Breaking News

ಶಾಲೆಯೆಂಬ ದೇಗುಲದಲಿ ಮಕ್ಕಳೆಂಬ ದೇವರಿಲ್ಲ

Advt_Headding_Middle


೨೦೧೯ರ ಮಾರ್ಚ್ ತಿಂಗಳಲಿ ಪರೀಕ್ಷೆ ನಡೆಯುತ್ತಿದ್ದ ಸಮಯ, ಲಾಕ್‌ಡೌನ್ ಎಂಬ ಬರಸಿಡಿಲೆರಗಿತು. ಮಕ್ಕಳೆಲ್ಲಾ ಪರೀಕ್ಷೆ ಅರ್ಧಕ್ಕೆ ನಿಲ್ಲಿಸಿ ಮನೆಗೆ ತೆರಳಿದರು. ಕೊರೊನದ ದೆಸೆಯಿಂದ ಜನಜೀವನ ಅಸ್ತವ್ಯಸ್ತವಾಯಿತು. ಕ್ರೂರಿ ಕೊರೊನಾ ಪ್ರಪಂಚವನ್ನು ಸ್ತಬ್ಧವಾಗಿಸಿತು. ಇದರಿಂದ ನಮ್ಮಂತಹ ಶಿಕ್ಷಕರು ನೊಂದುಬೆAದೆವು. ಕಾನನದೊಳಗೆ ಪಕ್ಷಿಗಳ ಚಿಲಿಪಿಲಿ ಕಿವಿಗೆ ತಂಪೆರೆಯುವAತೆ ಶಾಲೆಯಲ್ಲಿ ಮಕ್ಕಳ ಕಲರವ ನಮ ಮನಕೆ ಮುದನೀಡುತಿತ್ತು. ಕೊರೊನಾ ಬಂದು ಇಂತಹ ಸುಮಧುರ ಕ್ಷಣವನ್ನು ಹಾಳುಗೆಡವಿತು. ಶಾಲೆಯ ಆವರಣದೊಳಗೆ ಕಾಲಿಡುತಿದ್ದಂತೆ ಸುತ್ತಮುತ್ತಲಿನ ವಾತಾವರಣ ಸದಾ ಗಿಜಿಗುಡುತ್ತಿದ್ದುದನ್ನು ನೋಡುತ್ತಿದ ನನಗೆ ಇಂದು ಬಣಗುಡುತ್ತಿರುವ ನಿಶ್ಶಬ್ಧ ವಾತಾವರಣದಲ್ಲಿ ಶಾಲೆಯ ಕಡೆಗೆ ಮುಖ ಮಾಡಲೋ ಬೇಡವೋ ಎಂಬ ಭಾವ ಅವತರಿಸಿದೆ. .ನೀರವ ಮೌನದ ಶಾಲಾ ಆವರಣ ನನ್ನ ಕಣ್ಣಾಲಿಗಳಿಂದ ಹನಿನೀರು ಜಿನುಗಿಸಿದೆ. ಶಾಲೆಗೆ ಬಂದ ತಕ್ಷಣ ಟೀಚರ್, ಟೀಚರ್ ಎನ್ನುತ್ತಾ ಓಡೋಡಿ ಬಂದು ಪಟಪಟನೆಪ್ರಶ್ನೆಗಳ ಸುರಿಮಳೆಗೈಯುವ ಕಾಲ ಎಂದೊದಗುವುದೋ, ಮಕ್ಕಳ ಸುಸ್ವರ ಆಲಿಸಲು ಇನ್ನೆಷ್ಟು ದಿನ ಕಾಯಬೇಕೋ? ಕೊರೊನಾ ಎಂಬ ಮಹಾಮಾರಿಯ ಒದ್ದೋಡಿಸಿ, ಶಾಲೆಗಳ ಬಾಗಿಲು ತೆರೆಸಿ, ಹೊಸ ಹುರುಪಿನೊಡನೆ ಮಕ್ಕಳು ನಲಿಯುತ್ತಾ ಶಾಲೆಗೆ ಬರುವಂತೆ ಮಾಡು ದೇವರೇ…….ಜೀವ ಕಳೆ ತುಂಬಿ ತುಳುಕುತ್ತಿದ ಶಾಲೆ ಇಂದು ಮೌನವಾಗಿದೆ. ಈ ಮೌನ ದೂರವಾಗಿ ಮಕ್ಕಳ ಮುಗ್ಧಪ್ರೀತಿ, ಮಮತೆಯಲ್ಲಿ ತೇಲುತ್ತಾ ಆ ಮಕ್ಕಳ ಭವಿಷ್ಯ ರೂಪಿಸುವ ಸುಂದರಕ್ಷಣಗಳು ಆದಷ್ಟೂ ಬೇಗ ಬರಲಿ, ಅಕ್ಷರ ಮಂದಿರ ತೆರೆದು ಸುಜ್ಞಾನವ ಬಿತಿ ಬೆಳೆಯುವ ಅವಕಾಶ ಶೀಘ್ರವಾಗಿ ದೊರೆಯಲಿ…..
ಭವ್ಯ ಬಿ.
ಸಹಶಿಕ್ಷಕಿ., ಸ.ಹಿ.ಪ್ರಾ.ಶಾಲೆ
ಪಂಬೆತ್ತಾಡಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.