ಮಕ್ಕಳ ಕಲರವ

Advt_Headding_Middle


ಜೂನ್ ಬಂತಂದರೆ ಶಾಲೆಯ ಪುನರಾರಂಭ. ಎಲ್ಲಾ ಶಾಲಾ ಮಕ್ಕಳು ತಮ್ಮ ಬೇಸಿಗೆ ರಜೆ ಮುಗಿಸಿ, ಅತೀ ಹುಮ್ಮಸ್ಸಿನಿಂದ ಹೊಸ ಸಮವಸ್ತ್ರ, ಹೊಸ ಬ್ಯಾಗ್, ಹೊಸ ಪೆನ್ಸಿಲ್,ಹೊಸ ಪೆನ್ನು ,ಹೊಸ ಪುಸ್ತಕ ಖರೀದಿಸಿ ಬರುತ್ತಿದ್ದ ಕ್ಷಣ. ಆದ್ರೆ ಕಳೆದ ವರ್ಷದಿಂದ ಕರೋನಾ ಎಂಬ ಮಾಹಾಮಾರಿಯಿಂದ ನಮ್ಮ ಮುದ್ದು ಮಕ್ಕಳ ಖುಷಿ ಸ್ತಬ್ಧವಾಗಿದೆ. ಜೂನ್ ೫ ರಂದು ಪರಿಸರ ದಿನಾಚರಣೆಯಿಂದ ಶುರುವಾಗಿ ವಿಧ್ಯಾರ್ಥಿ ನಾಯಕನ ಚುನಾವಣೆ,ಪ್ರತಿಜ್ಞಾವಿಧಿ ಕಾರ್ಯಕ್ರಮ, ಹತ್ತು ಹಲವಾರು ಧಾರ್ಮಿಕ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ. ಡಿಸಂಬರ್ ಬಂತಂದರೆ ಶಾಲಾವಾರ್ಷಿಕೋತ್ಸವ ಸಂಭ್ರಮ ಎಲ್ಲೆಡೆ, ಹತ್ತು ಹಲವಾರು ಸ್ಫರ್ಧೆಗಳು, ಪ್ರಶಸ್ತಿ ಫಲಕಗಳ ಪ್ರಧಾನ. ಒಟ್ಟಾರೆ ಶಾಲೆಗಳಲ್ಲಿ ಹಬ್ಬದ ಸಂಭ್ರಮ.. ಆದ್ರೆ ಕಳೆದ ವರ್ಷದಿಂದ ಇವಲ್ಲೆವೋ ಮಾಯ.
ಮೊನ್ನೆ ನನ್ನ ಮಗ ಈ ಕರೋನಾದಿಂದ ನನಗೆ ಈ ವರ್ಷ ಆಲ್ರೌಂಡರ,ಎಷ್ಟೊಂದು ಪ್ರಶಸ್ತಿ ಫಲಕಗಳು ಸಿಗಲಿಲ್ಲ ಎಂದು ಬೇಜಾರು ಮಾಡಿಕೊಂಡು ಕರೋನವನ್ನು ಶಪಿಸಿದ.
ಇನ್ನೊಂದೆಡೆ ನಮ್ಮೆಲ್ಲ ಶಿಕ್ಷಕ ಬಂಧುಗಳು online ನಲ್ಲಿ ಪಾಠಮಾಡುವ ತರಭೇತಿ ಪಡೆಯದೆ ಹೋದರು ಕೂಡ ಛಲ ಬಿಡದೆ ದಿನಕ್ಕೊಂದು ಹೊಸ ಅಪ್ ಡೌನ್ಲೋಡ್ ಮಾಡಿ ಸೃಜನಾತ್ಮಕ ವಾಗಿ ಪಾಠ ಮಾಡುತ್ತಿದ್ದಾರೆ.
ಶಿಕ್ಷಕರು, ಮಕ್ಕಳು, ಪೋಷಕರು offline ನಿಂದ online ಗೆ switch ಆಗಿದ್ದೇವೆ.ಈಗ online ನಲ್ಲಿಯೇ ಪಾಠ, ಡ್ಯಾನ್ಸ್, ಮ್ಯೂಸಿಕ್ ಯೋಗ, ಕರಾಟೆ, ಯಕ್ಷಗಾನ ಮತ್ತು ರಂಗ ತರಬೇತಿ. ಹೀಗೆ ಎಲ್ಲಾ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೊ ಕೊಡ ಎಲ್ಲೋ ಒಂದೆಡೆ ಮಾನಸಿಕವಾಗಿ ಶಿಕ್ಷಕರು ಮಕ್ಕಳು ಮುಖಾಮುಖಿಯಾಗಿ ಮಾತನಾಡುವ, ನಗು, ಸಂತೋಷ ಮಿಸ್ ಹಾಗಿದೆ ಅಲ್ಲವೇ.
ಆದೊಷ್ಟು ಬೇಗ ಈ ಕರೋನ ಎಂಬ ಮಾಹಾಮಾರಿ ಮಾಯವಾಗಿ ನಮ್ಮೆಲ್ಲ ಶ್ಯಕ್ಷಣಿಕ ಚಟುವಟಿಕೆಗಳು ಶುರುವಾಗಲಿ. ನಮ್ಮ ಮುದ್ದಾದ ಮಕ್ಕಳ ಮುದ್ದಾದ ನಗು ಮಾತು ಕೇಳುವ ತವಕ ನನ್ನಲ್ಲಿ.
ಗೀತಾಂಜಲಿ ಟಿ.ಜಿ
ಶಿಕ್ಷಕಿ
ಅಂಜಲಿ ಟ್ಯುಟೋರಿಯಲ್
ಸುಳ್ಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.