೋಜನವಿಲ್ಲ. ನೀನೊಂದು ಕರುಣೆಯಿಲ್ಲದ ಕಣ್ಣಿಗೆ ಕಾಣದ ವೈರಸ್ ತಾನೇ?
ತರಗತಿಯಲ್ಲಿ ಮಕ್ಕಳು ನಮ್ಮನ್ನು ಮಿಸ್ ಮಾಡಿ ಏನೇನೋ ಚಟುವಟಿಕೆಗಳನ್ನು ಮಾಡಲು ಪ್ರಯತ್ನಿಸುತ್ತಿದ್ದರೂ ಶಿಕ್ಷಕರಾದ ನಾವು ನೋಡಿಯೂ ನೋಡದಂತೆ ಮಾಡಿ ಮನದೊಳಗೇ ನಗುತ್ತ ತಿಳಿ ಹೇಳುತ್ತಿದ್ದೆವು.ಈಗ ನಾವು ಮಕ್ಕಳನ್ನು ಮಿಸ್ ಮಾಡಿಕೊಂಡು ರೇಡಿಯೋ ಪಾಠ,ಸಂವೇದ ಪಾಠ,ಆನ್‌ಲೈನ್ ಪಾಠ ಎಂದು ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗುವಂತಾಗಿದೆ.ಇದು ಎಷ್ಟು ಪರಿಣಾಮಕಾರಿ ಎಂದು ಎಲ್ಲರೂ ಬಲ್ಲರು. ಆದರೂ ಅನಿವಾರ್ಯ. ಏನೂ ಇಲ್ಲದಿರುವುದಕ್ಕಿಂತ ಅಷ್ಟಾದರೂ ಆಗಲಿ ಎನ್ನುತ್ತ ಮಾಡಬೇಕಾಗಿದೆ. ಈಗ ಶಿಕ್ಷಕರು ಶಾಲೆಗೆ ಹೋಗಿ ದಾಖಲಾತಿ, ತರಗತಿಗೆ ಪೂರ್ವ ಸಿದ್ಧತೆ ಇತ್ಯಾದಿ ಮಾಡುತ್ತಿದ್ದರೂ ನಿರ್ಜೀವ ವಸ್ತುಗಳೊಂದಿಗೆ ಕೆಲಸ ಮಾಡುವ ಅನುಭವವಾಗುತ್ತದೆ. ಅದ್ಯಾವಾಗ ಮಕ್ಕಳ ಮುಖ ನೋಡುವ ,ಅವರ ಜೊತೆ ಹಾಡುತ್ತಾ ನಲಿಯುತ್ತಾ ಆ ಮುಖದಲ್ಲಿ ಸಂತೋಷ ಕಾಣುವ ದಿನಗಳು ಬರುತ್ತವೋ ಎಂದು ಜಾತಕ ಪಕ್ಷಿಯಂತೆ ಕಾಯುತ್ತಿದ್ದೇವೆ. ಆದಷ್ಟು ಬೇಗನೆ ಭೌತಿಕ ತರಗತಿಗಳು ಪ್ರಾರಂಭವಾಗಿ ಮತ್ತೆ ಶಾಲೆಗಳಿಗೆ ಮರುಜೀವ ಬಂದು ನಲಿಯುವಂತಾಗಲಿ ಎಂಬುದೇ ನನ್ನ ಆಶಯ..


-ಪೂರ್ಣಿಮಾ ಎಂ.ಆರ್.
 ಪ್ರಭಾರ ಮುಖ್ಯ ಶಿಕ್ಷಕಿ
 ಸ.ಹಿ ಪ್ರಾ ಶಾಲೆ ನಾರ್ಣಕಜೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.