Breaking News

ಮತ್ತೆ ಗುಬ್ಬಿ ಗೂಡಲ್ಲಿ ಮಕ್ಕಳ ಕಲರವದ ಪ್ರಪಂಚ ಸೃಷ್ಟಿಯಾಗಲಿ

Advt_Headding_Middle

ದಿನಬೆಳಗಾದರೆ ಸಾವಿರಾರು ಸ್ವರಗಳ ಸಮ್ಮಿಲನ ಧ್ವನಿ ಕೇಳುವ ಜ್ಞಾನ ದೇಗುಲ ಇಂದು ಮೌನಕ್ಕೆ ಶರಣಾಗಿದೆ. ಸಂತಸದಿ ಹಾರಾಡುತ್ತಿದ್ದ ಚಿಟ್ಟೆಗಳ ಹೂಬನ ವಿಂದು ಬಣ ಗುಟ್ಟುತ್ತಿದೆ. ಹೌದು ನಿತ್ಯ ಚಿಣ್ಣರನಗು ಮುಖವಿಲ್ಲ, ಮುಗ್ಧ ಮನಸ್ಸುಗಳಿಲ್ಲ, ಮುದ್ದು ಮಾತಿನ ಮಂತ್ರಘೋಷ ವಿಲ್ಲದೆ ಏಕಾಂಗಿಯಾಗಿ ಬಿಟ್ಟಿದೆ ಶಾಲೆ ಮತ್ತು ಶಿಕ್ಷಕರಾದ ನಾವುಗಳು. ಜ್ಞಾನದ ಬಟ್ಟಲಲ್ಲಿ ವಿದ್ಯೆಯ ಕಣಗಳನ್ನು ಸವಿಯುತ್ತಿದ್ದ ಮರಿ ಹಕ್ಕಿಗಳಿಗೆ ಉ ಣ್ಣ ಬೇಕೆಂಬ ಹಂಬಲವಿದ್ದರೂ , ಕೋರೋನಾ ಎಂಬ ದೈತ್ಯ ಹಕ್ಕಿ ತಮ್ಮನ್ನು ಕುಟುಕ ಬಹುದು ಎಂದು ಹೆದರಿ ಕಂಗಾಲಾಗಿದೆ ಮರಿಹಕ್ಕಿಗಳು. ಮನೆಯೆಂಬ ರಕ್ಷಣೆಯ ಹೊದಿಕೆ ಯೊಳಗಡೆ ಮುಗ್ಧ ಮನಸುಗಳು ಬಂಧಿಯಾಗಿವೆ. ಇನ್ನೊಂದೆಡೆ ಶಾಲೆ ಮತ್ತು ಶಿಕ್ಷಕರಾದ ನಾವುಗಳು ಮಕ್ಕಳ ಬರುವಿಕೆಗಾಗಿ ಕಾಯುತ್ತಿದ್ದೇವೆ. ಅದೆಷ್ಟೋ ವರ್ಷಗಳಿಂದ ರಜಾ ದಿನಗಳಲ್ಲಿ ಮಾತ್ರ ಮೌನಿಯಾಗಿದ್ದ ಶಾಲೆ ಮಾತೆ ಮರೆತಂತಿದೆ. ಹಬ್ಬದ ವಾತಾವರಣದಲ್ಲಿ ಸಂಭ್ರಮಿಸುತ್ತಿದ್ದ ಶಾಲೆಯಲ್ಲಿ ಇಂದು ನಿತ್ಯ ಪ್ರಾರ್ಥನೆ ಇಲ್ಲ. ಘಂಟೆಗಳ ನಾದ ವಿಲ್ಲ, ಆಟಪಾಠಗಳ ಸಕಲ ಸೇವೆ ಇಲ್ಲ. ನೆಮ್ಮದಿಯ ನೆಲೆಯಾಗಿ ಬದುಕಿಗೆ ಆಸರೆಯಾಗಿ, ನಾಳೆಗಳ ಸಂತಸಕ್ಕೆ ನಾಂದಿಯಾಗಿ, ಕೊಡುವ ಕೈ ಬರಿದಾಗಿ, ಬೇಸರವಾಗಿ, ಸೋತು ಬಂಧಿಯಾಗಿ, ಕುಳಿತಿರುವುದೇ ನೋ ಎಂಬಂತಿದೆ. ಮಕ್ಕಳ ಮಕ್ಕಳ ನಡುವೆ ಅಂತರ ಏರ್ಪಟ್ಟು ಭಯದ ಗೂಡಲ್ಲಿದೆ ಶಾಲೆ. ಜಾತಿಮತದ ತಾರತಮ್ಯವಿಲ್ಲದೇ, ಮೇಲುಕೀಳೆಂಬ ಅಂತರವಿರದೇ, ಸಮವಸ್ತ್ರದಲ್ಲಿ ಸಮಾನರಾಗಿ, ಸಹಬಾಳ್ವೆಯಿಂದ ಕಳೆಯುತ್ತಿದ್ದ, ಪಾವನ ಸ್ಥಳವೆಂದು ಮಕ್ಕಳಿಲ್ಲದೆ ಅನಾಥವಾಗಿದೆ. ಜಗದ ಎಲ್ಲವುಗಳನ್ನು ಒಂದೇ ಅಂಗೈಯಲ್ಲಿ ರಿಸಿ ನಗು, ಅಳು, ಹರಟೆ, ಮನೆ, ಮನದ ವಿಚಾರ, ವಿಸ್ಮಯ, ಅನುಭವಗಳಿಗೆ ಕಿವಿ ಯಾಗಿದ್ದ ಜ್ಞಾನದ ಕೋಣೆಗೆ ಬೀಗಜಡಿಯಲಾಗಿದೆ. ಶಾಲೆಯ ಕಂಗಳು ಮಕ್ಕಳ ಬರುವಿಕೆಗಾಗಿ ಕಾಯುತ್ತಿದೆ. ಕಿವಿಗಳು ಮಕ್ಕಳ ಧ್ವನಿಗಾಗಿ ಹಾತೊರೆಯುತ್ತಿದೆ. ಮತ್ತೆ ವಿದ್ಯಾಲಯಗಳು ಚಿಣ್ಣರ ನವಿಲ ನರ್ತನದಲ್ಲಿ ಮೈ ಮರೆಯಲಿ. ಮುಗ್ಧ ಮರಿಹಕ್ಕಿ ಗಳಿಗೆ ಭಯ ಹುಟ್ಟಿಸಿದ ಕೊರೋನಾ ಎಂಬ ದೈತ್ಯ ಹಕ್ಕಿಯ ಧಮ ನಕ್ಕೆ ಬೇಟೆಗಾರನೊಬ್ಬ ಆದಷ್ಟು ಬೇಗಬರಲಿ….. ಮತ್ತೆ ಗುಬ್ಬಿ ಗೂಡಲ್ಲಿ ಮಕ್ಕಳ ಕಲರವದ ಪ್ರಪಂಚ ಸೃಷ್ಟಿಯಾಗಲಿ.

ಸೆಮೀಮಾ ಡಿ.ಎಚ್.
ಗೌರವ ಶಿಕ್ಷಕಿ, ಸ.ಹಿ.ಪ್ರಾ.ಶಾಲೆ ದರ್ಖಾಸ್ತು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.