ಡಾ| ರೇಣುಕಾ ಪ್ರಸಾದ್ ಕೆ.ವಿ. ಯವರಿಂದ ಕಾಲೇಜಿನ ಬಡ ಸಿಬ್ಬಂದಿಗಳಿಗೆ ಸಹಾಯ ಹಸ್ತ

Advt_Headding_Middle

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್, ಸುಳ್ಯ ಇದರ ಸ್ಥಾಪಕಾಧ್ಯಕ್ಷರಾದ ಡಾ. ಕುರುಂಜಿ ವೆಂಕಟರಮಣ ಗೌಡರ ಪುತ್ರ ಹಾಗೂ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ| ರೇಣುಕಾ ಪ್ರಸಾದ್ ಕೆ.ವಿ.ಯವರು ಕೊರೋನಾ ಸಾಂಕ್ರಾಮಿಕ ಕಾಲಘಟ್ಟದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಔದಾರ್ಯ ಹಾಗೂ ಮಾನವೀಯತೆ ಮೆರೆದಿದ್ದಾರೆ.
ಕೆ.ವಿ.ಜಿ. ಸಮೂಹದ ವಿದ್ಯಾಸಂಸ್ಥೆಗಳ ಪೈಕಿ ಅನುದಾನರಹಿತವಾಗಿರುವ ಡೆಂಟಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್, ಅಮರಜ್ಯೋತಿ ಪಿ.ಯು. ಕಾಲೇಜು ಹಾಗೂ ಇತರ ಸಹ ಸಂಸ್ಥೆಗಳಾದ ಅಮರಜ್ಯೋತಿ ಪ್ರಿಂಟಿಂಗ್ ಪ್ರೆಸ್, ವುಡ್ ಇಂಡಸ್ಟ್ರಿ, ಸುಪರ್ ಮಾರ್ಕೆಟ್ ಮೊದಲಾದವುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ೧೫೦ಕ್ಕೂ ಅಧಿಕ ಬಿ.ಪಿ.ಎಲ್. ಕಾರ್ಡುದಾರ ಬಡ ಸಿಬ್ಬಂದಿ ವರ್ಗಕ್ಕೆ ತಲಾ ೨೫ ಕೆ.ಜಿ. ಅಕ್ಕಿಯನ್ನು ಉಚಿತವಾಗಿ ವಿತರಿಸಿದ್ದಾರೆ. ಅಲ್ಲದೆ ಇದೇ ಕ್ಯಾಂಪಸ್‌ನಲ್ಲಿ ವಿದ್ಯಾರ್ಜನೆಗೈವ ಎಲ್ಲಾ ಸಿಬ್ಬಂದಿಗಳ ಮಕ್ಕಳಿಗೆ ಶುಲ್ಕ ವಿನಾಯಿತಿ ನೀಡಿರುತ್ತಾರೆ. ಕೆ.ವಿ.ಜಿ. ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಸಮಾಜದ ಎಲ್ಲ ಬಿ.ಪಿ.ಎಲ್. ಕಾರ್ಡುದಾರರ ಮಕ್ಕಳಿಗೂ ಶೇ.೫೦ರಷ್ಟು ಮತ್ತು ಕೆ.ವಿ.ಜಿ. ಅಮರಜ್ಯೋತಿ ಪಿ.ಯು ಕಾಲೇಜ್‌ನಲ್ಲಿ ಶೇ.೨೫ರಷ್ಟು ಬೋಧನಾ ಶುಲ್ಕದಲ್ಲಿ ವಿನಾಯಿತಿ ಘೋಷಿಸಿದ್ದಾರೆ.
ಕೊರೋನಾದಿಂದಾಗಿ ಕ್ಯಾಂಪಸ್‌ನ ವಿದ್ಯಾಸಂಸ್ಥೆಗಳಲ್ಲಿ ಸರಕಾರದ ಆದೇಶದಂತೆ ಆನ್‌ಲೈನ್ ತರಗತಿಗಳು ನಡೆಯುತ್ತಿರುವುದರಿಂದ ಕೆಲಸವಿಲ್ಲದೆ ಮನೆಯಲ್ಲೇ ಉಳಿಯಬೇಕಾದ ಪರಿಸ್ಥಿತಿ ಎದುರಿಸುತ್ತಿರುವ ಬಡ ಬೋಧಕೇತರ ಸಿಬ್ಬಂದಿಗಳಿಗೂ ತಲಾ ೨೫ ಕೆ.ಜಿ. ಅಕ್ಕಿಯನ್ನು ಉಚಿತವಾಗಿ ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಇವರು ತಮ್ಮ ಸಂಸ್ಥೆಗಳ ಸಿಬ್ಬಂದಿಗಳಿಗೆ ಉಪಯೋಗವಾಗುವಂತೆ ಕೊರೋನಾ ಕಿಟ್‌ಗಳನ್ನು ಕೂಡಾ ಉಚಿತವಾಗಿ ವಿತರಣೆ ಮಾಡಿದರು.

ಮನೆ ಮನೆಗೆ ತೆರಳಿ ಉಚಿತ ಅಕ್ಕಿ ಹಾಗೂ ಕೊರೋನಾ ಕಿಟ್‌ಗಳನ್ನು ಕಛೇರಿ ಸಿಬ್ಬಂದಿಗಳ ಮುಖಾಂತರ ಹಂಚಿಕೆ ಮಾಡಿರುವ ಡಾ ರೇಣುಕಾ ಪ್ರಸಾದ್‌ರವರ ಈ ಸಮಾಜಮುಖಿ ಸೇವಾಕಾರ್ಯಗಳಿಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದ್ದು, ಈ ಎಲ್ಲ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರುಗಳು, ಬೋಧಕ-ಬೋಧಕೇತರ ಸಿಬ್ಬಂದಿಗಳು ಮತ್ತು ಇತರ ಸಹ ಸಂಸ್ಥೆಗಳ ಸಿಬ್ಬಂದಿಗಳು ಮೆಚ್ಚುಗೆಯ ನುಡಿಗಳಿಂದ ಶುಭಕೋರಿದರು. 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.