Breaking News

ಕುಕ್ಕೆ ಕ್ಷೇತ್ರದಿಂದ ಸುಳ್ಯ ಆಸ್ಪತ್ರೆಗೆ ನಾಲ್ಕು ಡಯಾಲಿಸಿಸ್ ಮೆಷಿನ್ ಅಳವಡಿಕೆ : ಲೋಕಾರ್ಪಣೆ

Advt_Headding_Middle

 

 

 

ಗ್ರಾಮೀಣ ಭಾಗದ ಆಸ್ಪತ್ರೆಯಲ್ಲಿ ಜಿಲ್ಲಾಸ್ಪತ್ರೆ ಸಮಾನವಾದ ವ್ಯವಸ್ಥೆ : ಸಚಿವ ಅಂಗಾರ


ಸುಳ್ಯದ ತಾಲೂಕು ಆಸ್ಪತ್ರೆಗೆ ಕುಕ್ಕೆ ಕ್ಷೇತ್ರದಿಂದ ನಾಲ್ಕು ಹೊಸ ಡಯಾಲಿಸಿಸ್ ಮೆಷಿನ್ ಕೊಡುಗೆಯಾಗಿ ನೀಡಿದ್ದು ಇಂದು ಅದರ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಸಚಿವ ಎಸ್.ಅಂಗಾರ ಡಯಾಲಿಸಿಸ್ ಮೆಷನ್ ನ್ನು ಉದ್ಘಾಟಿಸಿದರು. ಬಳಿಕ ಡಯಾಲಿಸಿಸ್ ಸೆಂಟರ್ ನಲ್ಲಿದ್ದ ರೋಗಿಗಳಿಗೆ ಸಚಿವರು ಹಣ್ಣು ವಿತರಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, “ಕೋವಿಡ್ ನ ಇಂದಿನ ಸವಾಲಿನ ದಿನದಲ್ಲಿ ಶಕ್ತಿ ಮೀರಿ ಉತ್ತಮ ರೀತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸರಕಾರದ ಅನುದಾನ ಸಿಗದಂತ ಸಂದರ್ಭದಲ್ಲಿ ಆಸ್ಪತ್ರೆಯ ಅವಶ್ಯಕತೆ ಯನ್ನು ಸ್ಪಂದಿಸಬೇಕಾಗಿದೆ. ಇಲ್ಲಿ ಅಗತ್ಯತೆಯನ್ನು ಕಂಡು ನಾವು ಮುಜರಾಯಿ ಸಚಿವರ ಜತೆ ಮಾತನಾಡಿ ಕುಕ್ಕೆ ಕ್ಷೇತ್ರದಿಂದ ನಾಲ್ಕು ಡಯಾಲಿಸಿಸ್ ಮೆಷಿನ್ ಬಂದಿದೆ ಎಂದರು.
ಅಕ್ಷಿಜನ್ ನ ಬಗ್ಗೆ ಬಾರೀ ಅಪಪ್ರಚಾರ ನಡೆಯಿತು.‌ ಅಪಪ್ರಚಾರ ಮಾಡುವವರಿಗೆ ಆ ಬಗ್ಗೆ ವಿವರವೇ ಗೊತ್ತಿಲ್ಲ. ರಾಜ್ಯದಲ್ಲಿ ಆಕ್ಷಿಜನ್ ವ್ಯವಸ್ಥೆ ಸಮಪರ್ಕವಾಗಿದೆ. ಸುಳ್ಯ ತಾಲೂಕಿನ ಆಸ್ಪತ್ರೆಯಲ್ಲಿಯೂ ಆಕ್ಷಿಜನ್ ಪ್ಲ್ಯಾಂಟ್ ಮಾಡಲಾಗುವುದು. ಈಗ ಗ್ರಾಮೀಣ ಭಾಗದ ಆಸ್ಪತ್ರೆಗಳಲ್ಲಿ ಜಿಲ್ಲಾ ಮಟ್ಟದ ಆಸ್ಪತ್ರೆಯಲ್ಲಿ ಸಿಗುವ ಉತ್ತಮ ರೀತಿಯ ಚಿಕಿತ್ಸೆಗಳು ದೊರೆಯುತ್ತದೆ. ಆ ನಿಟ್ಟಿನಲ್ಲಿ ಸರಕಾರವೂ ಕ್ರಮ ಕೈಗೊಂಡಿದೆ . ಜತೆಗೆ ಈಗ ಕೊರತೆ ಇರುವ ಆರೋಗ್ಯ ಕಾರ್ಯಕರ್ತೆಯರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಹೇಳಿದರು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ ಮಾತನಾಡಿ, ರೋಗಿಗಳ ಅನುಕೂಲಕ್ಕೆ ಶಾಸಕರ ಶಿಫಾರಸಿನ ಮೇರೆಗೆ ನಾಲ್ಕು ಡಯಾಲಿಸಿಸ್ ಮೆಷಿನ್ ನೀಡಲಾಗಿದೆ. ಉತ್ತಮ ರೀತಿಯಲ್ಲಿ ಇದರ ಬಳಕೆ ಆಗಲಿ. ಅಲ್ಲದೆ ಕೋವಿಡ್ 19 ರ ಈ ಸಂದರ್ಭದಲ್ಲಿ 5 ಅಂಬ್ಯುಲೆನ್ಸ್ ನ್ನು ಕೊಡುಗೆಯಾಗಿ ನೀಡಲಾಗಿದೆ ಎಂದು ಹೇಳಿದರು

ವೇದಿಕೆಯಲ್ಲಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ನ.ಪಂ. ಸದಸ್ಯೆ ಕಿಶೋರಿ ಶೇಟ್, ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ಉಪಸ್ಥಿತರಿದ್ದರು.

ಜಿ.ಪಂ. ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ತಾ.ಪಂ. ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ತಾ.ಪಂ. ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಮೊದಲಾದವರಿದ್ದರು.

ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಕರುಣಾಕರ ಸ್ವಾಗತಿಸಿದರು. ಆರೋಗ್ಯ ಮಿತ್ರ ಮುರಳಿ ‌ಚೊಕ್ಕಾಡಿ ಕಾರ್ಯಕ್ರಮ ನಿರೂಪಿಸಿದರು.

ರಕ್ತ ಹಾಗೂ ದೇಹವನ್ನು ಪರೀಕೆಗೊಳಪಡಿಸುವ ಅಟೋಮೆಟಿಕ್ ಬಯೋ ಕೆಮೆಸ್ಟ್ರಿ ಅನಲೈಸರ್ ಮತ್ತು ಸೆಲ್ಫ್ ಕೌಂಟಿಂಗ್ ಮೆಷಿನ್ ಕೂಡಾ ಉದ್ಘಾಟಿಸಲಾಯಿತು.

 

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.