Breaking News

ಘನ ತ್ಯಾಜ್ಯ ವಾಹನ ಖರೀದಿಗೆ ಪ್ರತ್ಯೇಕ ಅನುದಾನ ನೀಡಲು ಸಚಿವರಿಗೆ ಮನವಿ

Advt_Headding_Middle

ಘನ ತ್ಯಾಜ್ಯ ವಾಹನ ಖರೀದಿಗೆ ಪ್ರತ್ಯೇಕ ಅನುದಾನ ನೀಡಲು ಸಚಿವ ಎಸ್.ಅಂಗಾರರಿಗೆ ಪೆರುವಾಜೆ ಗ್ರಾಮ ಪಂಚಾಯತ್ ಸದಸ್ಯ ಸಚಿನ್ ರಾಜ್ ಶೆಟ್ಟಿ ಮನವಿ ನೀಡಿದರು.

ಗ್ರಾಮ ಪಂಚಾಯತ್ ಘನತ್ಯಾಜ್ಯ ವಾಹನ ಖರೀದಿಗೆ 15 ನೇ ಹಣಕಾಸು ಯೋಜನೆ ಅನುದಾನ ವನ್ನು ಉಪಯೋಗಿಸಲು ಜಿಲ್ಲಾ ಪಂಚಾಯತ್ ಆದೇಶ ನೀಡಿರುವುದು ಪಂಚಾಯತ್ ಆಡಳಿತವನ್ನು ಹತ್ತಿಕ್ಕುವ ಕಾರ್ಯ ಆಗಿದೆ. ಈಗ ಬಂದಿರುವ ೧೫ ನೇ ಹಣಕಾಸು ಯೋಜನೆಯಲ್ಲಿ ಸಿಬ್ಬಂದಿ ವರ್ಗ ದವರಿಗೆ ಹಣ ಮಿಸಲಿಟ್ಟು ಉಳಿದ ಹಣ ಗ್ರಾಮದ ಅಭಿವೃದ್ಧಿಗೆ ನೀಡುವ ಬದಲು ಘನ ತಾಜ್ಯ ವಾಹನ ಖರೀದಿಗೆ ಬಳಸಿದರೆ ಅಭಿವೃದ್ಧಿ ಕುಂಠಿತ ವಾಗಲಿದೆ ಎಂದು ಇಂದು ಮೀನುಗಾರಿಕಾ ಸಚಿವ ಎಸ್. ಅಂಗಾರರಿಗೆ ಇಂದು ಪೆರುವಾಜೆ ಗ್ರಾಮ ಪಂಚಾಯತ್ ಸದಸ್ಯ ಸಚಿನ್ ರಾಜ್ ಶೆಟ್ಟಿ ಮನವಿ ನೀಡಿದರು.
ಘನ ತ್ಯಾಜ್ಯ ವಾಹನ ಖರೀದಿಗೆ ಪ್ರತ್ಯೇಕ ಅನುದಾನ ನೀಡುವಂತೆ, ಈಗ ಬಂದಿರುವ ಅನುದಾನದಲ್ಲಿ ವಾಹನ ಖರೀದಿ ಕಡ್ಡಾಯ ಮಾಡದಂತೆ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.