ವಿದ್ಯಾರ್ಥಿಗಳ ಭವಿಷ್ಯಕ್ಕೆ ಮುಳ್ಳಾಗಿರುವ ಕೊರೋನ

Advt_Headding_Middle


ಶಾಲೆ ಎಂಬುದು ಶಿಕ್ಷಕನಿಗೆ ಎರಡನೇ ಮನೆ.ಮನೆಯಿಂದ ಹೊರಟ ಶಿಕ್ಷಕ ಶಾಲೆಗೆ ತಲುಪಿದಾಗ ತನ್ನೆಲ್ಲ ದುಗುಡಗಳನ್ನು ಮರೆಯುತ್ತಾನೆ.ಮಕ್ಕಳ ಆತ್ಮೀಯ ತೆಯ ನಮಸ್ತೆ ಟೀಚರ್ ಎಂಬ ಪದವೇ ನಮ್ಮನ್ನು ಭಾವನಾತ್ಮಕವಾಗಿಸುತ್ತದೆ ಕರ್ತವ್ಯ ಪ್ರಜ್ಞೆಯನ್ನು ಬಡಿದೆಬ್ಬಿಸುತ್ತದೆ.
ಆದರೆ ಈಗ ಅದಾವುದೂ ಇಲ್ಲ. ಜೂ.೨೧ರಿಂದ ಶಾಲೆಗೆ ಬರುತ್ತಿದ್ದೇವೆ.ನಮ್ಮನ್ನು ಆತ್ಮೀಯ ತೆಯಿಂದ ಸ್ವಾಗತಿಸುವ ಮಕ್ಕಳಿಲ್ಲ.ಶಾಲೆಯಲ್ಲಿ ಮಕ್ಕಳ ಕಿರುಚಾಟ,ನಗು,ಕೂಗು,ಬೆಂಚು ಡೆಸ್ಕ್ ಗಳ ಶಬ್ದ ,ದೂರುಗಳಿಲ್ಲ.ಎಲ್ಲೆಲ್ಲಿಯೂ ನೀರವ ಮೌನ.ಸರಕಾರವೇನೋ ಪರಿಸ್ಥಿತಿ ನಿಭಾಯಿಸಲು ಹಲವು ಕಸರತ್ತುಗಳನ್ನು ಮಾಡುತ್ತಿದೆ.ಪ್ರತಿ ಮಗುವಿಗೂ ಶಿಕ್ಷಣ ದೊರಕಿಸಲು ಹಲವು ಯೋಜನೆಗಳನ್ನು ರೂಪಿಸುತ್ತಿದೆ.ಆದರೆ ಅದನ್ನು ನಾವು ಎಷ್ಟರ ಮಟ್ಟಿಗೆ ತಲುಪಲು ಸಾಧ್ಯ ಎಂಬ ಆತಂಕದಲ್ಲಿ ಇದ್ದೇವೆ.ನಾನು ಸರಕಾರಿ ಮಾದರಿ ಶಾಲೆ suಟಟiಚಿ. ಇಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೇನೆ.ಇಲ್ಲಿ ೫೦% ಮಕ್ಕಳು ದೂರದ ಊರುಗಳಿಂದ ಬಂದು ನೆಲೆಸಿರುವ ಕೂಲಿ ಕಾರ್ಮಿಕರ ಮಕ್ಕಳಿದ್ದಾರೆ.ಈಗ ಅವರಲ್ಲಿ ಹಲವರು ಊರಿಗೆ ವಾಪಸಾಗಿದ್ದಾರೆ. ಮೊಬೈಲ್ ಸಮಸ್ಯೆ,ನೆಟ್ವರ್ಕ್ ಸಮಸ್ಯೆ,ಫೋನ್ ಸ್ವಿಚ್ ಆಫ್ ಮೊದಲಾದ ಹತ್ತು ಹಲವು ಸಮಸ್ಯೆಗಳು ನಮ್ಮ ಮತ್ತು ಅವರ ಸಂಪರ್ಕಕ್ಕೆ ಅಡ್ಡಿಯಾಗಿದೆ.ಇಂಥ ಸಂದರ್ಭದಲ್ಲಿ ಆ ಮಕ್ಕಳನ್ನು ಸಂಪರ್ಕಿಸಿ ನಮ್ಮ ಶಿಕ್ಷಣದ ಗುರಿಗಳನ್ನು ಸಾಧಿಸುವಲ್ಲಿ ನಾವೆಷ್ಟು ಸಫಲರಾಗಬಹುದು ಎಂಬ ಭಯ ನಮ್ಮಲ್ಲಿದೆ.
ಕೊರೋನಾವೆಂಬ ಮಹಾಮಾರಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮುಳ್ಳಾಗಿರುವುದು ತುಂಬಾ ವಿಷಾದನೀಯ. ಕೊರೋನಾ ದೂರವಾಗಿ ಶಾಲೆಗಳು ಪ್ರಾರಂಭವಾದರೆ ಸಕಲ ಸಮಸ್ಯೆಗಳು ಪರಿಹಾರವಾಗ ಬಹುದು.ಆ ದಿನಗಳಿಗಾಗಿ ಎದುರು ನೋಡುತ್ತಿದ್ದೇವೆ.
ಶೀಲಾವತಿ ಬಿ.ಎ.
ಸ.ಮಾ.ಹಿ.ಪ್ರಾ.ಶಾಲೆ ಸುಳ್ಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.