Breaking News

ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಆನ್ ಲೈನ್ ಲ್ಲಿ ರಾಜ್ಯಮಟ್ಟದ ಬಹುಭಾಷಾ ಕವಿಗೋಷ್ಠಿ ಮತ್ತು ಸಂಗೀತ ಸ್ಪರ್ಧೆ

Advt_Headding_Middle

 

ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ 50ನೇ ವಿಶೇಷ ಕಾರ್ಯಕ್ರಮವಾಗಿ ಆನ್ ಲೈನ್ ಬಹುಭಾಷಾ ಕವಿಗೋಷ್ಠಿ ಮತ್ತು ಸಂಗೀತ ಸ್ಪರ್ಧೆಯು ಇತ್ತೀಚಿಗೆ ಆನ್ ಲೈನ್ ಲ್ಲಿ ನಡೆಯಿತು .
ಆರಂಭದಲ್ಲಿ ಪ್ರಾರ್ಥನೆ ಗೀತೆಯನ್ನು ಕವಯಿತ್ರಿ ಪ್ರಮೀಳಾ ರಾಜ್ ಐವರ್ನಾಡು ಹಾಡಿದರು .ಸ್ವಾಗತ ಭಾಷಣವನ್ನು ಶಶಿಕಲಾ ಭಾಸ್ಕರ್ ದೈಲಾ ಬಾಕ್ರಬೈಲ್ ರವರು ಮಾಡಿದರು . ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಎಚ್ ಭೀಮರಾವ್ ವಾಷ್ಠರ್ ರವರು ಪ್ರಾಸ್ತಾವಿಕ ಭಾಷಣ ಮಾಡಿ ಕಾರ್ಯಕ್ರಮಗಳ ಉದ್ದೇಶ ತಿಳಿಸಿದರು.  ದಿ| ಮಹಾಂತಪ್ಪ ಮೇಟಿ ಗೌಡ ಅಮರಾವತಿ ರವರ ಸ್ಮರಣಾರ್ಥ ನಡೆದ ಈ ಕವಿಗೋಷ್ಠಿ ಉದ್ಘಾಟನೆಯನ್ನು ಖ್ಯಾತ ಹಿರಿಯ ಸಾಹಿತಿ ಶ್ರೀ ಹರಿ ನರಸಿಂಹ ಉಪಾಧ್ಯಾಯ ಬೆಂಗಳೂರು ಇವರು ನೆರವೇರಿಸಿದರು. 

ಕವಿಗೋಷ್ಠಿ ಅಧ್ಯಕ್ಷತೆಯನ್ನು ಖ್ಯಾತ ಕವಿಗಳಾದ ಶ್ರೀ ಬಲ್ಲೇನಹಳ್ಳಿ ಮಂಜುನಾಥ್ ರವರು ವಹಿಸಿ ಅಧ್ಯಕ್ಷೀಯ ಭಾಷಣ ಮಾಡಿದರು .  ಹಾ ಮ ಸತೀಶ್ ಬೆಂಗಳೂರು ರವರು ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ 32 ಜನ ಕವಿಗಳು ಬಹುಭಾಷಾ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು. 9 ಭಾಷೆಯ ಕವನಗಳನ್ನು ಕವಿಗಳು ವಾಚಿಸಿದರು. ಶಂಕರ್ ಕುಲಾಲ್ ಪರ್ಕಳ , ಅಪ್ಪಯ್ಯ ಬೆಂಗಳೂರು , ಜ್ಯೋತಿಭಾ ಹುಬ್ಬಳ್ಳಿ , ನಿಗೂಢ ಹುಬ್ಬಳ್ಳಿ , ವಿಜಯ್ ಕುಮಾರ್ ಕಾಣಿಚಾರ್ ಸುಳ್ಯ ಇನ್ನಿತರರು ಸಹಕರಿಸಿದರು . ಮಂಜುನಾಥ್ ನಾಯಕ್ (ರತ್ನತನಯ)ರವರು ಧನ್ಯವಾದ ಸಲ್ಲಿಸಿದರು. ಭಾಗವಹಿಸಿದ ಎಲ್ಲಾ ಕವಿಗಳಿಗೂ ಈ ಸರ್ಟಿಫಿಕೇಟ್ ನೀಡಲಾಯಿತು.

ಸಂಗೀತ ಸ್ಪರ್ಧೆ ಕಾರ್ಯಕ್ರಮ
ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ವತಿಯಿಂದ ರಾಜ್ಯಮಟ್ಟದ ಆನ್ ಲೈನ್ ಸಂಗೀತ ಸ್ಪರ್ಧೆ ಆಯೋಜಿಸಲಾಗಿತ್ತು. ಮಡಿಕೇರಿಯ ಖ್ಯಾತ ಸಂಗೀತಗಾರರೊಬ್ಬರನ್ನು ನಿರ್ಣಾಯಕರಾಗಿ ಸಹಕರಿಸಿದರು. ಪ್ರೀತಿ ಪ್ರೇಮ ಗಾನ ಸಂಗೀತ ಸ್ಪರ್ಧೆಯ ಶ್ರೇಷ್ಠ ಗಾಯಕರಾಗಿ ಅಕ್ಷಯ್ ಕುಮಾರ್ ಪೆರ್ಲ ಆಯ್ಕೆ ಆದರು. ಅತ್ಯುತ್ತಮ ಗಾಯಕರಾಗಿ ದೇವದಾಸ್ ಪೊನ್ವಲ್ಲಿ ಗುತ್ತಿಗಾರು , ಅವನಿ ಎಮ್ ಎಸ್ ಸುಳ್ಯ , ಶಿವು ಮೈಸೂರು , ಪ್ರಸಾದ್ ಆಚಾರ್ , ಧನುಜಾ ಕರ್ಕೇರ , ಪ್ರಕಾಶ್ ಪಾವಂಜೆ , ಗಣೇಶ್ ಆಚಾರ್ಯ ನೆಲ್ಯಾಡಿ , ಮೋಹಿನಿ ಉಡುಪಿ , ರಮೇಶ್ ಬಿ ಮೈಸೂರು , ಎಚ್ .ನಾಗೇಶ್ ವಾಷ್ಠರ್ ಬ್ರಹ್ಮಾವರ ಆಯ್ಕೆ ಆದರು. ಪ್ರಥಮ ಬಹುಮಾನಿತರಾಗಿ ಸುರೇಶ್ ನಿಟ್ಟೆ , ಸ್ವಾತಿ , ಶೀಲಾ ಪಡೀಲ್ , ಹಾ ಮ ಸತೀಶ್ , ರಾಧಾ ಉಪ್ಪಳ , ಸದಾನಂದ್ ನೆಲ್ಲಿಯಡ್ಕ , ವಸಂತಿ ಕಡಂಬಳ , ರವಿಕುಮಾರ್ ಉಡುಪಿ , ರೂಪಾ ಆಚಾರ್ಯ , ಮಹೇಶ್ ಪೈ ಸುಳ್ಯ , ಸಂದೇಶ್ ಆಚಾರ್ಯ ಮತ್ತು ಅಶ್ವಿಜ್ ಅತ್ರೇಯ ಜಿ ಆರ್ ಸುಳ್ಯ ಆಯ್ಕೆ ಆದರು. ದ್ವಿತೀಯ ಬಹುಮಾನಿತರಾಗಿ ಪೆರುಮಾಳ್ ಐವರ್ನಾಡು , ಶಿಲ್ಪಾ ಆಚಾರ್ಯ , ಕೃಷ್ಣವೇಣಿ ಐವರ್ನಾಡು , ಅನನ್ಯ ಎನ್ ಉಡುಪ , ಸುಭಾಷಿಣಿ ಚಂದ್ರ ಆಯ್ಕೆ ಆದರು. ಜುಲೈ ತಿಂಗಳಲ್ಲಿ ನಡೆಯುವ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಗುವದು. ಕಾರ್ಯಕ್ರಮ ಸಂಯೋಜಕ ಮತ್ತು ಅಡ್ಮಿನ್ ಆದ ಎಚ್. ಭೀಮರಾವ್ ವಾಷ್ಠರ್ ರವರು  ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.