ಕೋವಿಡ್ ಲಸಿಕೆ ಕೆ.ವಿ.ಜಿ. ಪುರಭವನದಲ್ಲಿ ನಿಲ್ಲಿಸಬೇಡಿ – ಮುಂದುವರೆಸಿ

Advt_Headding_Middle

 

ತಾಲೂಕು ವೈದ್ಯಾಧಿಕಾರಿಗಳಿಗೆ ಸಚಿವರ ಸೂಚನೆ

ಸುಳ್ಯದ ಕೆ.ವಿ.ಜಿ. ಪುರಭವನದಲ್ಲಿ ಕೋವಿಡ್ ಲಸಿಕೆ ನಿಲ್ಲಿಸಬಾರದು. ಅಲ್ಲಿ ಮುಂದುವರೆಸಿ ಎಂದು ಸಚಿವ ಎಸ್.ಅಂಗಾರ, ತಾಲೂಕು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇಂದು ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮೆಷಿನ್ ಉದ್ಘಾಟನೆ ಆಗಮಿಸಿದ ಸಚಿವರು ವೈದ್ಯಾಧಿಕಾರಿ ಗಳಿಗೆ ಈ ಸೂಚನೆ ನೀಡಿದರು.

ನಗರ ಪಂಚಾಯತ್ ಅಧ್ಯಕ್ಷ ವಿನಯ ಕಂದಡ್ಕರು ಡಾ.ನಂದಕುಮಾರ್ ರಲ್ಲಿ ಇಂದು ಕೆ.ವಿ.ಜಿ. ಪುರಭವನದಲ್ಲಿ ಲಸಿಕೆ ಇಲ್ಲದಿರುವುದರಿಂದ ಆದ ಸಮಸ್ಯೆಯ ಕುರಿತು ಹೇಳುತ್ತಿದ್ದಾಗ, ಈ ವಿಷಯ ಸಚಿವ ಅಂಗಾರರಿಗೆ ಗೊತ್ತಾಯಿತು. ಡಾ.ನಂದಕುಮಾರ್ ರಲ್ಲಿ ಈ ಕುರಿತು ಪ್ರಶ್ನಿಸಿದರು. “ಇಂದು ಸುಳ್ಯ ವ್ಯಾಪ್ತಿಯಲ್ಲಿ ಬೀರಮಂಗಲ ವಾರ್ಡ್ ನಲ್ಲಿ ಲಸಿಕೆ ಇದೆ. ಬೆಳ್ಳಾರೆ ಇತರ ಕಡೆಯಲ್ಲಿ ನೀಡಲಾಗುತ್ತಿದೆ ಎಂದು ಡಾ.ನಂದಕುಮಾರ್ ಸಚಿವರಿಗೆ ಹೇಳಿದಾಗ, “ನೀವು ಉಳಿದ ಎಲ್ಲ ಕಡೆ ಕೊಡಿಸುವ ವ್ಯವಸ್ಥೆ ಒಳ್ಳೆಯದೇ. ಹಾಗೆಂದು ಪ್ರಮುಖ ಕೇಂದ್ರ ವಾಗಿರುವ ಪುರಭವನದಲ್ಲಿ ಲಸಿಕೆ ವಿತರಣೆ ನಿಲ್ಲಬಾರದು. ಅದನ್ನು ಮುಂದುವರಿಸಿ ಎಂದು ಸೂಚನೆ ನೀಡಿದರು.

ಇಂದು ಪುರಭವನದಲ್ಲಿ ಲಸಿಕೆ ಇಲ್ಲ. ಅಲ್ಲಿಗೆ ಬಂದವರು ಬೀರಮಂಗಲದಲ್ಲಿ ಲಸಿಕೆ ಕೊಡುವುದು ಗೊತ್ತಾಗಿ ಅಲ್ಲಿಗೆ ಹೋಗುತ್ತಿದ್ದಾರೆ. ನಮಗೆ ಕಾಲ್ ಬರುತ್ತಿದೆ ಎಂದು ವಿನಯ ಕಂದಡ್ಕರು ಹೇಳಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.