ವಿದ್ಯಾರ್ಥಿಗಳಿಲ್ಲದೆ ಬದುಕು ಯಾಂತ್ರಿಕವಾಗಿದೆ

Advt_Headding_Middle

ಮಕ್ಕಳಿವರೇ ನಮ್ಮ ಮೂವತ್ತ ಮೂರು ಕೋಟಿ ಎಂಬ ದ.ರಾ.ಬೇಂದ್ರೆಯವರ ಮಾತು ನನಗಿಲ್ಲಿ ನೆನಪಾಗುತ್ತಿದೆ. ಮನೆಯಲ್ಲಿ ಮಕ್ಕಳಿದ್ದರೆ ಅದರ ಖುಷಿಯೇ ಬೇರೆ ವರ್ಣಿಸಲಾಗದ ಸಂತಸವದು. ಅಂತೆಯೇ ಶಾಲೆ ಕೂಡ ಮಕ್ಕಳಿದ್ದರೆ ಮಾತ್ರ ಅಂದಚಂದ. ವಿದ್ಯಾರ್ಥಿಗಳಿಲ್ಲದೆ ಕಲ್ಪಿಸಲು ಅಸಾಧ್ಯ. ಆದರೆ ಏನಾಗಿದೆ ಇಂದು? ಅದೇ ಕಲ್ಪಿಸಲಾಗದ ಸ್ಥಿತಿಗೆ ಬಂದಿದ್ದೇವೆ ನಾವು.ದೇಶವನ್ನೇ ಆವರಿಸಿದ್ದ ಕೊರೋನಾ ಮಹಾಮಾರಿಯಿಂದ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಳ್ಳುವುದರೊಂದಿಗೆ ಗುರುಶಿಷ್ಯರ ಮುಖಾಮುಖಿ ಸಂವಹನವು ಸ್ಥಗಿತಗೊಂಡಿದೆ. ಶಾಲೆ -ವಿದ್ಯಾರ್ಥಿಗಳು ಎಂದಾಕ್ಷಣ ನನ್ನ ಮನಪಟಲದಲ್ಲಿ ಮೂಡುತ್ತಿದ್ದ ಅಂತಹ ಆ ನನ್ನ ವಿದ್ಯಾರ್ಥಿಗಳ ನಗುವಿಲ್ಲ. ಮುಗ್ಧ ಮಾತುಗಳು ಇಲ್ಲವೇ ಇಲ್ಲ .ಟೀಚರ್… ಟೀಚರ್… ಎನ್ನುವ ಆ ಕೂಗು ಕೇಳದೆ ಅದೆಷ್ಟೋ ದಿನಗಳಾದವು. ಆಟ ಪಾಠಗಳಿಂದ ಪ್ರತಿಭಾ ಕಾರಂಜಿಯಿಂದ ಶಾಲಾ ವಾರ್ಷಿಕೋತ್ಸವ ಇಲ್ಲವೇ ಇಲ್ಲ ಮಕ್ಕಳ ಕಲರವದಿಂದ ಸಂಭ್ರಮಿಸುತ್ತಿದ್ದ ಶಾಲಾ ಆವರಣ ಇಂದು ಮೌನಿಯಾಗಿದೆ. ನನ್ನ ವಿದ್ಯಾರ್ಥಿಗಳ ಆ ಮುಗ್ಧ ಮಾತುಗಳನ್ನು ಕೇಳದೆ ಕುಗ್ಗಿಹೋಗಿರುವೆ. ಅಂದು ಶಾಲೆಯಲ್ಲಿ ಮಕ್ಕಳಿದ್ದಾಗ ನಾನೆಷ್ಟು ಶಾರೀರಿಕವಾಗಿ ಆಂತರಿಕವಾಗಿ ನೆಮ್ಮದಿಯಿಂದಿದ್ದೆ .ಹಸನ್ಮುಖಿ ಆಗಿದ್ದೆ .ಆದರೆ ಇಂದು ವಿದ್ಯಾರ್ಥಿಗಳಿಲ್ಲದೆ ನಾನು ಯಾಂತ್ರಿಕ ಬದುಕಿಗೆ ಒಗ್ಗಿ ಹೋಗಿರುವೆನೊ ಎಂದನಿಸುತ್ತಿದೆ .ಹೌದು ….ಆ ದಿನಗಳ ನನ್ನ ನೆಮ್ಮದಿ ಖುಷಿಗೆ ನನ್ನ ಪ್ರೀತಿಯ ವಿದ್ಯಾರ್ಥಿಗಳೇ ಕಾರಣ ಎಂಬುದು ನನಗೀಗ ತಿಳಿದಿದೆ.

ಪಲ್ಲವಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದರ್ಖಾಸ್ತು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.