Breaking News

ಅರಂತೋಡು-ತೊಡಿಕಾನ ಪ್ರಾ.ಕೃ.ಪ.ಸ.ಸಂಘಕ್ಕೆ ಭಾಜಪಾ ಶಾಸಕಾಂಗ ಪಕ್ಷದ ಕಾರ್ಯಾಲಯ ಕಾರ್ಯದರ್ಶಿ ಸಿ.ಟಿ.ಸುರೇಶ್ ಕುಮಾರ್ ಭೇಟಿ

Advt_Headding_Middle

 

ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಭಾಜಪಾ ಶಾಸಕಾಂಗ ಪಕ್ಷದ ಕಾರ್ಯಾಲಯ ಕಾರ್ಯದರ್ಶಿಗಳಾದ ಸಿ.ಟಿ.ಸುರೇಶ್ ಕುಮಾರ್‌ರವರು ಇಂದು ಭೇಟಿ ನೀಡಿದರು. ಸಂಘದ ಪರವಾಗಿ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆಯವರು ಸ್ವಾಗತಿಸಿದರು. ಸಮೃದ್ಧಿ ಮಾರ್ಟ್ಗೆ ಭೇಟಿ ನೀಡಿದ ಸಿ.ಟಿ.ಸುರೇಶ್ ಕುಮಾರ್‌ರವರು ವ್ಯವಹಾರದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಬಳಿಕ ಸಂಘದ ಆಡಳಿತಮಂಡಳಿ ಸಭಾಭವನದಲ್ಲಿ ಸಭಾ ಕಾರ್ಯಕ್ರಮ ನಡೆಸಲಾಯಿತು. ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆಯವರು ಸಿ.ಟಿ. ಸುರೇಶ್ ಕುಮಾರ್‌ರವರ ಮತ್ತು ಸಂಘದ ಒಡನಾಟದ ಕುರಿತು ತಿಳಿಸಿದರು. ಬಳಿಕ ಸಿ.ಟಿ. ಸುರೇಶ್ ಕುಮಾರ್‌ರವರನ್ನು ಸಂಘದ ಪರವಾಗಿ ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಸಿ.ಟಿ.ಸುರೇಶ್ ಕುಮಾರ್‌ರವರು ಸಂಘದ ಸಾಧನೆಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಾಲಮನ್ನ-2018ರ ಯೋಜನೆಯಡಿಯಲ್ಲಿ ಸಾಲಮನ್ನ ಮೊಬಲಗು ಬಿಡುಗಡೆಗೆ ಬಾಕಿಯಿರುವ ಫಲಾನುಭವಿಗಳಿಗೆ ಮೊಬಲಗನ್ನು ಬಿಡುಗಡೆಗೊಳಿಸಲು, ಬೆಳೆಸಾಲ ಮತ್ತು ಕೃಷಿ ಅಭಿವೃದ್ಧಿ ಸಾಲಗಳ ಯೋಜನೆಯಲ್ಲಿ ವಿಧಿಸಿರುವ ಷರತ್ತುಗಳನ್ನು ಸಡಿಲಿಸುವರೇ ಮತ್ತು ಸಂಘದ ರೈತಭವನದ ಆಧುನೀಕರಣಕ್ಕಾಗಿ ಸರಕಾರದಿಂದ ಸಹಾಯಧನಕ್ಕಾಗಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ದಯಾನಂದ ಕುರುಂಜಿ, ನಿರ್ದೇಶಕರಾದ ಚಂದ್ರಶೇಖರ ಚೋಡಿಪಣೆ, ಕುಸುಮಾಧರ ಅಡ್ಕಬಳೆ, ಸಂತೋಷ್ ಚಿಟ್ಟನ್ನೂರು, ನಿಧೀಶ್ ಅರಂತೋಡು, ಚಿತ್ರಾ ಶಶಿಧರ ದೇರಾಜೆ, ಸೋಮಯ್ಯ, ಅರಂತೋಡು ಗ್ರಾಮ ಪಂಚಾಯತ್ ಸದಸ್ಯರಾದ ಕೇಶವ ಅಡ್ತಲೆ, ಪುಷ್ಪಾಧರ ಕೊಡೆಂಕೇರಿ, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪ್ರದೀಪ್ ಕುಮಾರ್ ಹಾಗು ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.