ಇಲ್ಲದ ಕಲರವ ನಿಲ್ಲದ ತಳಮಳ

Advt_Headding_Middle

 


ವಿಶ್ವಯುದ್ಧವೊಂದು ಉಂಟು ಮಾಡಲಾಗದ ಘನಘೋರ ಪರಿಣಾಮವನ್ನಿಂದು ಕೊರೋನ ಮಾಡಿದೆಯೆಂದರೆ ಅತಿಶಯೋಕ್ತಿಯಾಗಲಾರದು. ಗಡಿಪ್ರದೇಶ, targeted areaಗಳನ್ನು ಹೊರತುಪಡಿಸಿದರೆ ಯುದ್ಧ ಕಾರ್ಮೋಡವೊಂದರ ನಡುವೆಯೂ ಮಾನವ ಮುಕ್ತವಾಗಿ ತಿರುಗಾಡಬಲ್ಲ, ಇತರರೊಂದಿಗೆ ಬೆರೆಯಬಲ್ಲ, ಸಂಭ್ರಮಿಸಬಲ್ಲ ಆದರೆ ಕೋವಿಡ್ ನೀಡಿದ ಆಘಾತವಿಂದು ಮಾನವ ಜನಾಂಗದ ಧೈರ್ಯಗುಂದಿಸಿದೆ. ವಿಶ್ವದ ದೊಡ್ಡಣ್ಣಂದಿರೇ ಕೆಂಗೆಟ್ಟು ಕುಳಿತಿರುವಾಗ ಇನ್ನುಳಿದವರ ಗತಿಯೇನು?
ನಮ್ಮ ದೇವಮಂದಿರಗಳಲ್ಲಿನ ದೇವರೂ…… ಯಾವ ಸ್ಥಿತಿಯಲ್ಲಿದ್ದಾನೋ, ಅವನೇ ಬಲ್ಲ. ಶಿಕ್ಷಣ ದೇಗುಲಗಳೂ ಮುಚ್ಚಿವೆ. ಮುಖಾಮುಖಿ ಶಿಕ್ಷಣವೂ ನೆಲಕಚ್ಚಿದೆ. ನಮ್ಮ ನಿತ್ಯ(ವೃತ್ತಿ)ಕರ್ಮಗಳ ‘ಶೈಕ್ಷಣಿಕ ಯಜ್ಞಕುಂಡ’ಗಳೂ ತಣ್ಣಗಾಗಿವೆ. ವಿದ್ಯಾರ್ಥಿದೇವರುಗಳಿಗೆ ನಾವು (ಶಿಕ್ಷಕರು) ಅರ್ಪಿಸಬೇಕಾದ ಜ್ಞಾನದ ಹವಿಸ್ಸನ್ನು ನೇರ ರೀತಿಯಲ್ಲಿ ಅರ್ಪಣೆ ಮಾಡಲಾಗುತ್ತಿಲ್ಲ. ಈಗ ವರ್ಚುವಲ್ ಆಗಿ ಆನ್ಲೈನ್ನಲ್ಲಿ ಸಮರ್ಪಿಸಬೇಕಾದ ಅನಿವಾರ್ಯತೆ ನಮ್ಮದಾಗಿದೆ. ಕೊಳವೆಯಲ್ಲಿ ಕೊಡುವ ದ್ರವ ಆಹಾರದಂತೆ ಆನ್ಲೈನ್ ಪಾಠಗಳು ಶೈಕ್ಷಣಿಕ ಚೇತರಿಕೆಗೆ ಪೂರಕವಾಗಬಲ್ಲದೇ ಹೊರತು ಪರ್ಯಾಯವಾಗಲಾರದು. ಆನ್ಲೈನ್ ಶಿಕ್ಷಣದಲ್ಲಿ ಬಳಕೆಯಾಗುತ್ತಿರುವ ನಿತ್ಯ- ನವೀನ ಗ್ಯಾಜೆಟ್’ಗಳ ಬಳಕೆಯಿಂದ ಸಿಗುವ ಲಾಭಕ್ಕಿಂತಲೂ ಆ ಮುಗ್ಧ ಮತ್ತು ಅಪಕ್ವ ಮನಸ್ಸುಗಳ ಮೇಲಾಗುವ ದುಷ್ಪರಿಣಾಮಗಳು ನಮ್ಮೆದುರಿಗಿವೆ.

ಆದರೆ, ಮನಸ್ಸಿದ್ದಲ್ಲಿ ಮಾರ್ಗವಿದೆಯೆಂಬಂತೆ ಶಿಕ್ಷಕ- ಪೋಷಕ- ಶಾಲಾಭಿವೃದ್ಧಿ ಸಮಿತಿ- ಸಾರ್ವಜನಿಕ ಸಂಸ್ಥೆಗಳ ಸಹಕಾರದೊಂದಿಗೆ ಕೋವಿಡ್ ಮುಂಜಾಗ್ರತಾ ಕ್ರಮಗಳೊಂದಿಗೆ ಈ ಹಿಂದಿನಂತೆ ನೇರ ಸಂವಹನ ಅಸಾಧ್ಯವೇನಲ್ಲ.
ಈ ಎಲ್ಲಾ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಲ್ಪಟ್ಟು ಶಾಲಾರಂಭಗೊಳ್ಳುವ ತನಕ, ವಿದ್ಯಾರ್ಥಿ- ಶಿಕ್ಷಕರ ನಡುವೆ ಮಾತ್ರ.. ನಾನೊಂದು ತೀರ ನೀನೊಂದು ತೀರ. ಮನಸು ಹೃದಯ ಭಾರಾತಿಭಾರ.
ಹಾಗೇನೇ ಏಕ್ ಬಾತ್ “ಮೇರೇ ಖಾನೇ ಕೆ ದಾನೆ ದಾನೇ ಪೆ ಲಿಖಾ ಹೆ ತೇರಾ ನಾಮ್ ಓಂ ಪ್ರಿಯ ಛಾತ್ರ್” ( ನನ್ನ ಊಟದ ಪ್ರತಿ ಅಗುಳು ಅಗುಳಿನಲ್ಲೂ ನಿನ್ನದೇ ಹೆಸರಿದೆ, ಪ್ರೀತಿಯ ವಿದ್ಯಾರ್ಥಿಯೇ). ಇನ್ನೆಷ್ಟು ದಿನ ಸಹಿಸಬೇಕಿದೆ ಈ ಹಂಗಿನರಮನೆಯ ಚಿತ್ರಹಿಂಸೆ? ನಿನ್ನ ಬರುವಿಕೆಗಾಗಿ ದಾರಿನೋಡುತ್ತಾ ಕಾದು ಕುಳಿತಿದೆ ಶಿಕ್ಷಕ ಸಮೂಹ ಚಾತಕ ಪಕ್ಷಿಯಂತೆ…

ಸುಬ್ರಹ್ಮಣ್ಯ ಅತ್ಯಾಡಿ
ಮುಖ್ಯ ಗುರುಗಳು
ಸರಕಾರಿ ಪ್ರೌಢಶಾಲೆ ದುಗ್ಗಲಡ್ಕ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.