ಕಲ್ಮಡ್ಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶಶಿಕಲಾ ನಿವೃತ್ತಿ

Advt_Headding_Middle

ಕಲ್ಮಡ್ಕ ಸ.ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶಶಿಕಲಾ ಕೆ. ಜೂ. 30ರಂದು ವಯೋನಿವೃತ್ತಿ ಹೊಂದಿದ್ದಾರೆ.
ಕುಂಜರ್ಕಾನ ನಾರಾಯಣ ಭಟ್ ಹಾಗೂ ಸೌಭದ್ರಮ್ಮ ದಂಪತಿಯ ಪುತ್ರಿಯಾಗಿ 1961. ಜೂ. 15ರಂದು ಜನಿಸಿದ ಶಶಿಕಲಾರವರು 1ರಿಂದ 5ನೇ ತರಗತಿ ವಿದ್ಯಾಭ್ಯಾಸವನ್ನು ಬೊಳುಬೈಲ್ ಕಿ.ಪ್ರಾ. ಶಾಲೆಯಲ್ಲಿ, 5ರಿಂದ 7ನೇ ತರಗತಿ ವಿದ್ಯಾಭ್ಯಾಸವನ್ನು ಸ್ವಾಮಿ ವಿವೇಕಾನಂದ ಅಪ್ಪರ್ ಪ್ರೈಮರಿ ಸ್ಕೂಲ್ ಸ್ವರ್ಗದಲ್ಲಿ ಪೂರೈಸಿ, ಪ್ರೌಢ ಶಿಕ್ಷಣವನ್ನು ಸುಳ್ಯದ ಜೂನಿಯರ್ ಕಾಲೇಜಿನಲ್ಲಿ ಪಡೆದರು. ಶಿಕ್ಷಕ ತರಬೇತಿಯನ್ನು ಮಡಿಕೇರಿಯ ಶಿಕ್ಷಕ ತರಬೇತಿ ಕೇಂದ್ರದಲ್ಲಿ ಪಡೆದು 1991ರ‌ ಆಗಷ್ಟ್ 26ರಂದು ಪುತ್ತೂರು ತಾಲೂಕಿನ ಕುದ್ಮಾರು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿದರು. 1995ರ ಜೂ. 6ರಂದು ಅಯ್ಯನಕಟ್ಟೆ ಸ.ಹಿ.ಪ್ರಾ. ಶಾಲೆಗೆ ವರ್ಗಾವಣೆಗೊಂಡರು. 2018ರ ಜೂನ್ ನಲ್ಲಿ ಅಯ್ಯನಕಟ್ಟೆಯಿಂದ ಕಲ್ಮಡ್ಕ ಸ.ಹಿ.ಪ್ರಾ. ಶಾಲೆಗೆ ವರ್ಗಾವಣೆಗೊಂಡು 2021ರ ಜೂ. 30ರಂದು ನಿವೃತ್ತಿಗೊಂಡರು. ಸ್ಕೌಟ್ ಗೈಡ್ಸ್ ವಿಭಾಗದಲ್ಲಿ ಗುರುತಿಸಿಕೊಂಡಿದ್ದ ಇವರು 2000ನೇ ವರ್ಷದಲ್ಲಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರ ಪತಿ ಭಾಸ್ಕರ ರಾವ್ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುತ್ತಾರೆ. ಪುತ್ರಿ ಸ್ಮಿತಾ ಬಾಳಿಲ‌ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.