ಕಾಣದ ಕೊರೋನಾದಿಂದ ಕಳೆದುಕೊಳ್ಳುವ ಕ್ಷಣಗಳು…

Advt_Headding_Middle

ಶಾಲೆಯೆಂಬ ವೇದಿಕೆಯಲ್ಲಿ ಶಿಕ್ಷಕರು ಸೂತ್ರಧಾರಿಯಾದರೆ ವಿದ್ಯಾರ್ಥಿಗಳು ಪಾತ್ರಧಾರಿಗಳು. ಇವರಿಲ್ಲದೆ ಶಾಲೆಯೆಂಬ ವೇದಿಕೆಯು ಖಾಲಿಖಾಲಿ ಕಾರಣ ಕೊರೋನಾವೆಂಬ ಕಣ್ಣಿಗೆ ಕಾಣದ ಮಾರಿ.
ಖಾಲಿಖಾಲಿಯಾದ ಶಾಲೆಯು ನಿಶಬ್ಧದಿಂದ ಕೂಡಿದ ಬಂಗಲೆಯಂತಾಗಿದೆ. ಮನೆ ಕಳೆಯಿಂದ ಕೂಡಿರಬೇಕಾದರೆ ಆ ಮನೆಯ ಸದಸ್ಯರ ದಿನನಿತ್ಯದ ಚಟುವಟಿಕೆಗಳು ಅಲ್ಲಿ ನಡೆಯಬೇಕು. ಇಲ್ಲದಿದ್ದರೆ ಆ ಮನೆ ಕಳೆಯಿಲ್ಲದೆ ಬಲೆ ತುಂಬಿಕೊಳ್ಳುವಂತೆ ಒಂದು ಶಾಲೆ ಜೀವಂತವಾಗಿರಬೇಕಾದರೆ ಅಲ್ಲಿ ವಿದ್ಯಾರ್ಥಿ-ಶಿಕ್ಷಕರ ಭೌತಿಕ ತರಗತಿ ಚಟುವಟಿಕೆಗಳು ನಡೆಯಬೇಕು.
ಆದರೆ ಪ್ರಸ್ತುತ ಕೊರೋನಾ ಈ ಭೌತಿಕ ತರಗತಿ ಚಟುವಟಿಕೆಗಳಿಗೆ ಅಡ್ಡಿಯನ್ನುಂಟುಮಾಡಿದೆ. ಈ ಪರಿಸ್ಥಿತಿಯಲ್ಲಿ ನಾನೊಬ್ಬ ಶಿಕ್ಷಕಿಯಾಗಿ ವಿದ್ಯಾರ್ಥಿಗಳನ್ನು ಹಲವು ರೀತಿಯಲ್ಲಿ ಮಿಸ್ ಮಾಡಿಕೊಳ್ಳುತ್ತಿರುವುದಂತು ಕಾಣದ ಕೊರೋನಾದಷ್ಟೇ ಸತ್ಯ….
ಆ ಕ್ಷಣಗಳೆಂದರೆ- ವಿದ್ಯಾರ್ಥಿಗಳು ನಮ್ಮನ್ನು ಆಗಾಗ್ಗೆ ಮಿಸ್ ಅಂತ ಕರೆಯುತ್ತಿದ್ದ ಆ ಪ್ರೀತಿಯ ಸ್ವರಗಳು, ಅವರು ತಪ್ಪು ಮಾಡಿದಾಗ ಹೇಳುವ ಸುಳ್ಳು ಕುಂಟುನೆಪಗಳು, ಚಿಕ್ಕಪುಟ್ಟ ವಿಷಯಗಳಿಗೂ ದೂರುದುಮ್ಮಾನಗಳು. ಅವುಗಳನ್ನು ಬಗೆಹರಿಸಿ ಸಲಹೆ ನೀಡಿದಾಗ ಅವರ ಭಾವನೆಯಲ್ಲಾಗುವ ವ್ಯತ್ಯಾಸಗಳು. ಸಹಪಠ್ಯ ಚಟುವಟಿಕೆಗಳಿಗೆ ಅವರನ್ನು ಸಿದ್ಧಪಡಿಸುವಾಗ ನಾವು ಮಾಡುತ್ತಿದ್ದ ಪೂರ್ವ ತಯಾರಿ, ನಮ್ಮ ವೈಯಕ್ತಿಕ ಸಮಸ್ಯೆಗಳಿದ್ದರೂ ವಿದ್ಯಾರ್ಥಿಗಳ ಮುಂದೆ ಅವುಗಳನ್ನೆಲ್ಲಾ ಮರೆತು ಅವರು ಕೇಳುವ ತರ್ಲೆ ಪ್ರಶ್ನೆಗಳಿಗೆ ನಗುಮುಖದಿಂದ ಪ್ರತಿಕ್ರಿಯೆ ಕೊಡುತ್ತಿದ್ದ ಕ್ಷಣ, ಶೈಕ್ಷಣಿಕ ಪ್ರವಾಸ ಹೋದಾಗ ವಿದ್ಯಾರ್ಥಿಗಳ ಜೊತೆ ನಾವು ಸಹ ಮಕ್ಕಳಂತೆ ನಲಿದಾಡಿದ ಕ್ಷಣಗಳು, ಮಿಸ್ ನಮ್ಮ ಜೊತೆ ಬನ್ನಿ ಫೋಟೋ ತೆಗೆಸಿಕೊಳ್ಳಿ ಎಂದು ಕರೆಯುತ್ತಿದ್ದ ಮಕ್ಕಳ ಆ ಪ್ರೀತಿ. ಶಾಲಾ ವಾರ್ಷಿಕೋತ್ಸವಕ್ಕೆ ವಿದ್ಯಾರ್ಥಿಗಳ ಜೊತೆ ನಾವು ಉತ್ಸಾಹದಿಂದ ತಯಾರಿಯಾಗುತ್ತಿದ್ದ ಆ ಕ್ಷಣಗಳೆಲ್ಲಾ ಈಗ ನೆನಪಾಗಿ ಉಳಿದಿದೆ. ಆನ್‌ಲೈನ್ ಶಿಕ್ಷಣ ಖಂಡಿತವಾಗಿಯೂ ಭೌತಿಕ ತರಗತಿಗೆ ಪೂರಕ ಅಲ್ಲವೇ ಅಲ್ಲ ಅನ್ನುವುದಂತೂ ಸಾಬೀತಾಗಿದೆ.
ಹಲವು ವಿದ್ಯಾರ್ಥಿಗಳು ಪ್ರಾರಂಭದಲ್ಲಿ ಕೊರೋನಾವನ್ನು ಪ್ರೀತಿಯಿಂದ ಬರಮಾಡಿಕೊಂಡರೆ, ಇನ್ನು ಥ್ಯಾಂಕ್ಸ್ ಕೊರೋನಾ ಎಂದವರು ಕೆಲವರು. ದಿನಗಳೆದಂತೆ ಭೌತಿಕ ತರಗತಿಗಳ ಪ್ರಾಮುಖ್ಯತೆಯಮ್ಮು ಅರಿವು ಮಾಡಿಕೊಂಡವರು ಎಷ್ಟೋ ವಿದ್ಯಾರ್ಥಿಗಳು.
ಆದಷ್ಟು ಬೇಗ ಶಾಶ್ವತವಾಗಿ ಭೌತಿಕ ತರಗತಿಗಳು ಮೊದಲಿನಂತೆ ನಡೆಯುವಂತಾಗಲಿ. ಈ ಎಲ್ಲಾ ಕಳೆದುಕೊಳ್ಳುವ ಕ್ಷಣಗಳಿಗೆ ಮುಕ್ತಿ ಸಿಗಲಿ. ಕಣ್ಣಿಗೆ ಕಾಣದ ಕೊರೋನಾ ಆದಷ್ಟು ಬೇಗ ಸೂಕ್ಷ್ಮ ದರ್ಶಕದಲ್ಲೂ ಕಾಣದಂತಾಗಲಿ.

-ರಮ್ಯಾ ಅಡ್ಕಾರು
ರೋಟರಿ ಪ್ರೌಢಶಾಲೆ, ಸುಳ್ಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.