ಶಿಕ್ಷಣ-ಶಿಕ್ಷಕ-ಶಿಷ್ಯ ಒಂದು ಬೆಸುಗೆ

Advt_Headding_Middle

ಕೊರೊನಾ ಎಂಬ ಮಹಾಮಾರಿ, ಕಣ್ಣಿಗೆ ಕಾಣದ ವೈರಸ್ ನ ಆಟದಿಂದ, ಇಡೀ ಪ್ರಪಂಚ ಕಳೆದ ವರ್ಷದಿಂದಲೂ ಒಮ್ಮೆಗೇ ಸ್ತಬ್ಧವಾದಂತಾಗಿ, ಮತ್ತೆ ಚೇತರಿಕೆ ಕಂಡುಕೊAಡಿತು. ನಮ್ಮ ಪಾಲಿಟೆಕ್ನಿಕ್ ನ ವಿದ್ಯಾರ್ಥಿಗಳಿಗೆ, ಪ್ರಾಯೋಗಿಕ ಪರೀಕ್ಷೆಗಳು ಮುಗಿದು, ಥಿಯರಿ ಪರೀಕ್ಷೆ ನಡೆಯುವಷ್ಟರಲ್ಲಿ ಕೊರೊನಾ ಮತ್ತೆ ಈ ವರ್ಷ ವಕ್ಕರಿಸಿ, ಲಾಕ್‌ಡೌನ್ ಆಯಿತು. ಇನ್ನೂ ಆ ಪರೀಕ್ಷೆಗಳ ಬಗ್ಗೆ ಸರ್ಕಾರ ಏನೂ ತೀರ್ಮಾನ ಕೈಗೊಂಡಿಲ್ಲ. ಹೀಗಿರುವಾಗ ಮುಂದಿನ ಸೆಮಿಸ್ಟರ್ ವಿಷಯಗಳಿಗೆ ಆನ್ಲೈನ್ ನಲ್ಲಿ ಪಾಠ ಮಾಡಿ ಎಂದಿದ್ದಾರೆ. ಹಾಗೆ ಮಾಡುತ್ತಿದ್ದೇವೆ.
ಸಮಸ್ಯೆ ಏನೆಂದರೆ, ಈ ವರ್ಷದಿಂದಲೇ ಕಳೆದ ವರ್ಷ ಅಡ್ಮಿಷನ್ ಆದ ವಿದ್ಯಾರ್ಥಿಗಳಿಗೆ, ಸಿಲೆಬಸ್ ಬದಲಾವಣೆ ಆಗಿ, ಇಂಜಿನಿಯರಿAಗ್ ಗಿಂತಲೂ, ಪಾಲಿಟೆಕ್ನಿಕ್ ನಲ್ಲಿ ಪ್ರಾಯೋಗಿಕ ವಿಷಯಗಳಿಗೆ ಹೆಚ್ಚು ಮಹತ್ವ ಕೊಟ್ಟಿದ್ದಾರೆ. ವಿದ್ಯಾರ್ಥಿಗಳು ಆನ್‌ಲೈನ್, ಆಫ್‌ಲೈನ್ ಅಂತ ಗಲಿಬಿಲಿಗೊಂಡು, ಇನ್ನೂ ಗೊಂದಲದಲ್ಲೇ ಕಾಲ ಕಳೆಯುತ್ತಿದ್ದಾರೆ. ಉಪನ್ಯಾಸಕರುಗಳು ಸಹ ಬದಲಾದ ಸಿಲೆಬಸ್ ನಿಂದ ಸರಿಯಾದ ಮಾಹಿತಿ ಸಿಗದೆ, ಇತ್ತ ಪಾಠ ಸರಿಯಾಗಿ ಮಾಡಲಾಗದೆ ಸಂಕಷ್ಟದಲ್ಲಿದ್ದಾರೆ.
ಏನೇ ಆಗಲಿ, ಹಾಜರಾತಿ ಪುಸ್ತಕ ಹಿಡಿದು, ಡಸ್ಟರ್ ಚಾಕ್ ಪೀಸ್ ಹಿಡಿದುಕೊಂಡು ಕ್ಲಾಸ್ ಗೆ ಹೋಗೋ ಮಜಾನೇ ಬೇರೆ. ಸಮವಸ್ತ್ರ ಧರಿಸಿರೋ ವಿದ್ಯಾರ್ಥಿಗಳು ನಮ್ಮ ಕಾಲೇಜಿನಲ್ಲಿ ನೋಡಿದರೆ ಏನೋ ಒಂದು ಖುಷಿ. ಅವರನ್ನು ಕರೆದ ತಕ್ಷಣ ಬಂದು ತೋರೋ ವಿನಯ, ಏನು ಬೈದರೂ ಸುಮ್ಮನೆ ನಿಲ್ಲುವ ಭಾವ, ಈಗ ವಿದ್ಯಾರ್ಥಿಗಳು ಇಲ್ಲದೇ, ಕಾಲೇಜುಗಳೆಲ್ಲಾ ಬಿಕೋ ಎನ್ನುತ್ತಾ, ಹಾಳೂರ ಪಾಳು ದೇಗುಲದ ಜಾಗಟೆಯಂತಾಗಿ, ಕೂಗಿ ಕರೆಯುವವರಿಲ್ಲ, ಕರೆದರೂ ಕೇಳುವವರಿಲ್ಲ ಎನ್ನುವಂತೆ, ದೇವಸ್ಥಾನಗಳಲ್ಲಿ ದೇವರೇ ಇಲ್ಲದಂತಾಗಿದೆ. ಅವರಿದ್ದರೆ ಮಾತ್ರ ನಮಗೆ ಬೆಲೆ. ರೋಗಿಗಳಿಲ್ಲದೆ ಹೋದರೆ ಹೇಗೆ, ಡಾಕ್ಟರ್ ಗಳಿಗೆ ಬೆಲೆ ಇಲ್ಲವೋ ಹಾಗೆಯೇ, ವಿದ್ಯಾರ್ಥಿಗಳು ಇಲ್ಲದೆ ಹೋದರೆ ಶಿಕ್ಷಕರಿಗೆ ಕೈ ಕಾಲುಗಳೇ ಬರದಂತಾಗಿದೆ. ಎಲ್ಲರ ನಿತ್ಯ ಜೀವನಕ್ರಮಗಳೇ ಗೊತ್ತಿಲ್ಲದೇ ಬದಲಾಗಿವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಈ ಹೊಸ ಆನ್ಲೈನ್ ಶಿಕ್ಷಣಕ್ಕೆ ಒಗ್ಗಿಲ್ಲದ ಮನಸ್ಸಿನಿಂದ ಒಪ್ಪಲೇಬೇಕಾದ ಪರಿಸ್ಥಿತಿ ಬಂದಿದೆ. ಎಷ್ಟೋ ಶಿಕ್ಷಕರು ನಿವೃತ್ತಿ ಅಂಚಿನಲ್ಲಿರುವಾಗ, ಹೊಸ ಹೊಸ ಆಪ್ ಗಳನ್ನು ಡೌನ್ಲೋಡ್ ಮಾಡಿಕೊಂಡು, ಅದನ್ನೆಲ್ಲಾ ಕಲಿತು, ಪಾಠ ಮಾಡುವ ಸಂಯಮ ಬೆಳೆಸಿಕೊಂಡಿರೋದು, ನಿಜಕ್ಕೂ ಒಂದು ಸವಾಲೇ ಸರಿ.
ಈ ಕೊರೊನಾ ಎಷ್ಟೋ ಜನರ ಅಹಂಕಾರ ಅಡಗಿಸಿದೆ. ಎಷ್ಟೋ ಜನರು ಪಾಠ ಕಲಿತು, ಪ್ರೀತಿ, ವಿಶ್ವಾಸದಿಂದ ಇರೋದನ್ನು ಕಲಿಸಿರೋದಂತೂ ಸತ್ಯ. ನನಗೆ ಇನ್ನು ೯ ತಿಂಗಳು ನಿವೃತ್ತಿಗೆ ಬಾಕಿ ಇರೋ ಸಮಯದಲ್ಲಿ, ವಿದ್ಯಾರ್ಥಿಗಳ ಜೊತೆಗೆ ಒಡನಾಟ ಇದ್ದರೆ ದೇವರಿಗೆ ಧನ್ಯ. ತಂದೆ, ತಾಯಿ, ಮಕ್ಕಳೆಲ್ಲಾ ಒಟ್ಟಿಗಿದ್ದಷ್ಟೇ ಪುಣ್ಯ.

ಮಧುಕುಮಾರ್ ಬಿ.ಆರ್.
ಆಯ್ಕೆ ಶ್ರೇಣಿ ಉಪನ್ಯಾಸಕರು,
ಮೆಕ್ಯಾನಿಕಲ್ ವಿಭಾಗ,
ಕೆ ವಿ ಜಿ ಪಾಲಿಟೆಕ್ನಿಕ್,
ಸುಳ್ಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.