ಸಂವಹನ ಮರುಭೂಮಿಯಂತಾಗಿದೆ

Advt_Headding_Middle

“ಶಾಲೆ ” ಎಂಬುದು ಮಕ್ಕಳ ಸಾಮ್ರಾಜ್ಯದ ನಂದನವನ. ಈ ನಂದನವನದಲ್ಲಿ ಪ್ರತಿಭಾ ಮೊಗ್ಗುಗಳು ಅರಳಲು ಆರಂಭಿಸಿ ಸಮಾಜಕ್ಕೆ ಸುವಾಸನೆಯನ್ನು ಬೀರುತ್ತವೆ. ಆದರೆ ಈ ಕೊರೋನಾ ಮಾರಿಯಿಂದ ಈ ನಂದನವನವು ಗಿಡ ಮರ ಬಳ್ಳಿ ಹೂವುಗಳು ಇಲ್ಲದ ಮರುಭೂಮಿ ತರ ಆಗಿದೆ. ಶಾಲೆಯ ಆವರಣದ ಒಳಗೆ ಕಾಲು ಇಟ್ಟಾಗ ಅಲ್ಲಿ ಕಂಡು ಬರುವುದು ಸೂತಕದ ಛಾಯೆ. ಮನಸಿಗೆ ಬಿಕೋ ಅನ್ನಿಸುತಿದೆ. ಮಕ್ಕಳ ಧ್ವನಿ, ಕಲರವ, ಅವರ ಮುಗ್ಧ ಮನಸು, ನಗುಮುಖವನ್ನು ಕಾಣಲು ತವಕಿಸುತಿದೆ ಎನ್ನ ಮನ.

ಒಂದೂವರೆ ವರ್ಷದಿಂದ ಈ ಜ್ಞಾನ ದೇಗುಲವು ತೆರೆಯದೆ ಇದ್ದುದರಿಂದ ತಾಯಿ ಮಕ್ಕಳ ಮಧುರ ಭಾಂದವ್ಯಕ್ಕೆ ತೊಡಕಾಗಿದೆ. ದಿನವೂ ಹಿಂದೆ ಮುಂದೆ ಸುತ್ತ ಮುತ್ತ ಬರುವ ಮಕ್ಕಳು, ಅವರ ಕೋಮಲ ಮನಸು, ಪರಿಶುದ್ಧ ಪ್ರೀತಿ, ಸ್ನೇಹ, ನಿಷ್ಕಲ್ಮಶ ಮಾತು, ನಗು ಇವೆಲ್ಲವನ್ನು ವಿದ್ಯಾರ್ಥಿಗಳಿಂದ ಶಿಕ್ಷಕರು ಪಡೆಯುವ ಟಾನಿಕ್. ಈಗ ಆ ಟಾನಿಕ್ ಗಳು ಇಲ್ಲದೆ ಶಿಕ್ಷಕರಾದ ನಾವು ಬಹಳಷ್ಟು ನೊಂದು ಹೋಗಿದ್ದೇವೆ. ಆದ್ದರಿಂದ ನನ್ನ ನೆಚ್ಚಿನ ಎಲ್ಲಾ ವಿದ್ಯಾರ್ಥಿಗಳೇ ಬಹುಬೇಗನೆ ನಿಮ್ಮ ಅರಳಿದ ವದನವನ್ನು ನಮ್ಮ ಶಾಲೆಯಲ್ಲಿ ನೋಡಲು ಕಾತರದಿಂದ ಇರುವೆ.

ಮಕ್ಕಳ ಸರ್ವತೋಮುಖ ವಿಕಾಸಕ್ಕೆ ಪೂರಕ ಆಗಬಲ್ಲ, ಅವರ ಆತ್ಮ ಸ್ಥೈರ್ಯ ವನ್ನು, ಮನೋ ನಿಗ್ರಹ ವನ್ನು ಸದೃಢ ಗೊಳಿಸಬಲ್ಲ ನೈತಿಕ ಶಿಕ್ಷಣ ಬೌತಿಕ ಶಿಕ್ಷಣದಲ್ಲಿ ಮಾತ್ರ ದೊರಕುತ್ತದೆ ಹೊರತು Online ಶಿಕ್ಷಣದಲ್ಲಿ ಅಲ್ಲ.

– ಶ್ರೀಮತಿ ಜಯಶ್ರೀ ಕುಕ್ಕೆಟ್ಟಿ
ಶಿಕ್ಷಕಿ, ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸುಳ್ಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.